ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಇಂದು ಸರ್ಕಾರ್' ಸಿನಿಮಾ ಕಾಂಗ್ರೆಸ್ ನಾಯಕರ ಭಾವನೆಗಳಿಗೆ ನೋವುಂಟು ಮಾಡಲಿದೆ, ಪ್ರಧಾನಿ ಮೋದಿ ಅದನ್ನೇ ಬಯಸುತ್ತಿದ್ದಾರೆ

Last Updated 23 ಜುಲೈ 2017, 12:10 IST
ಅಕ್ಷರ ಗಾತ್ರ

ನವದೆಹಲಿ: 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತ ಸಿನಿಮಾ ಇಂದು ಸರ್ಕಾರ್ ಕಾಂಗ್ರೆಸ್ ನಾಯಕರ ಭಾವನೆಗಳಿಗೆ ನೋವುಂಟು ಮಾಡಲಿದೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಬಯಸುತ್ತಿರುವುದು ಅದನ್ನೇ ಎಂದು ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ಖ್ಯಾತ ನಿರ್ದೇಶಕ ಮಧುರ್ ಭಂಡಾರ್ಕರ್ ನಿರ್ದೇಶಿಸಿರುವ 1975-77ರ ತುರ್ತು ಪರಿಸ್ಥಿತಿ ಆಧಾರಿತ ಸಿನಿಮಾ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದಿದ್ದು ಕಾಂಗ್ರೆಸ್, ಚಿತ್ರ ಪ್ರದರ್ಶನವಾಗಬಾರದೆಂದು ಪ್ರತಿಭಟಿಸಿದೆ.

1975ರ ಕಾಲವನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. 1975ರಿಂದ 77ರ ಕಾಲಘಟ್ಟದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧರಿಸಿದ ಸಿನಿಮಾ ಇದಾಗಿದ್ದು, ಇಂದಿರಾಗಾಂಧಿ, ಸಂಜಯ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ತೋರಿಸಲಾಗಿದೆ.

ಆದಾಗ್ಯೂ, ಈ ಸಿನಿಮಾ ಕಾಲ್ಪನಿಕ ಎಂದು ತಾನು ಡಿಸ್‍ಕ್ಲೈಮರ್ ಹಾಕುವುದಾಗಿ ಮಧುರ್ ಭಂಡಾರ್ಕರ್ ಹೇಳಿದ್ದಾರೆ.

ಸಿನಿಮಾ ಕಾಂಗ್ರೆಸ್ ನಾಯಕರ ಭಾವನೆಗೆ ನೋವುಂಟು ಮಾಡುತ್ತದೆ. ಕೊನೆಯಲ್ಲಿ ನರೇಂದ್ರ ಮೋದಿಯವರಿಗೂ ಇದು ನೋವುಂಟು ಮಾಡಬಹುದು
ಈ ರೀತಿಯ ಚಟುವಟಿಕೆಗಳು ಬಿಜೆಪಿಗೆ ಕುಂದು ಉಂಟು ಮಾಡಲು ಸಹಾಯ ಮಾಡುತ್ತದೆ. ಈ ರೀತಿ ಬಿಜೆಪಿಯವರು ಮಾಡುತ್ತಲೇ ಇದ್ದರೆ ಅವರು ಹಿಂಬಾಗಿಲಿನಿಂದ ಹೋಗಬೇಕಾಗುತ್ತದೆ ಎಂದು ಮೊಯ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT