ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್

Last Updated 23 ಜುಲೈ 2017, 19:30 IST
ಅಕ್ಷರ ಗಾತ್ರ

1) ಕರ್ನಾಟಕದಲ್ಲಿ ಪತ್ತೆಯಾಗಿರುವ ಪ್ರಾಚೀನ ಶಿಲಾಯುಗದ ನೆಲೆಗಳನ್ನು ಈ ಕೆಳಕಂಡ ಸ್ಥಳಗಳಲ್ಲಿ ಗುರುತಿಸಿ.

a) ಕರಡಿ ಗುಡ್ಡ (ಹಾಸನ)

b) ಲಿಂಗದಹಳ್ಳಿ (ಚಿಕ್ಕಮಗಳೂರು)

c) ನಿಟ್ಟೂರು (ಬಳ್ಳಾರಿ)

d) ಈ ಮೇಲಿನ ಎಲ್ಲವೂ

**

2) ಗಾಯತ್ರೀಮಂತ್ರ ಮತ್ತು ಪುರುಷಸೂಕ್ತ ಯಾವ ವೇದದಲ್ಲಿ ಕಂಡುಬರುತ್ತವೆ?

a) ಋಗ್ವೇದ

b) ಸಾಮವೇದ

c) ಯಜುರ್ವೇದ

d) ಅಥರ್ವಣವೇದ

**

3) ಮೊದಲ ಜೈನ ಮಹಾಸಭೆ ಪಾಟಲೀಪುತ್ರದಲ್ಲಿ ನಡೆದರೆ, ಎರಡನೇ ಜೈನ ಮಹಾಸಭೆ ಎಲ್ಲಿ ನಡೆಯಿತು?

a) ವಲ್ಲಭಿ

b) ವೈಶಾಲಿ

c) ರಾಜಗೃಹ

d) ಗಯಾ

**

4) ಗುಪ್ತರ ಕಾಲದಲ್ಲಿದ್ದ ಪ್ರಸಿದ್ಧ ವಿಜ್ಞಾನಿಯನ್ನು ಗುರುತಿಸಿ.

a) ಭಾರವಿ

b) ವಾತ್ಸ್ಯಾಯನ

c) ಆರ್ಯಭಟ

d) ಕುಮಾರಗುಪ್ತ

**

5. ಕ್ರಿ.ಶ. 1498ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಪೋರ್ಚುಗೀಸರ ವಸಾಹತು ನೆಲೆಗಳನ್ನು ಗುರುತಿಸಿ.

a) ಸಾಲ್ಸೆಟ್

b) ಗೋವಾ

c) ಕಣ್ಣಾನೂರು

d) ಮೇಲಿನ ಎಲ್ಲವೂ

**

6)ತಮಿಳುನಾಡಿನ ನಾಗಪಟ್ಟಣವನ್ನು ರಾಜಧಾನಿ ಯನ್ನಾಗಿ ಮಾಡಿಕೊಂಡಿದ್ದ ಯುರೋಪಿಯನ್ನರು ಯಾರು?

a) ಬ್ರಿಟಿಷರು

b) ಪೋರ್ಚುಗೀಸರು

c) ಡಚ್ಚರು

d) ಫ್ರೆಂಚರು

**

7) ಫ್ರೆಂಚರು ಮತ್ತು ಬ್ರಿಟಿಷರ ಸಾರ್ವಭೌಮತ್ವಕ್ಕಾಗಿ ದಕ್ಷಿಣ ಭಾರತದಲ್ಲಿ ನಡೆದ ಯುದ್ಧಗಳು ಯಾವುವು?

a) ಕರ್ನಾಟಿಕ್ ಯುದ್ಧಗಳು

b) ಮೈಸೂರು ಯುದ್ಧಗಳು

c) ಮರಾಠ ಯುದ್ಧಗಳು

d) ಸುಲ್ತಾನರ ಯುದ್ಧಗಳು

**

8)  ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಬಂದದ್ದು ಯಾವಾಗ?

a) 1948

b) 1915

c) 1955

d) 1920

**

9) ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು ಯಾರು?

a) ಗಾಂಧೀಜಿ

b) ಬಾಲಗಂಗಾಧರ್ ತಿಲಕ್

c) ಬಿ. ಆರ್. ಅಂಬೇಡ್ಕರ್

d) ಸುಭಾಷ್ ಚಂದ್ರ ಬೋಸ್

**

10) ಈ ಕೆಳಕಂಡ ದಂಗೆಗಳಲ್ಲಿ ಬ್ರಿಟಿಷರ ವಿರುದ್ಧ ನಡೆದ ಬುಡಕಟ್ಟು ದಂಗೆಗಳನ್ನು ಗುರುತಿಸಿ?

a) ಸಂತಾಲರ ದಂಗೆ (ಬಿಹಾರ)

b) ಬಿಲ್ಲರ ದಂಗೆ (ರಾಜಸ್ತಾನ)

c) ಕೋಲರ ದಂಗೆ (ನಾಗಪುರ)

d) ಮೇಲಿನ ಎಲ್ಲವೂ

**

ಉತ್ತರಗಳು 1-d, 2-a, 3- a, 4-c, 5-d, 6-c, 7-a, 8-b, 9-c, 10-d.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT