ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ– ಪೇಮೆಂಟ್‌: ಎ.ಪಿ.ಎಂ.ಸಿ ಬಂದ್ ಇಂದಿನಿಂದ

Last Updated 24 ಜುಲೈ 2017, 8:08 IST
ಅಕ್ಷರ ಗಾತ್ರ

ಗಜೇಂದ್ರಗಡ: ಗದಗ ಜಿಲ್ಲೆ ಎ.ಪಿ.ಎಂ.ಸಿ. ಗಳಲ್ಲಿ ಪ್ರಾಯೋಗಿಕವಾಗಿ ಇ– ಪೇಮೆಂಟ್ ವ್ಯವಸ್ಥೆ ಜಾರಿ ವಿರೋಧಿಸಿ ಇಲ್ಲಿನ ಎ.ಪಿ.ಎಂ.ಸಿ. ವರ್ತಕರು ಸೋಮವಾರ ದಿಂದ ಅನಿರ್ದಿಷ್ಟಾವಧಿ ಬಂದ್ ಆಚ ರಿಸಲಿದ್ದಾರೆ ಎಂದು ವರ್ತ ಕರ ಸಂಘದ ಕಾರ್ಯದರ್ಶಿ ಈಶಪ್ಪ ಮ್ಯಾಗೇರಿ ಅವರು ತಿಳಿಸಿದರು.

ಭಾನುವಾರ ಎ.ಪಿ.ಎಂ.ಸಿ.ಯಲ್ಲಿ ನಡೆದ ವರ್ತಕರ ಸಭೆಯಲ್ಲಿ ಅವರು ಮಾತನಾಡಿದರು. ಇ–ಪೇಮೆಂಟ್‌ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಗದಗ ಜಿಲ್ಲೆಯಲ್ಲಿ ಜಾರಿಗೆ ತರಲು ಹೊರಟಿರುವದು ಖಂಡ ನಾರ್ಹ. ಇದರಿಂದ ರೈತರು, ವರ್ತಕರು, ಖರೀದಿದಾರರು ಸಂಕಷ್ಟ ಅನುಭವಿಸಲಿದ್ದಾರೆ.

ಇದರಿಂದ ರೈತರ ಮತ್ತು ದಲಾ ಲರಲ್ಲಿ ಬಿರುಕು ಮೂಡಲಿದೆ. ಈ ಪದ್ಧತಿ ಯಿಂದ ರೈತನ ಅನುವು– ಆಪತ್ತುಗಳಿಗೆ ಸಿಗುವ ಮುಂಗಡ ಹಣಕ್ಕೆ ಕುತ್ತು ಒದಗಿ ಬರಲಿದೆ.  ಹೀಗಾಗಿ, ಈ ಪದ್ಧತಿಯನ್ನು ಕೈಬಿಡುವಂತೆ ಈಗಾಗಲೇ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಶಾಸಕ ರಾಮ ಕೃಷ್ಣ ದೊಡ್ಡಮನಿ ಅವರ ಜತೆ ಕೃಷಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಕಂಡು ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡದರು.

ಸಚಿವ ಎಚ್.ಕೆ.ಪಾಟೀಲ ಕೂಡ ಈ ನಿರ್ಣಯವನ್ನು ಪುನರ್ ಪರಿಶೀಲಿಸುವ ಭರವಸೆ ನೀಡಿದ್ದಾರೆ. ಆದರೂ ಸರ್ಕಾರ ಈ ನಿರ್ಣಯವನ್ನು ಹಿಂಪಡೆದಿರುವ ಕುರಿತು ಅಧಿಕೃತವಾಗಿ ಪ್ರಕಟಿಸುವವರೆಗೆ ಗಜೇಂದ್ರಗಡ ಎ.ಪಿ.ಎಂ.ಸಿ.ಯಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಆಚರಿಸಲಾಗುವುದು ಎಂದು ಅವರು ಹೇಳಿದರು.

ಸಭೆಯಲ್ಲಿ ಎ.ಪಿ.ಎಂ.ಸಿ. ವರ್ತಕರ ಸಂಘದ ಅಧ್ಯಕ್ಷ, ಎ.ಪಿ.ಎಂ.ಸಿ. ಸದಸ್ಯ ಅಮರೇಶ ಬಳಿಗೇರ, ಉಪಾಧ್ಯಕ್ಷ ಎಸ್.ಎಸ್.ಚೋಳಿನ, ಚನ್ನಬಸಪ್ಪ ವಾಲಿ, ವೀರಪ್ಪ ಸಂಗನಾಳ, ಪಂಪನಗೌಡ ಸಿನ್ನೂರ, ಶಿವಪ್ಪ ಸಂಗನಾಳ, ವಿರೇಶ ನಂದಿಹಾಳ, ಕಳಕಪ್ಪ ಪಟ್ಟಣಶೆಟ್ಟಿ ಇತರ ವರ್ತಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT