ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಐಸಿಸಿ ಮಹಿಳಾ ವಿಶ್ವಕಪ್ ಇಲೆವೆನ್‌’ ತಂಡಕ್ಕೆ ಮಿಥಾಲಿ ರಾಜ್ ನಾಯಕಿ: ಪ್ರಶಸ್ತಿ ಸೋತರೂ ಒಲಿಯಿತು ಗೌರವ

Last Updated 25 ಜುಲೈ 2017, 10:32 IST
ಅಕ್ಷರ ಗಾತ್ರ

ಲಂಡನ್‌: ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಅವರನ್ನು ‘ಐಸಿಸಿ ಮಹಿಳಾ ವಿಶ್ವಕಪ್ ಇಲೆವೆನ್‌’ ತಂಡದ ನಾಯಕಿಯನ್ನಾಗಿ ಆಯ್ಕೆ ಮಾಡಿದೆ.

ಮಿಥಾಲಿ ನೇತೃತ್ವದ ಭಾರತ ತಂಡ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಫೈನಲ್‌ ಪ್ರವೇಶಿಸಿತ್ತು. ಈ ಪಂದ್ಯದಲ್ಲಿ ಬಲಿಷ್ಟ ಇಂಗ್ಲೆಂಡ್‌ ಎದುರು 9ರನ್‌ ಗಳ ಅಲ್ಪ ಅಂತರದಿಂದ ಸೋಲುಕಂಡಿತ್ತು. ಪಂದ್ಯಾವಳಿಯುದ್ದಕ್ಕೂ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವುದರೊಟ್ಟಿಗೆ ವೈಯಕ್ತಿಕವಾಗಿಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮಿಥಾಲಿ, ತಂಡದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದ್ದರು. ಜತೆಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದರು.

ನಾಲ್ಕರ ಘಟ್ಟ ತಲುಪಲು ನಿರ್ಣಾಯಕವಾಗಿದ್ದ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಜತೆಗೆ, ಸೆಮಿಫೈನಲ್‌ನಲ್ಲಿ ಆರು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಹೀಗಾಗಿ ಭಾರತ ತಂಡದ ನಾಯಕಿಯನ್ನು ‘ಐಸಿಸಿ ಮಹಿಳಾ ವಿಶ್ವಕಪ್ ಇಲೆವೆನ್‌’ ತಂಡಕ್ಕೂ ನಾಯಕಿನಯನ್ನಾಗಿ ಆಯ್ಕೆ ಮಾಡಲಾಗಿದೆ.

‘ಐಸಿಸಿ ಮಹಿಳಾ ವಿಶ್ವಕಪ್ ಇಲೆವೆನ್‌’ ತಂಡದಲ್ಲಿರುವ ಆಟಗಾರ್ತಿಯರು

ಭಾರತ
ಮಿಥಾಲಿ ರಾಜ್‌(409ರನ್‌)

ದೀಪ್ತಿ ಶರ್ಮಾ(216ರನ್‌, 12ವಿಕೆಟ್‌)

ಹರ್ಮನ್‌ಪ್ರೀತ್‌ ಕೌರ್‌(359ರನ್‌)

ಇಂಗ್ಲೆಂಡ್‌

ಸರಣಿ ಶ್ರೇಷ್ಠ ಆಟಗಾರ್ತಿ– ತಮ್ಸೀನ್‌ ಬ್ಯೂಮೌಂಟ್‌(410ರನ್‌)

ಫೈನಲ್‌ ಪಂದ್ಯದ ಪಂದ್ಯ ಶ್ರೇಷ್ಠ ಆಟಗಾರ್ತಿ – ಅನ್ಯಾ ಶ್ರುಬ್‌ಸೋಲೆ(12ವಿಕೆಟ್‌)

ವಿಕೆಟ್‌ ಕೀಪರ್‌ ಸಾರಾಟೇಲರ್‌(396 ರನ್‌)

ಅಲೆಕ್ಸ್ ಹಾರ್ಟ್ಲಿ(10ವಿಕೆಟ್‌)

ದಕ್ಷಿಣ ಆಫ್ರಿಕಾ

ಲೌರಾ ವೋಲ್ವಾರ್ಡ್ಟ್‌(324ರನ್‌)

ಮರಿಜನ್ನೆ ಕೇಪ್‌(13ವಿಕೆಟ್‌)

ಡ್ಯಾನ್‌ವೆನ್‌ ನಿಕಾರ್ಕ್‌(99ರನ್‌ 15ವಿಕೆಟ್‌)

ಆಸ್ಟ್ರೇಲಿಯಾ

ಎಲ್ಲಿಸ್‌ ಪೆರ್ರಿ(404ರನ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT