ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಚಿತ್ರಮಂದಿರಗಳು ನಿಮಗೆ ಗೊತ್ತೇ?

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಮಕ್ಕಳ ಚಿತ್ರಮಂದಿರ: ರಂಗುರಂಗಿನ ಬಣ್ಣಗಳು, ಪುಟ್ಟ ಕಾಡು, ಪ್ರಾಣಿ, ಪಕ್ಷಿಗಳ ಪ್ರತಿಮೆಗಳು, ಕ್ರೀಡಾಂಗಣ, ಜಿಮ್‌, ಮಕ್ಕಳಿಗೆ ಮುದ ನೀಡಲು ಏನೋ ಬೇಕೊ ಎಲ್ಲವೂ ಇಲ್ಲಿದೆ. ಒಮ್ಮೆ ಇಲ್ಲಿಗೆ ಬಂದ ಮಕ್ಕಳು ರಜೆ ಬಂತೆಂದರೆ ಮತ್ತೊಮ್ಮೆ ದುಂಬಾಲು ಬೀಳುವ ಈ ಚಿತ್ರಮಂದಿರವಿರುವುದು ಅಮೆರಿಕದಲ್ಲಿ. ಹನ್ನೇರಡು ವರ್ಷ ಕೆಳಗಿನ ಮಕ್ಕಳಿಗೆ ಮಾತ್ರವೇ ಇಲ್ಲಿ ಅವಕಾಶ. ಮಕ್ಕಳ ಜೊತೆಗೆ ಪೋಷಕರೂ ಅಲ್ಲಿಗೆ ಭೇಟಿ ನೀಡಬಹುದು. ಆದರೆ ಮಕ್ಕಳ ಚಿತ್ರಗಳನ್ನು ಮಾತ್ರವೇ ಇಲ್ಲಿ ಪ್ರದರ್ಶಿಸಲಾಗುತ್ತದೆ.

**

ತೇಲುವ ಸಿನಿಮಾ ಮಂದಿರ: ದ್ವೀಪದ ಮಧ್ಯೆ ತೇಲುತ್ತ ಸಿನಿಮಾ ನೋಡುವ ಅವಕಾಶ ನೀಡಿರುವುದು ರಾಕ್ಸ್‌ ಯೋ ನೊಯ್‌ ಫೌಂಡೇಶನ್‌. ಪ್ರಕೃತಿಯ ಸೌಂದರ್ಯದ ನಡುವೆ ಮನರಂಜನೆ ಸವಿಯುವ ಆಲೋಚನೆಯನ್ನು ಕಾರ್ಯರೂಪಕ್ಕೆ ಇಳಿಸಿದ್ದು, ವಾಸ್ತುಶಿಲ್ಪಿ ಒಲೆ ಸ್ಕೆರೆನ್‌. ಇದು ಇರುವುದು ಸ್ಟ್ರೇಟ್‌ ಆಫ್‌ ಮಲಾಕಾದಲ್ಲಿ. ಮರ ಮತ್ತು ಸೊಳ್ಳೆಯ ಪರದೆಗಳ ಮೂಲಕ ಇದನ್ನು ತಯಾರಿಸಲಾಗಿದೆ.

**

ಹಡಗು ಮಾದರಿಯ ಚಿತ್ರಮಂದಿರ: ಹಡಗಿನ ಮಾದರಿಯಲ್ಲಿರುವ ಈ ಸಿನಿಮಾ ಮಂದಿರ ರಷ್ಯಾದ ಹಲವು ಪ್ರದೇಶದಲ್ಲಿದೆ. 2015ರಲ್ಲಿ ರಷ್ಯಾದ 100 ಕಡೆಗಳಲ್ಲಿ ಇದರ ನಿರ್ಮಾಣ ಮಾಡಲಾಯಿತು. ಅಲ್ಲಿಯ ಸಿನಿಮಾ ಉದ್ಯಮದ ಅಭಿವೃದ್ಧಿಗಾಗಿ ನಿರ್ಮಾಣವಾಗಿರುವ ಚಿತ್ರಮಂದಿರಗಳಿವು. ಹಾಗಾಗಿ ಇಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಪ್ರದರ್ಶಿಸುವುದು ಕಡಿಮೆ.

**

ಕಾರಿನಲ್ಲಿ ಕುಳಿತು ಸಿನಿಮಾ ನೋಡಿ: 50 ರ ದಶಕದ ಕಾರಿನ ಮಾದರಿಯ ಕುರ್ಚಿಗಳಲ್ಲಿ ಕೂತು ಸಿನಿಮಾ ನೋಡುವ ಮಜಾವೇ ಅದ್ಭುತ. ಈ ಅವಕಾಶ ಕಲ್ಪಿಸಿರುವುದು ಅಮೆರಿಕದ ಡಿಸ್ನಿ ಲ್ಯಾಂಡ್‌. 1951ರಲ್ಲಿ ಇದರ ನಿರ್ಮಾಣ ಮಾಡಲಾಯಿತು. 50 ಮತ್ತು 60ರ ದಶಕದ ಸಿನಿಮಾಗಳನ್ನು ಮಾತ್ರವೇ ಇಲ್ಲಿ ಪ್ರದರ್ಶಿಸಲಾಗುತ್ತದೆ.

**

ಹಾಟ್‌ ಟಬ್‌ ಥಿಯೇಟರ್‌: ಚುಮು ಚುಮು ಚಳಿಯಲ್ಲಿ ಬೆಚ್ಚಗೆ ಸಿನಿಮಾ ನೋಡುವುದೇ ಮಜಾ. 40 ಡಿಗ್ರಿ ಸೆಲ್ಸಿಯಸ್‌ ಬೆಚ್ಚನೆಯ ನೀರಿನಲ್ಲಿ ಕೂತು ಸಿನಿಮಾ ನೋಡುವ ಆಸೆಯಿದ್ದರೆ ಚಳಿಗಾಲದಲ್ಲಿ ಸಿಡ್ನಿಗೆ ಹೋಗಬೇಕು. ಟಬ್‌ಗಳಲ್ಲಿ ಏಳು ಮಂದಿ ಕೂರಲು ಅವಕಾಶವಿದೆ. ತಿಂಡಿ, ಮಧುವನ್ನು ಕೊಡುವ ವ್ಯವಸ್ಥೆಯೂ ಇರುತ್ತದೆ. ಇಲ್ಲಿಗೆ ಹೋಗುವಾಗ ಈಜುಡುಗೆ ಕೊಂಡುಹೋಗುವುದು ಅಗತ್ಯ. ಎಲ್ಲಾ ಋತುಮಾನದಲ್ಲಿಯೂ ಇದು ಸಿನಿಮಾ ಮಂದಿರ ಆಗಿರುವುದಿಲ್ಲ.

**

ಪುಟಾಣಿ ಸಿನಿಮಂದಿರ: ಇದು ಪ್ರಪಂಚದ ಅತಿ ಚಿಕ್ಕ ಸಿನಿಮಾ ಮಂದಿರಗಳಲ್ಲೊಂದು. ವಾಹನದಲ್ಲಿ ಸೋಲಾರ್‌ ಅಳವಡಿಕೆಯ ಮೂಲಕ ಸಿನಿಮಾ ನೋಡುವ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಚಿಕ್ಕ ಸುತ್ತು ಹಾಕಿ ಸಿನಿಮಾ ನೋಡಬಹುದು. ಇದು ಇರುವುದು ಬ್ರಿಟನ್ನಿನಲ್ಲಿ. ಹತ್ತು ನಿಮಿಷದ ಒಳಗಿನ ಕಿರು ಚಿತ್ರಗಳನ್ನು ಮಾತ್ರವೇ ಇಲ್ಲಿ ನೋಡಬಹುದು. ಎಂಟು ಜನರು ಕೂರುವ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT