ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂತ್ ಕಾಮನ್‌ವೆಲ್ತ್ ಕೂಟ: ಭಾರತಕ್ಕೆ 11 ಪದಕ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ನಾಸ್ಸು: ಭಾರತ ತಂಡ 6ನೇ ಯೂತ್ ಕಾಮನ್‌ವೆಲ್ತ್ ಕ್ರೀಡಾಕೂಟ ದಲ್ಲಿ  11 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಏಳನೇ ಸ್ಥಾನ ಪಡೆದಿದೆ.

ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಆರು ಕಂಚಿನ ಪದಕಗಳನ್ನು ಭಾರತ ಜಯಿಸಿದೆ. ಟೂರ್ನಿಯ ಮೊದಲ ದಿನ (ಜುಲೈ 18)ಭಾರತದ ಜೂಡೊ ತಂಡ ನಾಲ್ಕು ಪದಕಗಳನ್ನು ಗೆದ್ದುಕೊಂಡಿತ್ತು. 73ಕೆ.ಜಿ ವಿಭಾಗದಲ್ಲಿ ಸೋನಿ ಆಸ್ಟ್ರೇಲಿಯಾದ ನಿಕೊಲಿಕ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕ ತಂದು ಕೊಟ್ಟಿದ್ದರು.

ಭಾರತದ ಬಾಕ್ಸರ್‌ಗಳು ನಾಲ್ಕು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಸಚಿನ್ ಸಿವಚ್ ಚಿನ್ನಕ್ಕೆ ಕೊರಳೊಡ್ಡಿದರು. ಟೆನಿಸ್‌ನಲ್ಲಿ ಭಾರತ ಮೂರು ಪದಕ ಗೆದ್ದುಕೊಂಡಿದೆ. ಸಿಂಗಲ್ಸ್‌ನಲ್ಲಿ ಜೀಲ್‌ ದೇಸಾಯಿ ಚಿನ್ನ ಗೆದ್ದರು. ಮಿಶ್ರ ಡಬಲ್ಸ್‌ನಲ್ಲಿ ಸಿದ್ದಾಂತ್ ಬಂತಿಯಾ ಹಾಗೂ ಜೀಲ್‌ ಚಾಂಪಿಯನ್ ಆದರು.

ಅಥ್ಲೆಟಿಕ್ಸ್‌, ಸೈಕ್ಲಿಂಗ್‌, ಈಜು, ಜೂಡೊ, ಬಾಕ್ಸಿಂಗ್ ಹಾಗೂ ಟೆನಿಸ್ ಸೇರಿದಂತೆ ಭಾರತ ಆರು ವಿಭಾಗಗಳಲ್ಲಿ 28 ಸ್ಪರ್ಧಿಗಳನ್ನು ಈ ಚಾಂಪಿಯನ್‌ ಷಿಪ್‌ಗೆ ಕಳುಹಿಸಿತ್ತು. ಭಾರತ ಒಲಿಂಪಿಕ್ ಸಂಸ್ಥೆ ಕಾರ್ಯದರ್ಶಿ ರಾಜೀವ್ ಮೆಹ್ತಾ ಭಾರತದ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT