ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕಿತ್ಸೆಗೆ ನೆರವಾಗಿ

Last Updated 25 ಜುಲೈ 2017, 19:30 IST
ಅಕ್ಷರ ಗಾತ್ರ

ಗುಜರಾತ್ ರಾಜ್ಯದ ರಾಜ್‌ಕೋಟ್‌ನಲ್ಲಿ ಸಣ್ಣದೊಂದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸೋದರಿ ವೈಶಾಲಿ ಮನೋಹರ ಪವಾರ್ (18) ಲಿಫ್ಟ್ ಅಪಘಾತದಲ್ಲಿ ಮುಖ ಜಜ್ಜಿಹೋಗಿ ಕಣ್ಣಿನ ದೃಷ್ಟಿ ಪೂರ್ತಿ ಕಳೆದುಕೊಂಡಿದ್ದಾಳೆ.

ಜಜ್ಜಿಹೋದ ಮುಖ ಸರಿಪಡಿಸಲು ನಡೆಸಲಾದ ಪ್ಲಾಸ್ಟಿಕ್ ಸರ್ಜರಿಗೆ ಈಗಾಗಲೇ ಸುಮಾರು ₹ 15 ಲಕ್ಷ ಖರ್ಚಾಗಿದೆ. ಹೈದರಾಬಾದ್‌ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಕಣ್ಣಿನ ಪರೀಕ್ಷೆ ಮಾಡಿಸಲಾಗುತ್ತಿದೆ. ಪೂರ್ಣವಾಗಿ ತೆರೆಯಲಾಗದ ಬಾಯಿ ಹಾಗೂ ದಂತಪಂಕ್ತಿಗಳನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆಗಳಿಗೆ ಮತ್ತೆ ಸುಮಾರು ₹ 7 ಲಕ್ಷ ವೆಚ್ಚವಾಗುವುದಾಗಿ ವೈದ್ಯರು ಹೇಳಿದ್ದಾರೆ.

ಸಹಜವಾಗಿ ಆಹಾರ ತಿನ್ನಲು ಅಸಾಧ್ಯವಾದ್ದರಿಂದ ದ್ರವಾಹಾರವನ್ನು ಈಗ ನಳಿಕೆಯ ಮೂಲಕ ನೀಡಲಾಗುತ್ತಿದೆ. ನಾನಿನ್ನೂ ಪದವಿ ತರಗತಿಯಲ್ಲಿ ಓದುತ್ತಿದ್ದೇನೆ. ತಂದೆ ರಾಜ್‌ಕೋಟ್‌ನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದಾರೆ.

ಈ ಖರ್ಚು ನಿಭಾಯಿಸುವುದು ನಮ್ಮ ಕುಟುಂಬಕ್ಕೆ ಕ್ಲಿಷ್ಟಕರವಾಗಿರುವುದರಿಂದ ನೆರವು ನೀಡಬೇಕೆಂದು ಕೋರುತ್ತೇನೆ. ನನ್ನ ತಾಯಿ ಸುನೀತಾಬಾಯಿ ಮನೋಹರ ಪವಾರ್ ಬ್ಯಾಂಕ್ ಖಾತೆ ವಿವರ: ಖಾತೆನಂಬರ್: 910010037640489, ಆ್ಯಕ್ಸಿಸ್ ಬ್ಯಾಂಕ್, ರಾಜ್‌ಕೋಟ್, IFSC: UTIB0000809. ಸಂಪರ್ಕ ಸಂಖ್ಯೆ: 9723700703, 8412084073.

ರಾಹುಲ್ ಮನೋಹರ ಪವಾರ್, ರಾಜ್‌ಕೋಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT