ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ಆಗ್ರಹಿಸಿ ಗ್ರಾ.ಪಂ.ಗೆ ಮುತ್ತಿಗೆ

Last Updated 26 ಜುಲೈ 2017, 6:37 IST
ಅಕ್ಷರ ಗಾತ್ರ

ಬೈಲಹೊಂಗಲ: ಇಲ್ಲಿಗೆ ಸಮೀಪದ ಮುರಗೊಡ ಗ್ರಾಮಸ್ಥರು ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಖಾಲಿ ಬಿಂದಿಗೆ ಹಿಡಿದುಕೊಂಡು ಬಂದು ಗ್ರಾಮ ಪಂಚಾಯ್ತಿಗೆ ಸೋಮವಾರ ದಿಢೀರ್‌ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಯವರು ಗ್ರಾಮದ ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಜನತಾ ಕಾಲೊನಿಯಲ್ಲಿ ಕಳೆದ 4 ತಿಂಗಳಿನಿಂದ ಅಸಮರ್ಪಕ ನೀರು ಪೂರೈಕೆಯಿಂದ ತೀವ್ರ ತೊಂದರೆಯಾಗಿದೆ. ಇದನ್ನು ಕಂಡು ಕಾಣದಂತೆ ಇರುವ ಪಿಡಿಒ, ಸದಸ್ಯರು ಕಣ್ತುಚ್ಚಿ ಕುಳಿತ್ತಿದ್ದಾರೆ’ ಎಂದು ಆರೋಪಿಸಿದರು.

ಗ್ರಾಮದ ಯುವ ಮುಖಂಡ ಈರಣ್ಣ ಯರಝರ್ವಿ ಮಾತನಾಡಿ, ‘ಕೆಂಗೇರಿ ರಸ್ತೆ ಬದಿಯ ದೇವರಾಜು ಅರಸ್ ಶುದ್ಧ ಕುಡಿಯುವ ನೀರಿನ ಘಟಕ ಎರಡು ವರ್ಷಗಳಿಂದ ಹಾಳಾಗಿದೆ. ಇದರಿಂದ ಕುಡಿಯುವ ನೀರಿಗಾಗಿ ಹಾಹಾಕಾರವಿದೆ. ನೀರು, ರಸ್ತೆ, ಚರಂಡಿ, ವಿದ್ಯುತ್, ಶೌಚಾಲಯ, ಕೆರೆ ನಿರ್ಮಾಣ, ಸಮುದಾಯ ಭವನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯ್ತಿಯವರು ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಅವರು ದೂರಿದರು.

ಮುಸ್ಲಿಂ ಸಮಾಜದ ಯುವ ಮುಖಂಡ ಹನಿಫ್ ನದಾಫ್ ಮಾತನಾಡಿ, ‘ಗ್ರಾಮ ಪಂಚಾಯ್ತಿಯವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡುತ್ತಿದ್ದು, ಮೇಲಾಧಿಕಾರಿಗಳು ತುರ್ತು ಕ್ರಮ ಕೈಕೊಳ್ಳಬೇಕು’ ಎಂದು ಒತ್ತಾಯಿಸಿದರು.

ವಿದ್ಯಾರ್ಥಿ ಮುಖಂಡ ಚಿದಂಬರ ಕುರುಬರ ಮಾತನಾಡಿ, ‘ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಿಸಿ ಸಮರ್ಪಕ ಕುಡಿಯುವ ನೀರು ಪೂರೈಸಬೇಕು. ಇದ್ದ ಕೊಳವೆ ಬಾವಿ ದುರಸ್ತಿಗೊಳಿಸಬೇಕು. ಸಮರ್ಪಕ ವಿದ್ಯುತ್ ನೀಡಿ ರೈತರಿಗೆ ನೆರವಾಗಬೇಕು’ ಎಂದರು.

ಮಂಜು ಬೂದಗಟ್ಟಿ, ಚಿದಂಬರ ಏಣಗಿ, ಮಲ್ಲಿಕಾರ್ಜುನ ಮಲಕಾಜನವರ, ರಾಜೇಸಾಬ ಬಡಿಗೇರ, ಮಹಾಂತೇಶ ಪುಲ್ಲಿ, ದ್ಯಾಮಣ್ಣ ಇಂಗಳಗಿ, ಮಲ್ಲಿಕಾರ್ಜುನ ಕಾಗಿ, ಬಸವರಾಜ ಕಿಲ್ಲೇದಾರ, ಮಹಾಂತೇಶ ಮಲ್ಲಿಗಿ, ಮಹಾಂತೇಶ ಬೂದಗಟ್ಟಿ, ಮೌಲಾಸಾಬ ನದಾಫ, ಗಂಗಪ್ಪ ಮೇಟಿ, ಅರ್ಜುನ ಗಡ್ಡೇದಾರ, ಶಂಕರ ಕೆಂಗೇರಿ, ಇಸ್ಮಾಯಿಲ್ ನದಾಫ್, ಶಬ್ಬೀರಹ್ಮದ ಪೆಂಡಾರಿ, ಶಾನೂರ ಸೋಮಾಪೂರ, ಗಂಗಾಧರ ಸುಣಗಾರ, ಮಲ್ಲೇಶ ಕಿಲ್ಲೇದಾರ, ಮಲಿಕಜಾನ್ ಬಾಗವಾನ, ಪರಶುರಾಮ ಬೂದಗಟ್ಟಿ, ಮಲ್ಲಿಕಾಜರ್ುನ ಗೆಜ್ಜಿ, ಸಿದ್ದಪ್ಪ ದಿವಟಗಿ, ಮಲ್ಲಪ್ಪ ಆಡಿನವರ, ಗಂಗಪ್ಪ ಕೋಣಿ, ರುದ್ರಪ್ಪ ಮಲ್ಲಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT