ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ

Last Updated 26 ಜುಲೈ 2017, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧದ ಪಶ್ಚಿಮ ಪ್ರವೇಶದ್ವಾರದ ಬಳಿಯ ‘ರಾಕ್ ಗಾರ್ಡನ್’ನಲ್ಲಿ (ತಪೋವನ) ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪಿಸುವ ಕೆಲಸ ಗುರುವಾರ ಆರಂಭವಾಗಲಿದೆ’ ಎಂದು  ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಪ್ರತಿಮೆ ಪ್ರತಿಷ್ಠಾಪನೆಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ₹1 ಕೋಟಿ ಮೀಸಲಿಟ್ಟಿದ್ದರು. ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿಗ್ರಹದ ಕೆತ್ತನೆ ಕಾರ್ಯ ಪೂರ್ಣಗೊಂಡಿದ್ದು, ಬುಧವಾರ ಮಧ್ಯರಾತ್ರಿ ನಗರ  ತಲುಪಲಿದೆ’ ಎಂದರು.

‘25 ಟನ್ ತೂಕದ 12 ಅಡಿ ಎತ್ತರದ ಕಪ್ಪುಕಲ್ಲಿನ ಪ್ರತಿಮೆಗೆ  ₹ 40 ಲಕ್ಷ ವೆಚ್ಚವಾಗಿದೆ. ಇದನ್ನು ವಾಲ್ಮೀಕಿ ಸಮಾಜದ ಮುಖಂಡರೇ ಭರಿಸಿದ್ದಾರೆ. ಪ್ರತಿಮೆ ಪ್ರತಿಷ್ಠಾಪಿಸಿ ಅದಕ್ಕೆ ಅಂತಿಮ ಸ್ಪರ್ಶ ಕೊಡುವ ಕೆಲಸ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಬಳಿಕ,  ಮುಖ್ಯಮಂತ್ರಿ ಅದನ್ನು ಲೋಕಾರ್ಪಣೆ ಮಾಡಲಿದ್ದಾರೆ’ ಎಂದರು.

‘ತಪೋವನದಲ್ಲಿ ಗಿಡಮರ ಬೆಳೆಸಿ ಪರಿಸರ ಅಭಿವೃದ್ಧಿಪಡಿಸಲು ತೋಟಗಾರಿಕೆ ಇಲಾಖೆ ₹ 30 ಲಕ್ಷ ವೆಚ್ಚದ ಯೋಜನೆ ತಯಾರಿಸಿದೆ. ಅಲ್ಲದೆ ತಪೋವನದಲ್ಲಿ ಸೀತೆ, ಲವ-ಕುಶ ಹಾಗೂ ಕೆಲವು ಪ್ರಾಣಿ-ಪಕ್ಷಿಗಳ ಪ್ರತಿಕೃತಿ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ’ ಎಂದು ಉಗ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT