ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌: ‍100 ಕೋಟಿ ದಾಟಿದ ಪ್ರತಿ ದಿನ ಬಳಕೆದಾರರ ಸಂಖ್ಯೆ

Last Updated 27 ಜುಲೈ 2017, 20:06 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಸಂದೇಶ ಕಿರುತಂತ್ರಾಂಶ  ವಾಟ್ಸ್‌ಆ್ಯಪ್‌ನ ಪ್ರತಿ ದಿನ ಬಳಕೆದಾರರ ಸಂಖ್ಯೆಯು ವಿಶ್ವದಾದ್ಯಂತ ಈಗ 100 ಕೋಟಿ ದಾಟಿದೆ.

ವಿಶ್ವದಾದ್ಯಂತ ಪ್ರತಿ ತಿಂಗಳೂ ನಮ್ಮ ಬಳಕೆದಾರರ ಸಂಖ್ಯೆ 100 ಕೋಟಿಗಳಷ್ಟಿದೆ ಎಂದು ನಾವು ಹೋದ ವರ್ಷ ಪ್ರಕಟಿಸಿದ್ದೇವು. ಸಂಬಂಧಿಗಳು, ಸ್ನೇಹಿತರ ಜತೆ ಪ್ರತಿ ದಿನ ಸಂಪರ್ಕದಲ್ಲಿ ಇರುವ ಬಳಕೆದಾರರ ಸಂಖ್ಯೆ ಈಗ 100 ಕೋಟಿ ದಾಟಿರುವುದನ್ನು ನಾವು ಹೆಮ್ಮೆಯಿಂದ ಪ್ರಕಟಿಸುತ್ತಿದ್ದೇವೆ ಎಂದು ವಾಟ್ಸ್‌ಆ್ಯಪ್‌ ತಿಳಿಸಿದೆ.

ಈ ಸಂದೇಶ ತಾಣದಲ್ಲಿ ಪ್ರತಿ ದಿನ 5,500 ಕೋಟಿಗಳಷ್ಟು ಸಂದೇಶಗಳು ಮತ್ತು 450 ಕೋಟಿ ಚಿತ್ರಗಳು ಜಾಗತಿಕ ಬಳಕೆದಾರರ ಮಧ್ಯೆ ವಿನಿಮಯಗೊಳ್ಳುತ್ತಿವೆ. 60 ಭಾಷೆಗಳಲ್ಲಿ ಇಲ್ಲಿ ಸಂದೇಶ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಪ್ರತಿ ದಿನ 100 ಕೋಟಿಗಳಷ್ಟು ವಿಡಿಯೊಗಳೂ ಬಳಕೆದಾರರ ಮಧ್ಯೆ ಹರಿದಾಡುತ್ತಿವೆ.

ವಾಟ್ಸ್‌ಆ್ಯಪ್‌ಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದ್ದು ಪ್ರತಿ ತಿಂಗಳೂ 20 ಕೋಟಿಗೂ ಹೆಚ್ಚು ಬಳಕೆದಾರರು ಇಲ್ಲಿ ಸಕ್ರಿಯವಾಗಿದ್ದಾರೆ.

ಭಾರತದಲ್ಲಿ ಈ ಆ್ಯಪ್‌, ಲೈನ್‌ (LINE), , ವೈಬರ್‌ (Viber) ಮತ್ತು ಹೈಕ್‌ ( Hike) ಆ್ಯಪ್‌ಗಳ ಸ್ಪರ್ಧೆ ಎದುರಿಸುತ್ತಿದೆ.  ಫೇಸ್‌ಬುಕ್ 2014ರಲ್ಲಿ ವಾಟ್ಸ್‌ಆ್ಯಪ್‌ ಖರೀದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT