ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಾಂತ್–ಕೃತಿ ಪ್ರೇಮಿಗಳೇ?

Last Updated 30 ಜುಲೈ 2017, 19:30 IST
ಅಕ್ಷರ ಗಾತ್ರ

‘ನಟ ಸುಶಾಂತ್‌ ಸಿಂಗ್‌ ರಜಪೂತ್‌ ಮತ್ತು ನಟಿ ಕೃತಿ ಸನೋನ್‌ ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದಾರೆ’ ಎಂಬ ಗಾಳಿಮಾತು ಬಾಲಿವುಡ್‌ ಗಲ್ಲಿಯಲ್ಲಿ ಹರಿದಾಡುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಐಐಎಫ್‌ಎ 2017 ಸಮಾರಂಭದಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ಹೋಗಿದ್ದ ಸುಶಾಂತ್‌ ಹಾಗೂ ಕೃತಿ ಅಲ್ಲಿ ಸಖತ್ ಮೋಜು–ಮಸ್ತಿ ಮಾಡಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಕೃತಿ ಜತೆಗಿದ್ದ ಫೋಟೊವನ್ನು ಸುಶಾಂತ್‌ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಇಬ್ಬರ ನಡುವಿನ ಸಂಬಂಧದ ಕುರಿತು ಪ್ರಮುಖ ಸುಳಿವನ್ನೂ ನೀಡಿದ್ದಾರಂತೆ.

ಖ್ಯಾತ ಛಾಯಾಗ್ರಾಹಕ ಮುರದ್‌ ಒಸ್ಮಾನ್‌ ಅವರ ಛಾಯಾಚಿತ್ರ ಸರಣಿಯಿಂದ ಸ್ಫೂರ್ತಿ ಪಡೆದ ಸುಶಾಂತ್‌ ತಮ್ಮ ಚಿತ್ರಕ್ಕೆ ’ಫೋಲೋ ಮಿ ಟು’ ಎಂದು ಶೀರ್ಷಿಕೆ ನೀಡಿದ್ದಾರೆ. ಇದರಲ್ಲಿ ಸುಶಾಂತ್‌ ಸಿಂಗ್‌ ಯುವತಿಯೊಬ್ಬಳ ಕೈ ಹಿಡಿದಿದ್ದು, ಆಕೆಯ ಅಂಗೈ ಮಾತ್ರ ಚಿತ್ರದಲ್ಲಿ ಕಾಣುತ್ತಿದೆ.

2012ರಲ್ಲಿ ರಷ್ಯಾದ ಛಾಯಾಚಿತ್ರಗಾರ ಮುರದ್‌ ತನ್ನ ಪತ್ನಿ ನಟಾಲಿಯಾ ಜೊತೆಗೆ ತೆಗೆಸಿಕೊಂಡ ಸರಣಿ ಫೋಟೊಗಳು ವೈರಲ್‌ ಆಗಿತ್ತು. ಇದರಲ್ಲಿ ನತಾಲಿಯಾ ಕೈಯನ್ನು ಹಿಡಿದುಕೊಂಡು ತೆಗೆಸಿಕೊಂಡಿರುವ ಚಿತ್ರಗಳು ಬಹಳ ಪ್ರಸಿದ್ಧಿಯಾಗಿದ್ದವು. ಈ ಚಿತ್ರಗಳಿಂದ ಪ್ರೇರಣೆ ಪಡೆದ ಸುಶಾಂತ್‌– ಕೃತಿ ತಮ್ಮ ಚಿತ್ರ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ’ಬ್ರೇಕ್‌ಫಾಸ್ಟ್‌ ವಿತ್‌ ಮೈ ಪರ್ಸನಲ್‌ ಮುರದ್‌ ಒಸ್ಮಾನ್‌’ ಎಂದು ಸುಶಾಂತ್ ಶೀರ್ಷಿಕೆಯನ್ನೂ ನೀಡಿದ್ದಾರೆ.

ಈ ಚಿತ್ರದಲ್ಲಿರುವ ಕೈ ಕೃತಿಯದು ಎನ್ನಲಾಗಿದೆ. ಅನೇಕ ದಿನಗಳಿಂದ ತಮ್ಮಿಬ್ಬರ ಸಂಬಂಧದದ ಬಗ್ಗೆ ಕೇಳಿಬರುತ್ತಿರುವ ಗಾಸಿಪ್‌ ಬಗ್ಗೆ ಇಬ್ಬರೂ ಸದ್ಯದಲ್ಲೇ ಒಪ್ಪಿಕೊಳ್ಳುವ ಸೂಚನೆಯೂ ಇದಾಗಿರಬಹುದು ಎಂಬ ಮಾತು ಬಾಲಿವುಡ್‌ ಅಂಗಳದಲ್ಲಿ ಕೇಳಿಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT