ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ 01-08-1967

50 ವರ್ಷಗಳ ಹಿಂದೆ
Last Updated 31 ಜುಲೈ 2017, 19:30 IST
ಅಕ್ಷರ ಗಾತ್ರ

* ವಿಮಾನ ಪಡೆಯಲ್ಲಿ ಗೂಢಚರ್‍ಯೆ; ಇಬ್ಬರ ಬಂಧನ-ಲೋಕಸಭೆಯಲ್ಲಿ ಸದಸ್ಯರ ಆತಂಕ; ಸರ್ಕಾರದ ಕ್ರಮ ಕುರಿತು ಚವಾಣ್ ಹೇಳಿಕೆ

ನವದೆಹಲಿ, ಜು. 31– ರಾಷ್ಟ್ರದಲ್ಲಿ, ಅದರಲ್ಲೂ ವಿಶೇಷವಾಗಿ ಭಾರತೀಯ ವಿಮಾನ ಪಡೆಯಲ್ಲಿ ಗೂಢಚರ್ಯ ಚಟುವಟಿಕೆಗಳು ಹೆಚ್ಚುತ್ತಿರುವುದರ ಬಗ್ಗೆ ವಿರೋಧ ಸದಸ್ಯರ ಕಳವಳ ಹಾಗೂ ಗೃಹಸಚಿವರ ಉತ್ತರ ಇಂದು ಲೋಕಸಭೆಯಲ್ಲಿ ಮಹತ್ವದ ಅಂಶಗಳಾಗಿದ್ದವು.

ಭಾರತದ ವಿರುದ್ಧ ಸಂಚು ನಡೆಸುತ್ತಿರುವ ಪಾಕಿಸ್ತಾನ ಮತ್ತು ಚೀನಾಗಳಿಗೆ ವಾಯುದಳದ ಬಗ್ಗೆ ರಹಸ್ಯ ವಿಷಯಗಳು ಹೋಗುತ್ತಿರುವುದನ್ನು ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳೇನು ಎಂದು ವಿರೋಧ ಪಕ್ಷದ ಸದಸ್ಯರು ಪ್ರಶ್ನಿಸಿದರು.

***

* ‘ರಾಜ್ಯದ ವಿಶಾಲ ಪ್ರದೇಶಗಳಲ್ಲಿ ಪಾನನಿರೋಧ ರದ್ದು’

ಬೆಂಗಳೂರು, ಜು. 31– ಈಗ ಪಾನನಿರೋಧ ಜಾರಿಯಲ್ಲಿರುವ ಭಾಗ ಗಳ ‘ವಿಶಾಲ ಪ್ರದೇಶದಲ್ಲಿ’ ಪಾನ ನಿರೋಧವನ್ನು ರದ್ದು ಗೊಳಿಸಲಾಗು ವುದೆಂದು ಹಣಕಾಸು ಮತ್ತು ಅಬ್ಕಾರಿ ಸಚಿವರಾದ ಶ್ರೀ ರಾಮಕೃಷ್ಣ ಹೆಗ್ಗಡೆಯವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಪಾನನಿರೋಧ ರದ್ದನ್ನು ‘ಪ್ರವಾಸಿ ಕೇಂದ್ರಗಳಿಗೆ’ ಮಾತ್ರ ಅನ್ವಯಿಸಲಾಗುವುದೆಂಬ ಆಸೆಯನ್ನು ವ್ಯಕ್ತಪಡಿಸಿದ್ದ ಕಾಂಗ್ರೆಸ್ ಸದಸ್ಯ ಶ್ರೀ ಕೆ.ಆರ್. ಆಚಾರ್‌ರವರಿಗೆ ಉತ್ತರವಾಗಿ ಸಚಿವರು ಅಂತಹ ‘ಭ್ರಾಂತಿ’ ಹೊಂದಿದ್ದರೆ ಅದನ್ನು ಬಿಟ್ಟುಬಿಡಬೇಕೆಂದರು.

ಪ್ರಕೃತ ಪಾನನಿರೋಧ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪಾನನಿರೋಧವನ್ನು ರದ್ದುಗೊಳಿಸಲು ಸರಕಾರಕ್ಕೆ ಅಧಿಕಾರ ನೀಡುವ ಶಾಸನವನ್ನು ರಾಜ್ಯದ ಆದಷ್ಟು ವಿಶಾಲ ಪ್ರದೇಶದಲ್ಲಿ ಜಾರಿಗೆ ತರಲಾಗುವುದೆಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT