ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಮರುಹೋರಾಟ

439 ರನ್‌ಗಳ ಹಿನ್ನಡೆ ಅನುಭವಿಸಿದ ಆತಿಥೇಯರಿಗೆ ಫಾಲೋ ಆನ್
Last Updated 5 ಆಗಸ್ಟ್ 2017, 20:24 IST
ಅಕ್ಷರ ಗಾತ್ರ

ಕೊಲಂಬೊ: ಶತಕ ದಾಖಲಿಸಿದ ಕುಶಾಲ ಮೆಂಡಿಸ್ ಮತ್ತು ತಾಳ್ಮೆಯ ಆಟವಾಡಿದ ದಿಮುತ ಕರುಣರತ್ನೆ ಅವರು ಭಾರತದ ಎದುರಿನ ಎರಡನೇ ಟೆಸ್ಟ್‌ನಲ್ಲಿ ಶನಿವಾರ ಆತಿಥೇಯ ಶ್ರೀಲಂಕಾ ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಲು ದಿಟ್ಟ  ಹೋರಾಟ ಮಾಡಿದರು.

ಎಸ್‌.ಎಸ್‌.ಸಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಶನಿವಾರ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 183 ರನ್‌ ಗಳಿಸಿ ಸರ್ವಪತನ ಕಂಡಿತು. ಭಾರತ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ ಗಳಿಸಿರುವ 622 ರನ್‌ಗಳನ್ನು ಬೆನ್ನಟ್ಟಿದ್ದ ಲಂಕಾ ತಂಡಕ್ಕೆ ಆಫ್‌ಸ್ಪಿನ್ನರ್ ಆರ್. ಅಶ್ವಿನ್ (69ಕ್ಕೆ5) ಅವರ ದಾಳಿಯಿಂದಾಗಿ 439 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿತು. ಫಾಲೋ ಆನ್ ಪಡೆದ ಆತಿಥೇಯರು ಮತ್ತೆ ಬ್ಯಾಟಿಂಗ್ ಆರಂಭಿಸಿದರು.

ಭಾರತದ ಉಮೇಶ್ ಯಾದವ್ ಮೂರನೇ ಓವರ್‌ನಲ್ಲಿಯೇ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಕೇವಲ ಎರಡು ರನ್‌ ಗಳಿಸಿ ಔಟಾದರು. ಇದರಿಂದಾಗಿ ಲಂಕಾ ಬ್ಯಾಟ್ಸ್‌ಮನ್‌ಗಳು ಮತ್ತೆ ವೈಫಲ್ಯ ಅನುಭವಿಸುವ ಲಕ್ಷಣಗಳಿದ್ದವು. ಆದರೆ, ಕುಶಾಲ  ಮೆಂಡಿಸ್ (110; 135ಎ, 17 ಬೌಂ) ಆವರ ಸೊಗಸಾದ ಶತಕ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಗುಣರತ್ನೆ (ಬ್ಯಾಟಿಂಗ್ 92; 200ಎ, 12ಬೌಂ) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 191 ರನ್‌ ಸೇರಿಸಿದರು. ಇದರಿಂದಾಗಿ ಶ್ರೀಲಂಕಾ ತಂಡವು ದಿನದಾಟದ ಕೊನೆಗೆ 60 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 209 ರನ್‌ಗಳನ್ನು ಗಳಿಸಿದೆ. ಗುಣರತ್ನೆ ಮತ್ತು ಪಿ.ಎಂ. ಪುಷ್ಪಕುಮಾರ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ.

ಅಶ್ವಿನ್ ಕೈಚಳಕ: ಚೆನ್ನೈನ ಆರ್. ಅಶ್ವಿನ್ ಅವರು ತಾವು ಊಪಖಂಡದ ಪಿಚ್‌ಗಳಲ್ಲಿ ಶ್ರೇಷ್ಠ ಬೌಲರ್‌ ಎಂಬ ಹೆಗ್ಗಳಿಕೆಯನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಶುಕ್ರವಾರ ಲಂಕಾ ತಂಡದ ಎರಡು ವಿಕೆಟ್ ಪಡೆದಿದ್ದ ಅವರು ಮೂರನೇ ದಿನವೂ ಪ್ರಾಬಲ್ಯ ಮೆರೆದರು.

ಪಿಚ್‌ ಗುಣವನ್ನು ಬಳಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದ ಆಶ್ವಿನ್ ಅವರು ಏಂಜೆಲೊ ಮ್ಯಾಥ್ಯೂಸ್, ದಿಲ್ರುವಾನ್ ಪೆರೆರಾ ಮತ್ತು ಫರ್ನಾಂಡೊ ಅವರ ವಿಕೆಟ್‌ಗಳನ್ನು ಕಬಳಿಸಿ ಲಂಕಾ ಇನಿಂಗ್ಸ್‌ಗೆ ಅಂತ್ಯ ಹಾಡಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರು 26ನೇ ಬಾರಿ ಐದು ವಿಕೆಟ್‌ಗಳ ಗೊಂಚಲು ಗಳಿಸಿದರು. ಆ ಮೂಲಕ ಹರಭಜನ್ ಸಿಂಗ್ ಅವರ ದಾಖಲೆಯನ್ನು ಮೀರಿ ನಿಂತರು.

ಇನ್ನೊಂದು ಬದಿಯಲ್ಲಿ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಲಂಕಾ ತಂಡದ ನಾಯಕ ಲಾಹಿರು ಚಾಂಡಿಮಲ್ ಹಾಗೂ ಧನಂಜಯ ಡಿಸಿಲ್ವಾ ಅವರ ವಿಕೆಟ್‌ಗಳನ್ನು ಕಬಳಿಸಿದರು. ಅದರಿಂದಾಗಿ ತಂಡದ ಮಧ್ಯಮ ಕ್ರಮಾಂಕ ಕುಸಿಯಿತು.

ಭಾರತ ತಂಡವು ಸರಣಿಯ ಮೊದಲ ಟೆಸ್ಟ್‌ನಲ್ಲಿಯೂ ಭಾರಿ ಅಂತರದ ಜಯ ಸಾಧಿಸಿತ್ತು. ಇಲ್ಲಿಯೂ ದೊಡ್ಡ ಅಂತರದ ಜಯ ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಮೊದಲ ಇನಿಂಗ್ಸ್‌ನ ಬಾಕಿ ಚುಕ್ತಾ ಮಾಡಲು ಲಂಕಾ ತಂಡವು ಇನ್ನೂ 230 ರನ್‌ಗಳನ್ನು ಹೊಡೆಯಬೇಕು. ಪಂದ್ಯದಲ್ಲಿ ಎರಡು ದಿನಗಳು ಬಾಕಿಯಿವೆ. ಪಿಚ್‌ ಕೂಡ ಸ್ಪಿನ್ನರ್‌ಗಳಿಗೆ ಹೆಚ್ಚು ಸಹಕರಿಸುತ್ತಿದ್ದು, ಭಾನುವಾರ ಲಂಕಾ ತಂಡದ ಆಟಗಾರರು ತಾಳ್ಮೆ ಕಳೆದುಕೊಂಡರೆ ಸೋಲಿನ ಕಹಿ ಅನುಭವಿಸುವುದು ಖಚಿತ.

***

ಸ್ಕೋರ್‌ ವಿವರ

ಭಾರತ ಮೊದಲ ಇನಿಂಗ್ಸ್‌ 9ಕ್ಕೆ 622 ಡಿಕ್ಲೇರ್ಡ್‌ (158 ಓವರ್‌ಗಳಲ್ಲಿ)

ಶ್ರೀಲಂಕಾ ಪ್ರಥಮ ಇನಿಂಗ್ಸ್‌ 183 (49.4 ಓವರ್‌ಗಳಲ್ಲಿ)

(ಶುಕ್ರವಾರದ ಅಂತ್ಯಕ್ಕೆ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 50)

ಕುಶಾಲ್‌ ಮೆಂಡಿಸ್‌ ಸಿ ವಿರಾಟ್‌ ಕೊಹ್ಲಿ ಬಿ ಉಮೇಶ್‌ ಯಾದವ್‌ 24

ದಿನೇಶ್‌ ಚಾಂಡಿಮಲ್‌ ಸಿ ಹಾರ್ದಿಕ್‌ ಪಾಂಡ್ಯ ಬಿ ರವೀಂದ್ರ ಜಡೇಜ 10

ಏಂಜೆಲೊ ಮ್ಯಾಥ್ಯೂಸ್‌ ಸಿ ಚೇತೇಶ್ವರ ಪೂಜಾರ ಬಿ ಆರ್‌.ಅಶ್ವಿನ್‌ 26

ನಿರೋಷನ್‌ ಡಿಕ್ವೆಲ್ಲಾ ಬಿ ಮಹಮ್ಮದ್‌ ಶಮಿ 51

ಧನಂಜಯ ಡಿಸಿಲ್ವ ಬಿ ರವೀಂದ್ರ ಜಡೇಜ 00

ದಿಲ್ರುವಾನ ಪೆರೇರಾ ಬಿ ಆರ್‌.ಅಶ್ವಿನ್‌ 25

ರಂಗನಾ ಹೆರಾತ್‌ ಬಿ ಮಹಮ್ಮದ್‌ ಶಮಿ 02

ಮಲಿಂದಾ ಪುಷ್ಪಕುಮಾರ ಔಟಾಗದೆ 15

ನುವಾನ್ ಪ್ರದೀಪ್‌ ಬಿ ಆರ್‌.ಅಶ್ವಿನ್‌ 00

ಇತರೆ: (ಬೈ 4, ಲೆಗ್‌ಬೈ 1) 05

ಬೌಲಿಂಗ್‌: ಮಹಮ್ಮದ್‌ ಶಮಿ 6–1–13–2, ಆರ್‌.ಅಶ್ವಿನ್‌ 16.4–3–69–5, ರವೀಂದ್ರ ಜಡೇಜ 22–6–84–2, ಉಮೇಶ್‌ ಯಾದವ್‌ 5–1–12–1.

ವಿಕೆಟ್‌ ಪತನ: 3–60 (ಚಾಂಡಿಮಲ್‌; 24.1), 4–64 (ಮೆಂಡಿಸ್‌; 25.4), 5–117 (ಮ್ಯಾಥ್ಯೂಸ್‌; 33.6), 6–122 (ಡಿಸಿಲ್ವ; 34.5), 7–150 (ಡಿಕ್ವೆಲ್ಲಾ; 41.1), 8–152 (ಹೆರಾತ್‌; 41.6), 9–171 (ಪೆರೇರಾ; 47.2), 10–183 (ನುವಾನ್‌ ಪ್ರದೀಪ್‌; 49.4).

ಶ್ರೀಲಂಕಾ ಎರಡನೇ ಇನಿಂಗ್ಸ್‌ 2ಕ್ಕೆ 209 (60 ಓವರ್‌ಗಳಲ್ಲಿ)

ದಿಮುತ್‌ ಕರುಣಾರತ್ನೆ ಬ್ಯಾಟಿಂಗ್‌ 92

ಉಪುಲ್‌ ತರಂಗ ಬಿ ಉಮೇಶ್‌ ಯಾದವ್‌ 02

ಕುಶಾಲ್‌ ಮೆಂಡಿಸ್‌ ಸಿ ವೃದ್ಧಿಮಾನ್‌ ಸಹಾ ಬಿ ಹಾರ್ದಿಕ್‌ ಪಾಂಡ್ಯ 110

ಮಲಿಂದಾ ಪುಷ್ಪಕುಮಾರ ಬ್ಯಾಟಿಂಗ್‌ 02

ಇತರೆ: (ನೋಬಾಲ್‌ 2, ವೈಡ್‌ 1) 03

ಬೌಲಿಂಗ್‌: ಉಮೇಶ್‌ ಯಾದವ್‌ 9–2–29–1, ಆರ್‌.ಅಶ್ವಿನ್‌ 24–6–79–0, ಮಹಮ್ಮದ್‌ ಶಮಿ 6–2–13–0, ರವೀಂದ್ರ ಜಡೇಜ 16–2–76–0, ಹಾರ್ದಿಕ್‌ ಪಾಂಡ್ಯ 5–0–12–1.

ವಿಕೆಟ್‌ ಪತನ: 1–7 (ತರಂಗ; 2.6), 2–198 (ಕುಶಾಲ್‌ ಮೆಂಡಿಸ್‌; 54.5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT