ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣ್ಯಕೋಟಿ

Last Updated 7 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪುಣ್ಯಕೋಟಿ

(ಹೈನುಗಾರಿಕೆ ಹಾಗೂ ಗೋವಿನ ಉತ್ಪನ್ನಗಳ ಸಮಗ್ರ ಮಾಹಿತಿ)
ಲೇಖಕರು: ಮಣಿಕಂಠ ಬಿಳ್ಳೂರು
ಪುಟ: 212
ಬೆಲೆ: 150
ಪ್ರಕಾಶಕರು: ಚಿನ್ಮಯಿ ಪ್ರಕಾಶನ
ಬಿಳ್ಳೂರು ಅಂಚೆ, ಮೂಡಿಗೆರೆ ತಾಲ್ಲೂಕು–577132, ಚಿಕ್ಕಮಗಳೂರು
ಮೊ: 8762900079.

ಗೋವಿಗೆ ಸಂಬಂಧಿಸಿದಂತೆ ಬಹು ಆಯಾಮಗಳನ್ನು ತೆರೆದಿಡುವ ಪ್ರಯತ್ನದ ಪುಸ್ತಕ ‘ಪುಣ್ಯಕೋಟಿ’. ಇತಿಹಾಸದಲ್ಲಿನ ಗೋಸಂಸ್ಕೃತಿಯನ್ನು ವಿವರಿಸುತ್ತಲೇ ದೇಶದ ಅಭಿವೃದ್ಧಿಯಲ್ಲಿ ಗೋ ಉದ್ಯಮದ ಕೊಡುಗೆಯನ್ನೂ ಮನವರಿಕೆ ಮಾಡುವ ಉದ್ದೇಶ ಪುಸ್ತಕದ ಹಿಂದಿದೆ.

ಕೃಷಿ ಹಿನ್ನೆಲೆಯಲ್ಲಿ ಪುಸ್ತಕವನ್ನು ನೋಡುವುದಾದರೆ ಹಲವು ಅಂಶಗಳು ದೊರೆಯುತ್ತವೆ. ಹೈನುಗಾರಿಕೆ ಬೆಳೆದು ಬಂದ ಹಿನ್ನೆಲೆಯನ್ನು ಪುಸ್ತಕ ಬಿಡಿಸಿಟ್ಟಿದೆ. ಗೋವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳು, ಕೀಟಬಾಧೆ, ಹೈನುಗಳಲ್ಲಿ ಕಾಣಿಸಿಕೊಳ್ಳುವ ರೋಗಗಳು, ಲಕ್ಷಣಗಳು ಮತ್ತು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ನಿವಾರಣೆಯ ಚಿಕಿತ್ಸೆಗಳ ದಾರಿಗಳ ಕುರಿತೂ ಚುಟುಕು ವಿವರಣೆಗಳಿವೆ.

ಗರ್ಭಧಾರಣೆ ಸಮಯದಲ್ಲಿ ಪೋಷಣೆ, ಜಾನುವಾರುಗಳ ಆಹಾರ, ಮೇವು ಬೆಳೆಯುವ ವಿಧಾನ ಹೀಗೆ ಹೈನುಗಾರಿಕೆಗೆ ಅತಿ ಅಗತ್ಯ ಅಂಶಗಳ ಮೂಲವನ್ನು ಕಲೆಹಾಕಲಾಗಿದೆ.

ಜೊತೆಗೆ ಬರಗಾಲದಲ್ಲಿ ಗೋವುಗಳ ರಕ್ಷಣೆ ಮಾಡುವ ವಿಧಾನಗಳನ್ನೂ ತಿಳಿಸಿರುವುದು ವಿಶೇಷ. ಹೈನುಗಾರಿಕೆ ಕೈಗೊಂಡವರಿಗೆ ಅನುವಾಗಲೆಂದೇ, ಹೈನುಗಾರಿಕೆಯ ಸಂಘ ಸಂಸ್ಥೆಗಳು, ಹಾಲು ಒಕ್ಕೂಟಗಳು, ಗೋವಿನ ಅಭಿವೃದ್ಧಿಗೆ ಇರುವ ಸಂಶೋಧನಾ ಕ್ಷೇತ್ರಗಳು, ಗೋವಿನ ತಳಿಗಳ ಬಗ್ಗೆ ಮಾಹಿತಿ, ನಬಾರ್ಡ್‌ ಸಂಸ್ಥೆಯಿಂದ ದೊರೆಯುವ ಸೌಲಭ್ಯಗಳು, ಜಾನುವಾರು ವಿಮೆ ಯೋಜನೆಗಳು, ಜಾನುವಾರು ತಳಿ ಸಂವರ್ಧನಾ ಕೇಂದ್ರಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಪಶು ವೈದ್ಯಕೀಯ ಶಿಕ್ಷಣದ ಪರಿಚಯ ಈ ಪುಸ್ತಕದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT