ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಕಾಣದ ಕುಡಿಯುವ ನೀರು: ಆರೋಪ

Last Updated 8 ಆಗಸ್ಟ್ 2017, 9:44 IST
ಅಕ್ಷರ ಗಾತ್ರ

ವಿಜಯಪುರ: ‘ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಶುದ್ಧಕುಡಿಯುವ ನೀರಿನ ಘಟಕದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು ಗುತ್ತಿಗೆ ಪಡೆದುಕೊಂಡಿರುವವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಭಾರತೀಯ ಮಾನವ ಹಕ್ಕುಗಳ ಜಾಗೃತಿ ಅಧ್ಯಕ್ಷ ಎಸ್.ಮಂಜುನಾಥ್ ಆರೋಪಿಸಿದರು.

ಶುದ್ಧ ಕುಡಿಯುವ ನೀರಿನ ಘಟಕದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿವೆ. ಜನರು ನೀರು ಹಿಡಿಯುವ ಜಾಗದಲ್ಲಿ ಪಾಚಿ ಕಟ್ಟಿದ್ದು ಸ್ವಚ್ಛತೆಯಿಲ್ಲ. ವ್ಯರ್ಥವಾಗಿ ಹರಿಯುತ್ತಿರುವ ನೀರು ನಿಂತಲ್ಲೆ ನಿಂತಿರುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗಲು ಸ್ವರ್ಗತಾಣವಾಗಿದೆ ಎಂದು ದೂರಿದರು.

ನೀರಿನ ಘಟಕದಲ್ಲಿ ನೀರು ಶುದ್ಧಿಕರಣವಾದ ನಂತರ ಉಳಿಕೆ ನೀರನ್ನು ಪಾಳುಬಿದ್ದಿರುವ ಕೊಳವೆಬಾವಿಯೊಳಗೆ ಬಿಡಲಾಗುತ್ತಿದೆ. ಶೌಚಾಲಯದ ಗುಂಡಿ ತೆರೆದುಕೊಂಡಿದ್ದರು ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ. ಇಲ್ಲಿನ ಸಿಬ್ಬಂದಿಗೆ ಉಳಿದುಕೊಳ್ಳಲು ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ.

ಮಾನವ ಹಕ್ಕುಗಳ ಪ್ರಚಾರ ಸಮಿತಿ ತಾಲ್ಲೂಕು ಅಧ್ಯಕ್ಷ ಗಣಪತಿ ರಾಜ ಗೋಪಾಲ್ ಮಾತನಾಡಿ, ‘ಇಲ್ಲಿನ ಸಿಬ್ಬಂದಿ ಇಲ್ಲಿಗೆ ಸಿಬ್ಬಂದಿ ಜೊತೆ ಸರಿಯಾಗಿ ನಡೆದುಕೊಳ್ಳುವುದಿಲ್ಲ’ ಎಂದರು.

‘ಒಬ್ಬರಿಗೆ ದಿನಕ್ಕೆ 2 ಕ್ಯಾನ್ ನೀರು ಕೊಡಬೇಕು. ಕೆಲವರು ಬಂದು 30 ಕ್ಯಾನುಗಳವರೆಗೂ ನೀರು ಹಿಡಿದುಕೊಂಡು ಹೋಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ. ಇದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್ ಪರಿಶೀಲನೆ ನಡೆಸಿ, ಸ್ವಚ್ಛತೆ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿರುವ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಮುಖ್ಯಾಧಿಕಾರಿ ಪ್ರಶ್ನೆಗೆ ಉತ್ತರಿಸಿದ ಸಿಬ್ಬಂದಿ ಮಾರುತಿ, ‘ನಾವು ನಾಣ್ಯ ಕೊಡದಿದ್ದರೆ ನಮ್ಮ ಮೇಲೆ ಗಲಾಟೆ ಮಾಡ್ತಾರೆ, ವಿಧಿಯಿಲ್ಲದೆ ಕೊಡಬೇಕು.

ಕಾರುಗಳು, ಆಟೋಗಳು, ಟಾಟಾ ಏಸ್ ಗಳಲ್ಲಿ ಬಂದು ಕ್ಯಾನುಗಳಲ್ಲಿ ತುಂಬಿಸಿಕೊಂಡು ಹೋಗ್ತಾರೆ’ ಎಂದು ಉತ್ತರ ಕೊಟ್ಟರು. ಆರೋಗ್ಯ ನಿರೀಕ್ಷಕ ಉದಯ್ ಶಂಕರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT