ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂ‍‍ಪ್‌ ರೂಢಿಯಿಲ್ಲ...

Last Updated 11 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮುಂಚೆ ಯಾವತ್ತಾದರೂ ರ‍್ಯಾಂಪ್ ವಾಕ್ ಮಾಡಿದ್ದೀರಾ?
ಅಯ್ಯೊ ಇಲ್ಲ. ಇದೇ ಮೊದಲ ಭಾರಿ, ಮಾಡೆಲ್‌ಗಳಿಗಿರಬೇಕಾದ ದೇಹ ನನ್ನದಲ್ಲ. ಹೆಲ್ತಿ ಹುಡುಗಿ ನಾನು. ನನ್ನದೇನಿದ್ದರೂ ಅಭಿನಯದ ಕಡೆಗೆ ಮಾತ್ರ ಗಮನ.

ನೀವು ಫ್ಯಾಷನ್ ಲೋಕದ ಹೊಸತುಗಳನ್ನು ಅನುಸರಿಸುತ್ತೀರಾ?
ಹೌದು ಗಮನಿಸ್ತಾ ಇರ್ತೀನಿ, ನನ್ನ ದೇಹಕ್ಕೆ ಸರಿ ಹೊಂದುತ್ತೆ ಎನ್ನುವ ವಿನ್ಯಾಸವನ್ನಷ್ಟೆ ಆಯ್ಕೆ ಮಾಡಿಕೊಳ್ಳುತ್ತೇನೆ. ನಾನು ಶಾಪಿಂಗ್ ಮಾಡುವಾಗ ನನಗೆ ಕಂಪರ್ಟ್ ನೀಡುವಂತ ಬಟ್ಟೆಗಳೆಡೆಗೆ ಮಾತ್ರ ಗಮನವಹಿಸುತ್ತೇನೆ. ಕಂಪರ್ಟ್ ಇಲ್ಲದ ಎಷ್ಟೆ ಬೆಲೆ ಬಾಳುವ ಬಟ್ಟೆ ತೊಟ್ಟರು ನೋಡುಗರ ಮೇಲೆ ಅದು ಉತ್ತಮ ಪರಿಣಾಮ ಬೀರುವುದಿಲ್ಲ.

ನಿಮ್ಮ ಫ್ಯಾಷನ್ ಐಕಾನ್ ಯಾರು?
ಹಾಲಿವುಡ್ ನಟಿ ಹ್ಯಾರಿ ಹೆಬ್ಬಾನ್ ನನ್ನ ಫ್ಯಾಷನ್ ಐಕಾನ್. ಬಾಲಿವುಡ್‌ನಲ್ಲಿ ಸೋನಂ ಕಪೂರ್ ಅವರ ಫ್ಯಾಷನ್ ಪ್ರಯೋಗಗಳು ಇಷ್ಟವಾಗುತ್ತವೆ.

ಕನ್ನಡ ಚಿತ್ರರಂಗದಲ್ಲಿ ಫ್ಯಾಷನ್ ಸೆನ್ಸ್ ಕಡಿಮೆ ಇದೆ ಅನ್ಸುತ್ತಾ?
ಹಾಗೇನಿಲ್ಲ ಕನ್ನಡ ಚಿತ್ರರರಂಗ, ಬದಲಾಗುತ್ತಿರುವ ಫ್ಯಾಷನ್‌ಗೆ ತನ್ನನ್ನು ತಾನು ಸದಾ ಒಡ್ಡಿಕೊಂಡಿದೆ. ಇತ್ತೀಚೆಗೆ ಚಿತ್ರರಂಗಕ್ಕೆ ಬರುತ್ತಿರುವವರಿಗಂತೂ ಉತ್ತಮ ಫ್ಯಾಷನ್ ಸೆನ್ಸ್ ಇದೆ. ಮುಂಚೆಯೂ ಹೀಗೆ ಇತ್ತು. ಕಲ್ಪನಾ, ಜಯಂತಿ ಅವರೆಲ್ಲ ತಮ್ಮ ಕಾಲದಲ್ಲಿ ಆಗಿನ ಫ್ಯಾಷನ್ ಟ್ರೆಂಡ್‌ಗಳನ್ನು ಫಾಲೊ ಮಾಡುತ್ತಿದ್ದವರೇ ಆಗಿದ್ದರು.

ಮುಂದಿನ ಚಿತ್ರ?
‘ಮಾಸ್ ಲೀಡರ್’ ಚಿತ್ರ ಸದ್ಯ ನಾನು ನಿರೀಕ್ಷೆ ಇಟ್ಟುಕೊಂಡಿರುವ ಚಿತ್ರ. ಮೊದಲ ಬಾರಿಗೆ ಶಿವರಾಜ್‌ಕುಮಾರ್ ಅವರ ಜೊತೆ ನಟಿಸಿದ್ದೇನೆ. ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ಇದೊಂದು ಸಾಮಾಜಿಕ ಕಳಕಳಿ ಹೊಂದಿದ ಸಿನಿಮಾ. ರಾಜಕೀಯದ ಎರಡೂ ಮುಖದ ಮೇಲೆ ಬೆಳಕು ಚೆಲ್ಲುವಂತೆ ಕತೆ ಹೆಣೆಯಲಾಗಿದೆ. ಚಿತ್ರ ಸ್ವಾತಂತ್ರ್ಯ ದಿನದಂದು ಬಿಡುಗಡೆ ಆಗಲಿದೆ.

ಶಿವಣ್ಣ ಅವರೊಂದಿಗೆ ನಟನೆಯ ಅನುಭವ ಹೇಗಿತ್ತು?
ಖಂಡಿತಾ ನಾನು ಹೆದರಿದ್ದೆ. ಅವರೊಬ್ಬ ಅನುಭವಿ ನಟ. ಅಪಾರ ಅಭಿಮಾನಿ ಬಳಗ ಹೊಂದಿದ ಸ್ಟಾರ್ ನಟ. ಆದರೆ ಅವರು ಸಾಕಷ್ಟು ಸಹಾಯ ಮಾಡಿದರು. ನಾನಷ್ಟೆ ಅಲ್ಲ ಅವರ ಸಹನಟರಿಗೆಲ್ಲಾ ಅವರು ಸ್ಫೂರ್ತಿ ಮತ್ತು ಆತ್ಮವಿಶ್ವಾಸ ತುಂಬಿ ಉತ್ತಮವಾಗಿ ನಟಿಸುವಂತೆ ಪ್ರೇರೇಪಿಸುತ್ತಾರೆ. ಅವರದು ಎಂದಿಗೂ ಕುಂದದ ಉತ್ಸಾಹ.

ಚಿತ್ರರಂಗ ಹೊಸ ದಾರಿ ತುಳಿದಿದೆ ಅನಿಸ್ತಿದೆಯಾ?
ಹೌದು, ಹೊಸಬರು ಹೊಸ ಯೋಚನೆಗಳೊಂದಿಗೆ ಚಿತ್ರರಂಗಕ್ಕೆ ಬಂದಿದ್ದಾರೆ. ನಟರಾಗಲಿ, ನಿರ್ದೇಶಕರಾಗಲಿ ಅತ್ಯುತ್ತಮ ವೃತ್ತಿಪರತೆ ಪ್ರದರ್ಶನ ಮಾಡುತ್ತಿದ್ದಾರೆ. ಹೊಸಬರ ಯೋಜನೆ ಉತ್ತಮವಾಗಿದೆ ಹಾಗಾಗಿ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಾಗುತ್ತಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅವರು ಭಿನ್ನವಾಗಿ ಯೋಚಿಸುತ್ತಿದ್ದಾರೆ. ಚಿತ್ರರಂಗ ಉತ್ತಮವಾಗಿ ಬೆಳೆಯಲು ಇದು ಒಳ್ಳೆಯದು. ಹೊಸಬರು ಸ್ಟಾರ್‌ಗಿರಿಗಿಂತಲೂ ಕತೆಯನ್ನೇ ಮೆಚ್ಚಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳು ಅಚ್ಚುಮೆಚ್ಚಂತೆ?
ಹೌದು, ಅದು ಜೀವನದ ಒಂದು ಭಾಗದಂತೆ ಆಗಿಬಿಟ್ಟಿದೆ. ಸಿನಿಮಾ ವಿಚಾರ, ಗೆಳೆಯರು, ಪ್ರವಾಸ ಎಲ್ಲವನ್ನೂ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಮಾಡುತ್ತಲೇ ಇರುತ್ತೇನೆ. ಸ್ಟಾರ್‌ ವಾರ್‌ ಮುಂತಾದವುಗಳನ್ನು ಗಮಸಿಸುತ್ತೇನೆ ಆದರೆ ಅದನ್ನು ಪ್ರೋತ್ಸಾಹಿಸುವುದಿಲ್ಲ. ಅವುಗಳ ಬಗ್ಗೆ ನನಗೆ ಆಸಕ್ತಿ ಇಲ್ಲ.

ನಿಮ್ಮ ಫಿಟ್‌ನೆಸ್‌ ಬಗ್ಗೆ ಹೇಳಿ?
ಯಾವ ಡಯಟ್‌ ಕೂಡ ಅನುಸರಿಸಲ್ಲ ಚೆನ್ನಾಗಿ ತಿನ್ತೀನಿ. ಆದರೆ ವ್ಯಾಯಾಮವನ್ನು ಎಂದಿಗೂ ಬಿಟ್ಟಿಲ್ಲ. ಪ್ರತಿ ದಿನ ಜಿಮ್‌ಗೆ ಹೋಗುತ್ತೇನೆ. ವ್ಯಾಯಾಮ ಮಾಡ್ತೀನಿ.

ಚಿತ್ರರಂಗದಲ್ಲಿ ನಿಮ್ಮ ಬೆಸ್ಟ್ ಫ್ರೆಂಡ್ ಯಾರು?
ಬಹಳ ಜನ ಗೆಳೆಯರಿದ್ದಾರೆ. ರಮ್ಯಾ, ಪ್ರಣೀತಾ, ಐಂದ್ರಿತಾ, ರಾಗಿಣಿ, ಶ್ರುತಿ ಹೀಗೆ ಸಾಕಷ್ಟು ಮಂದಿ ಗೆಳತಿಯರಿದ್ದಾರೆ. ನನಗೆ ಹೊರಗಿನವರಿಗಿಂತಲೂ ಚಿತ್ರರಂಗದಲ್ಲೇ ಗೆಳೆಯರೇ ಜಾಸ್ತಿ. ಹೀರೊಯಿನ್‌ಗಳು ಗೆಳೆಯರಾಗಲು ಸಾಧ್ಯವಿಲ್ಲ ಎಂಬ ಮಾತು ನನಗೆ ಅನ್ವಯಿಸುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT