ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಜರಂಗ್ ಸ್ಪರ್ಧೆ

Last Updated 12 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಬಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಶನಿವಾರ ಫ್ರಾನ್ಸ್‌ನಲ್ಲಿ ನಡೆದ ವಿಶೇಷ ಆಯ್ಕೆ ಟ್ರಯಲ್ಸ್‌ನಲ್ಲಿ ಬಜರಂಗ್‌ 10–0ಯಲ್ಲಿ ರಾಹುಲ್ ಮಾನ್ ಅವರನ್ನು ಮಣಿಸಿದರು. ಆಗಸ್ಟ್‌ 21ರಿಂದ ಆರಂಭವಾಗಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬಜರಂಗ್‌ ಪುರುಷರ 65 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಕಳೆದ ತಿಂಗಳು ಸೋನೆಪತ್‌ನಲ್ಲಿ ನಡೆದ 65 ಕೆ.ಜಿ ವಿಭಾಗದ ಟ್ರಯಲ್ಸ್‌ನ ಮಾನ್ ಜಯದಾಖಲಿಸಿದ್ದರು. ಬಳಿಕ ಬಜರಂಗ್‌ ಭಾರತ ಕುಸ್ತಿ ಸಂಸ್ಥೆಗೆ (ಡಬ್ಲ್ಯುಎಫ್‌ಐ) ಪತ್ರ ಬರೆದಿದ್ದರು.

‘ಟ್ರಯಲ್ಸ್ ನಡೆದ ವೇಳೆ ನಾನು ಜ್ವರದಿಂದ ಬಳಲುತ್ತಿದ್ದೆ. ಚೇತರಿಸಿಕೊಂಡ ಬಳಿಕ ನನಗೆ ಇನ್ನೊಂದು ಅಂತಿಮ ಟ್ರಯಲ್ಸ್‌ನಲ್ಲಿ ಸಾಮರ್ಥ್ಯ ಒಡ್ಡುವ ಅವಕಾಶ ನೀಡಬೇಕು’ ಎಂದು ಅವರು ಪತ್ರದಲ್ಲಿ ಕೋರಿದ್ದರು.

ಮಾನ್ ಕುತ್ತಿಗೆಯ ಗಾಯಕ್ಕೆ ಒಳಗಾಗಿದ್ದರಿಂದ ಟ್ರಯಲ್ಸ್ ಮುಂದೂಡಲಾಗಿತ್ತು. ಸೋನೆಪತ್‌ನಲ್ಲಿ ನಡೆದ ಟ್ರಯಲ್ಸ್ ಬಳಿಕ ಭಾರತ ತಂಡವನ್ನು ಅಂತಿಮಗೊಳಿಸಿತ್ತು. ಡಬ್ಲ್ಯುಎಫ್‌ಐ ಈ ಟ್ರಯಲ್ಸ್‌ ಅನ್ನು ಫ್ರಾನ್ಸ್‌ನಲ್ಲಿ ನಡೆಸಲು ಯೋಜನೆ ರೂಪಿಸಿತ್ತು.

ತಂಡ ಇಂತಿದೆ: ಫ್ರೀಸ್ಟೈಲ್‌: ಸಂದೀಪ್ ತೋಮರ್‌ (57ಕೆ.ಜಿ), ಹರ್ಪೂಲ್‌ (61ಕೆ.ಜಿ), ಬಜರಂಗ್ ಪೂನಿಯಾ (65ಕೆ.ಜಿ), ಅಮಿತ್ ಧನಕರ್‌ (70ಕೆ.ಜಿ), ಪ್ರವೀಣ್‌ ರಾಣಾ (74ಕೆ.ಜಿ), ದೀಪಕ್ (86ಕೆ.ಜಿ), ಸತ್ಯವ್ರತ್‌ ಕಡಿಯಾನ್‌ (97ಕೆ.ಜಿ), ಸುಮಿತ್‌ (125ಕೆ.ಜಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT