ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ

Last Updated 12 ಆಗಸ್ಟ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ಕುವೆಂಪು ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ರೂಪಿಸಿದ್ದ ವಿಶೇಷ ಅಂಚೆ ಚೀಟಿಯನ್ನು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ. ನಾಗರಾಜಯ್ಯ ಮತ್ತು ಇನ್ಫೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಶನಿವಾರ ಲಾಲ್‌ಬಾಗ್‌ನಲ್ಲಿ ಬಿಡುಗಡೆ ಮಾಡಿದರು.

ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರತು 50 ವರ್ಷಗಳು ತುಂಬಿದ ಸಂದರ್ಭವನ್ನು ಸ್ಮರಿಸುತ್ತಿರುವ ತೋಟಗಾರಿಕೆ ಇಲಾಖೆ, ಈ ಗೌರವ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರಿಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಸಮರ್ಪಿಸಿದೆ.

ಕುವೆಂಪು ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ರೂಪಿಸಲು ಇದೇ ಸುಸಂದರ್ಭ ಎಂದು ತಿಳಿದ ಅಂಚೆ ಇಲಾಖೆ ಲಾಲ್‌ಬಾಗ್‌ನಲ್ಲಿ ಗುಲಾಬಿ ಹೂಗಳಿಂದ ಅರಳಿರುವ ಕುವೆಂಪು ಕುಪ್ಪಳಿ ಮನೆಯ ಎದುರು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಈ ಅಂಚೆಚೀಟಿ ₹10 ಮೌಲ್ಯದ್ದಾಗಿದೆ.

ಸುಧಾಮೂರ್ತಿ, ‘ಕುವೆಂಪು ಅವರ ಮೂಲ ಮನೆಯನ್ನು ನೋಡಿದಷ್ಟೇ ಸಂತೋಷವಾಗುತ್ತದೆ. ನಗರದ ಜನರಿಗೆ ಸಾಹಿತ್ಯದ ಕಂಪು ಹರಡಲು ಈ ರೀತಿ ಸಂದರ್ಭಗಳು ಬಹಳಷ್ಟು ಕೊಡುಗೆ ನೀಡುತ್ತವೆ. ಇದೇ ರೀತಿ ರಾಜ್ಯದ ಅನೇಕ ಸ್ಥಳಗಳು ಲಾಲ್‌ಬಾಗ್‌ನಲ್ಲಿ ಅರಳಲಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT