ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೇನ್‌ನಲ್ಲಿ ಉಗ್ರರ ದಾಳಿ: 13 ಮಂದಿ ಸಾವು, 100 ಜನ ಗಾಯ

Last Updated 18 ಆಗಸ್ಟ್ 2017, 5:56 IST
ಅಕ್ಷರ ಗಾತ್ರ

ಬಾರ್ಸಿಲೋನ: ಸ್ಪೇನ್‌ನಲ್ಲಿ ಎರಡು ಪ್ರತ್ಯೇಕ ದಾಳಿ ನಡೆದಿದ್ದು, 13 ಜನ ಸಾವಿಗೀಡಾಗಿದ್ದಾರೆ. 100 ಮಂದಿ ಗಾಯಗೊಂಡಿದ್ದಾರೆ.

ಬಾರ್ಸಿಲೋನ ಮತ್ತು ಪ್ರಸಿದ್ಧ ಕಡಲತೀರದಲ್ಲಿನ ನಗರದಲ್ಲಿ ಗುರುವಾರ ಮಧ್ಯಾಹ್ನ ಉಗ್ರರು ದಾಳಿ ನಡೆಸಿದ್ದಾರೆ. ಒಬ್ಬ ಉಗ್ರ ಜನ ಸಂದಣಿಯಿರುವ ರಸ್ತೆಯಲ್ಲಿ ಟ್ರಕ್‌ಅನ್ನು ಪಾದಚಾರಿಗಳ ಮೇಲೆ ನುಗ್ಗಿಸಿದ್ದು, 13 ಜನ ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ 100 ಜನ ಗಾಯಗೊಂಡಿದ್ದಾರೆ.

ಸ್ಪೇನ್‌ನ ಬಾರ್ಸಿಲೋನದ ಪ್ರಸಿದ್ಧ ಲಾಸ್ ರಾಂಬ್ಲಾಸ್‌ ಪ್ರವಾಸಿ ತಾಣದಲ್ಲಿ ಈ ದಾಳಿಯಾಗಿದ್ದು, ಇದು ಉಗ್ರರ ದಾಳಿ ಎಂದು ಸ್ಪೇನ್‌ ಪೊಲೀಸರು ಹೇಳಿದ್ದಾರೆ.

ದಾಳಿಯ ಬಳಿಕ ಪರಾರಿಯಾಗಲು ಯತ್ನಿಸಿದ್ದ ಉಗ್ರ, ಲಾರಿ ಚಾಲಕನ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಉಗ್ರರಿಗಾಗಿ ಶೋಧ ನಡೆಸಿರುವ ಪೊಲೀಸರು ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದಾರೆ ಎಂದು ವರದಿಯಾಗಿದೆ. ಸ್ಪೇನ್‌ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT