ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‍‍ನಿಂದ ಬಳಲುತ್ತಿರುವ ಖ್ಯಾತ ಗಾಯಕ ಎಲ್.ಎನ್. ಶಾಸ್ತ್ರಿ ಅವರಿಗೆ ಬೇಕಿದೆ ಸಹಾಯಹಸ್ತ

Last Updated 18 ಆಗಸ್ಟ್ 2017, 13:53 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಎಲ್.ಎನ್. ಶಾಸ್ತ್ರಿ ಎಂದೇ ಚಿರಪರಿಚಿತರಾಗಿರುವ ಲಕ್ಷ್ಮಿ ನರಸಿಂಹ ಶಾಸ್ತ್ರಿ ಅವರು ಕರುಳು ಕ್ಯಾನ್ಸರ್‍‍ನಿಂದ ಬಳಲುತ್ತಿದ್ದಾರೆ. ಹಲವಾರು ಸ್ಟಾರ್ ನಟರ ಸೂಪರ್ ಹಿಟ್ ಹಾಡುಗಳಿಗೆ ದನಿಯಾಗಿದ್ದ ಶಾಸ್ತ್ರಿಯವರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಡೆದಾಡಲೂ ಸಾಧ್ಯವಾಗದೇ ಹಾಸಿಗೆ ಹಿಡಿದಿದ್ದಾರೆ.

ಅವರ ಪತ್ನಿ ಗಾಯಕಿ ಸುಮಾ ಶಾಸ್ತ್ರಿ ಆರೈಕೆ ಮಾಡುತ್ತಿದ್ದು, ಈ ಕುಟುಂಬ ಆರ್ಥಿಕವಾಗಿ ಕಂಗಾಲಾಗಿದೆ.

'ಎ', 'ಜನುಮದ ಜೋಡಿ', 'ಸಿಪಾಯಿ', 'ಜೋಡಿ ಹಕ್ಕಿ' ಮೊದಲಾದ ಚಿತ್ರದ ಹಾಡುಗಳು ಸೇರಿದಂತೆ 3000ಕ್ಕೂ ಅಧಿಕ ಹಾಡನ್ನು ಎಲ್.ಎನ್.ಶಾಸ್ತ್ರಿ ಹಾಡಿದ್ದಾರೆ. ಶಿವರಾಜ್ ಕುಮಾರ್ ನಟಿಸಿದ 'ಜನುಮದ ಜೋಡಿ' ಚಿತ್ರದಲ್ಲಿ ಶಾಸ್ತ್ರಿ ಹಾಡಿದ 'ಕೋಲು ಮಂಡೆ ಜಂಗಮ ದೇವಾ...' ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

ಶಾಸ್ತ್ರಿಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯವನ್ನು ಪತ್ರಕರ್ತ ಗಣೇಶ್ ಕಾಸರಗೋಡು ಅವರು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ.

ಶಾಸ್ತ್ರಿ ಅವರ ಚಿಕಿತ್ಸೆಗೆ ಆರ್ಥಿಕ ಸಹಾಯದ ಅಗತ್ಯವಿದ್ದು, ಸಹಾಯ ಮಾಡಲಿಚ್ಛಿಸುವವರು ಈ ಕೆಳಗಿನ ಖಾತೆಗೆ ಹಣ ಕಳಿಸಬಹುದಾಗಿದೆ,

ಅಕೌಂಟ್ ನಂಬರ್: LAKSHMI NARASIMHA SHASTRY
Acc no - 54055948416
SBI bank vinayaka layout Vijayanagar
Banglore
Katnataka
IFSC : SBIN0040790

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT