ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಟೊಗಳ ಹಬ್ಬ!

ರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯ ಅಂತಿಮ ಸುತ್ತು
Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಶ್ರಾವಣದಲ್ಲಿ ಹಬ್ಬಗಳ ಮೆರವಣಿಗೆ ಮಧ್ಯೆ ಇದೊಂದು ವಿಭಿನ್ನ ಹಬ್ಬ. ಏಷ್ಯಾದ ಅತ್ಯುತ್ತಮ ಫೋಟೊಗಳನ್ನು ಕಣ್ತುಂಬಿಕೊಳ್ಳುವ ಅಪರೂಪದ ಅವಕಾಶ. ಏಷ್ಯಾದ ಛಾಯಾಗ್ರಹಣಪ್ರಿಯರ ಪ್ರತಿಷ್ಠೆಯ ವೇದಿಕೆ ಎಂದೇ ಹೇಳಲಾಗುವ ‘ನಿಸರ್ಗ ಮತ್ತು ವನ್ಯಜೀವಿ ಛಾಯಾಗ್ರಹಣ ಉತ್ಸವ’ದ ನಾಲ್ಕನೇ ಆವೃತ್ತಿ ‘ನೇಚರ್ ಇನ್‌ಫೋಕಸ್‌’ ನಗರದಲ್ಲಿ ಏರ್ಪಾಡಾಗಿರುವುದು ಇದಕ್ಕೆ ಕಾರಣ.

ಅಡೋಬ್‌ ಇಂಡಿಯಾ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದಲ್ಲಿ ಈ ಉತ್ಸವ ನಡೆಯಲಿದೆ. ಇದಕ್ಕೂ ಮುಂಚೆ ಅಂದರೆ ಮೇ ತಿಂಗಳಿನಿಂದ ಜುಲೈವರೆಗೂ ಏಷ್ಯಾದ ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಂದ ಪ್ರವೇಶಗಳನ್ನು ಆಹ್ವಾನಿಸಲಾಗಿತ್ತು. ಎಲ್ಲಾ ವಿಭಾಗಗಳಿಗೆ 3,887 ಛಾಯಾಚಿತ್ರಗಳು ಬಂದಿದ್ದವು. ಇವುಗಳಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಫೋಟೊಗಳ ಪ್ರದರ್ಶನ ಇರುತ್ತದೆ. ಉತ್ಸವದ ಕೊನೆಯಲ್ಲಿ, ಈ ವರ್ಷದ ಎನ್‌ಐಎಫ್ ಛಾಯಾಗ್ರಹಣ ಪ್ರಶಸ್ತಿಗೆ ಆಯ್ಕೆ  ಹಾಗೂ ಪ್ರಶಸ್ತಿ ಪ್ರದಾನ ನಡೆಯುತ್ತದೆ.

‘ಹಲವು ವರ್ಷಗಳಿಂದ ನೇಚರ್ ಇನ್‌ಫೋಕಸ್ ಉತ್ಸವ ನಿಸರ್ಗ ಮತ್ತು ವನ್ಯಜೀವಿ ಛಾಯಾಗ್ರಾಹಕರಿಗೆ ವೇದಿಕೆ ಕಲ್ಪಿಸುತ್ತಿದೆ. ಈ ಉತ್ಸವ ಛಾಯಾಚಿತ್ರಗಳ ಸ್ಪರ್ಧೆ, ಪ್ರಶಸ್ತಿ ಮತ್ತು ಪ್ರದರ್ಶನಕ್ಕಷ್ಟೇ ಸೀಮಿತವಾಗಿಲ್ಲ. ಉತ್ಸವದಲ್ಲಿ ಎರಡೂ ದಿನ ಜಗತ್ತಿನ ಛಾಯಾಗ್ರಹಣ ಲೋಕದ ವಿವಿಧ ವಿಭಾಗಗಳಲ್ಲಿ ಹೆಸರು ಮಾಡಿರುವ ಅಪರೂಪದ ಸಾಧಕರೊಂದಿಗೆ ಸಂವಾದ ಹಾಗೂ ಛಾಯಾಗ್ರಹಣದ ಬಗ್ಗೆ ಕಾರ್ಯಾಗಾರ, ಪ್ರಾತ್ಯಕ್ಷಿಕೆ ನಡೆಯಲಿದೆ. ಇದು ಹವ್ಯಾಸಿ ಮತ್ತು ವೃತ್ತಿಪರ ಛಾಯಾಗ್ರಾಹಕರಿಗೆ ಅಪರೂಪದ ಅವಕಾಶ’ ಎಂದು ‘ನೇಚರ್ ಇನ್‌ಫೋಕಸ್‌ನ ಸಂಸ್ಥಾಪಕ ರೋಹಿತ್ ವರ್ಮಾ ಹೇಳಿದರು.

ಆಗಸ್ಟ್‌ 19 ಮತ್ತು 20ರಂದು ನಡೆಯುವ ಕಾರ್ಯಾಗಾರದಲ್ಲಿ ಆಸಕ್ತ ಛಾಯಾಗ್ರಾಹಕರು, ಉತ್ಸಾಹಿಗಳು ಪಾಲ್ಗೊಳ್ಳಬಹುದು. ಒಂದು ದಿನಕ್ಕೆ ₹1,000 ಮತ್ತು ಎರಡೂ ದಿನಕ್ಕೆ ₹1,800 ಶುಲ್ಕ ಇರುತ್ತದೆ. ಛಾಯಾಗ್ರಹಣ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ತಜ್ಞರಾದ ವಿದ್ಯಾ ಅತ್ರೇಯ, ಟ್ರೆವೊರ್ ಫ್ರಾಸ್ಟ್, ಮೊರ್ಡೋಕ್‌ ಒಗಾಡ, ಸ್ವಾತಿ ತ್ಯಾಗರಾಜನ್, ಬಿವಾಶ್‌ ಪಾಂಡವ್, ನಯನ್‌ ಖಾನೋಳ್ಕರ್‌, ರೋಹನ್‌ ಚಕ್ರವರ್ತಿ, ಪಿ. ಜಗನಾಥನ್‌, ಸುಮೇರ್‌ ವರ್ಮಾ, ಧೀಮಂತ್‌ ವ್ಯಾಸ್‌, ಪೂಜಾ ರಾಥೋಡ್‌, ಗಿರಿ ಕಾವಳೆ, ಶಿವಾಂಗ್‌ ಮೆಹ್ತಾ, ಧಿರಜ್‌ ಎಂ. ನಂದಾ ಅವರು ಕಾರ್ಯಾಗಾರದಲ್ಲಿ ಮಾತನಾಡಲಿದ್ದಾರೆ. ಉತ್ಸವದ ವೇಳೆ ಬುಡಕಟ್ಟು ಜನಾಂಗದವರ ಕರಕುಶಲ ವಸ್ತುಗಳು ಹಾಗೂ ಕಲೆಗಳ ಪ್ರದರ್ಶ ಮತ್ತು ಮಾರಾಟ ಕೂಡಾ ಇರುತ್ತದೆ ಎಂದು ವರ್ಮಾ ಮಾಹಿತಿ ನೀಡಿದರು.

**

ಸ್ಥಳ– ಹೋಟೆಲ್ ಕ್ರೌನ್‌ ಪ್ಲಾಜಾ, ಎಲೆಕ್ಟ್ರಾನಿಕ್ ಸಿಟಿ. ಸಮಯ– ಎರಡೂ ದಿನ ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ. ನೋಂದಣಿ ಮತ್ತು ಇತರ ಮಾಹಿತಿಗೆ: http://www.natureinfocus.in

**

ಕರಿಚಿರತೆಯ ಅಪರೂಪದ ಫೋಟೊ ವಿನಯ್‌ ವೇಣುಗೋಪಾಲ್‌

*

ಯುವ ಛಾಯಾಗ್ರಾಹಕ ಧೀರಜ್‌ ನಂದಾ ಅವರ ಸಾಗರದಾಳದ ಚಿತ್ರ

*

ಹುಲಿಗಳ ಜಲಕ್ರೀಡೆ! ಮಂಗೇಶ್‌ ದೇಸಾಯಿ

*

ನಮ್‌ ಫ್ಯಾಮಿಲಿ ಫೋಟೊ ತೆಗೆದವರು ರಚಿತ್‌ ಶಾ

*

-ಪ್ರತೀಕ್‌ ಪ್ರಧಾನ ಅವರ ಛಾಯಾಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT