ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ, 19–8-2017

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕೊಚ್ಚಿ ನೌಕಾಂಗಣ ಯೋಜನೆ ಅಂಗೀಕಾರ
ನವದೆಹಲಿ, ಆ. 18–
ಪ್ರಸಕ್ತ ಯೋಜನೆಯ ಅವಧಿಯೊಳಗಾಗಿಯೇ ನಿರ್ಮಾಣವಾಗಬೇಕೆಂದು ನಿರೀಕ್ಷಿಸಲಾಗಿರುವ ಕೊಚ್ಚಿ ನೌಕಾಂಗಣ ಯೋಜನೆಗೆ ಸರ್ಕಾರವು ಅಂಗೀಕಾರವಿತ್ತಿದೆ ಎಂದು ಸಾರಿಗೆ ಮತ್ತು ನೌಕಾ ಸಾರಿಗೆ ಸಚಿವ ಶ್ರೀ ಡಾ. ವಿ.ಕೆ.ಆರ್.ವಿ. ರಾವ್ ಅವರು ಇಂದು ರಾಜ್ಯಸಭೆಯಲ್ಲಿ ಪ್ರಕಟಿಸಿದರು.

ಅಗತ್ಯವಾದ ಪೂರ್ವಭಾವಿ ಸಿದ್ಧತೆಗಳು ಮುಗಿದ ನಂತರ ಈ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಈ ನೌಕಾಂಗಣದಲ್ಲಿ ಒಂದೇ ಒಂದು ವರ್ಗದ, ಎಂದರೆ 66 ಸಾವಿರ ಟನ್‌ನ ನೌಕೆಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗುವುದು. ಉತ್ಪಾದನೆಯ ಪೂರ್ಣ ಸಾಮರ್ಥ್ಯವನ್ನು ಪಡೆದ ನಂತರ ವರ್ಷಕ್ಕೆ ಎರಡು ನೌಕೆಗಳನ್ನು ನಿರ್ಮಿಸಲಾಗುವುದು.

ಪ್ರಾದೇಶಿಕ ಭಾಷೆ ಶಿಕ್ಷಣ ಮಾಧ್ಯಮವಾದರೆ ರಾಷ್ಟ್ರದ ಏಕತೆಗೆ ಹಾನಿ
ನವದೆಹಲಿ, ಆ. 18–
ಪ್ರಾದೇಶಿಕ ಭಾಷೆಯನ್ನು ಬೋಧನ ಮಾಧ್ಯಮವಾಗಿ ಮಾಡುವ ಹೊಸ ಶಿಕ್ಷಣ ನೀತಿಯು ರಾಷ್ಟ್ರದ ಐಕಮತ್ಯಕ್ಕೆ ಭಂಗ ತರುವುದೆಂದೂ, ಅಲ್ಲದೆ ದೇಶ ಛಿದ್ರವಾಗುವುದಕ್ಕೆ ಎಡೆಮಾಡಿಕೊಡುತ್ತದೆಂದೂ ಇಂದು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ಸಭೆಯಲ್ಲಿ ಕೆಲವು ಮಂದಿ ಸದಸ್ಯರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT