ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಸಿಲೋನ :ಐವರು ಶಂಕಿತ ಭಯೋತ್ಪಾದಕರ ಹತ್ಯೆ

Last Updated 18 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬಾರ್ಸಿಲೋನ (ಸ್ಪೇನ್‌) (ಎಪಿ): ಇಲ್ಲಿನ ಲಾಸ್‌ ರಾಂಬ್ಲಾಸ್‌ ಪ್ರದೇಶದಲ್ಲಿ ಗುರುವಾರ ರಾತ್ರಿ ನಡೆದಿದ್ದ ಐ.ಎಸ್‌ ದಾಳಿ ಸಂಬಂಧ, ಐವರು ಶಂಕಿತ ಭಯೋತ್ಪಾದಕರನ್ನು ಶುಕ್ರವಾರ ಗುಂಡಿಕ್ಕಿ ಕೊಂದಿರುವ ಸ್ಪೇನ್‌ ಪೊಲೀಸರು, ನಾಲ್ವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಒಟ್ಟು 14 ಜನ ಮೃತಪಟ್ಟಿದ್ದಾರೆ.

ಮತ್ತೊಂದು ದಾಳಿಯಲ್ಲಿ ಏಳು ಜನರಿಗೆ ಗಾಯ: ದೇಶದ ಕ್ಯಾಂಬ್ರಿಲ್ಸ್ ಸಮುದ್ರ ತೀರದ ರೆಸಾರ್ಟ್‌ನಲ್ಲಿ ಶುಕ್ರವಾರ ಬೆಳಿಗ್ಗೆ ಕಾರೊಂದು ಜನರ ಮೇಲೆ ನುಗ್ಗಿದ ಪರಿಣಾಮವಾಗಿ ಆರು ನಾಗರಿಕರು ಮತ್ತು ಒಬ್ಬ ಪೊಲೀಸ್‌ ಗಾಯಗೊಂಡಿದ್ದಾರೆ. ಒಬ್ಬ ಗಾಯಾಳುವಿನ ಸ್ಥಿತಿ ಚಿಂತಾಜನಕವಾಗಿದೆ. ರಾಂಬ್ಲಾಸ್‌ ಪ್ರದೇಶದಲ್ಲಿ ದಾಳಿ ನಡೆದ ಎಂಟು ಗಂಟೆಗಳ ಅಂತರದಲ್ಲಿ ಈ ದಾಳಿ ನಡೆದಿದೆ. ಆಡಿ3 ಕಾರ್‌ ಅನ್ನು ಜನರೆಡೆಗೆ ದಾಳಿಕೋರ ನುಗ್ಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕ್ಯಾಂಬ್ರಿಲ್ಸ್‌ನಲ್ಲಿ ದಾಳಿ ನಡೆಸಿದ ನಾಲ್ವರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ. ರಾಂಬ್ಲಾಸ್‌ ದಾಳಿ ಸಂಬಂಧ ಬಂಧಿಸಲಾಗಿರುವ ಇಬ್ಬರಲ್ಲಿ ಒಬ್ಬಾತ ಸ್ಪೇನ್‌ ಹಾಗೂ ಮತ್ತೊಬ್ಬ ಮೊರಾಕ್ಕೊ ದೇಶದವನು. ಚಾಲಕ ಇನ್ನೂ ಪತ್ತೆಯಾಗಿಲ್ಲ.

ಸ್ಪೇನ್‌ನಲ್ಲಿ ನಡೆದ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ‘ಇದೊಂದು ಅನಾಗರಿಕ ಮತ್ತು ಹೇಡಿತನದ ಕೃತ್ಯ’ ಎಂದು ಹೇಳಿದೆ. ಈ ದಾಳಿಯ ಸಂಚು
ಕೋರರು ಮತ್ತು ಹಣಕಾಸು ನೆರವು ಒದಗಿಸಿ ದವರಿಗೆ ಶಿಕ್ಷೆಯಾಗಬೇಕು. ದಾಳಿ ಯಲ್ಲಿ ಮೃತಪಟ್ಟವರಿಗೆ ನ್ಯಾಯ ದೊರೆಯಬೇಕು’ಎಂದು ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

ಭಾರಿ ಸಂಚು ವಿಫಲ: ಸ್ಪೇನ್‌ನಲ್ಲಿ ಎರಡು ಕಡೆ ದಾಳಿ ನಡೆಸಿರುವ ಉಗ್ರರು ಭಾರಿ ದೊಡ್ಡ ಸಂಚು ರೂಪಿಸಿದ್ದರು, ಆದರೆ ಅವರು ತಮ್ಮ ಯತ್ನದಲ್ಲಿ ವಿಫಲರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

34 ದೇಶಗಳ ನಾಗರಿಕರು: ದಾಳಿಯಿಂದ ಗಾಯಗೊಂಡಿರುವ ನಾಗರಿಕರು ಫ್ರಾನ್ಸ್, ಪಾಕಿಸ್ತಾನ, ಚೀನಾ, ನೆದರ್ಲೆಂಡ್ಸ್‌ ಮುಂತಾದ 34 ದೇಶಗಳಿಗೆ ಸೇರಿದವರು ಎಂದು ನಾಗರಿಕ ರಕ್ಷಣಾ ಏಜೆನ್ಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT