ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ ನನ್ನ ಪಾಲಿಗೆ ಕಠಿಣವಾಗಿರಲಿಲ್ಲ

Last Updated 18 ಆಗಸ್ಟ್ 2017, 19:38 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಭಾರತ ತಂಡದ ಹಿಂದಿನ ಕೋಚ್‌ ಅನಿಲ್ ಕುಂಬ್ಳೆ ಅವರು ಕಠೋರ ವ್ಯಕ್ತಿತ್ವದವರಾಗಿರಲಿಲ್ಲ ಎಂದು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ವೃದ್ಧಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಗಿಸಿ ಮರಳಿದ ಅವರು ಪತ್ರಕರ್ತರ ಜೊತೆ ಮಾತನಾಡಿದರು.

ಈ ಸಂದರ್ಭದಲ್ಲಿ ಕುಂಬ್ಳೆ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ‘ಕುಂಬ್ಳೆ ಅವರು ತರಬೇತಿ ನೀಡುತ್ತಿದ್ದ ವಿಧಾನ ಕಠಿಣವಾಗಿತ್ತು ಎಂದು ನನಗೆ ಅನಿಸುತ್ತಿಲ್ಲ. ಕೋಚ್‌ ಆಗಿ ಅವರ ವರ್ತನೆ ಸರಿ ಇತ್ತು’ ಎಂದು ಅವರು ಹೇಳಿದರು.

‘ಕುಂಬ್ಳೆ ಅವರು ಟೆಸ್ಟ್‌ನಲ್ಲಿ ತಂಡ 400ರಿಂದ 500 ರನ್ ಗಳಿಸಬೇಕು ಎಂದು ಬಯಸುತ್ತಿದ್ದರು. ಎದುರಾಳಿಯನ್ನು 150–200 ರನ್‌ಗಳ ಒಳಗೆ ಆಲೌಟ್ ಮಾಡಿ ಒತ್ತಡ ಹೇರಲು ಇಷ್ಟಪಡುತ್ತಿದ್ದರು’ ಎಂದು ಹೇಳಿದರು. ‘ಅಂಥ ತಂತ್ರಗಳು ಪ್ರತಿ ಬಾರಿಯೂ ಯಶಸ್ಸು ಕಾಣಬೇಕೆಂದಿಲ್ಲ’ ಎಂದು ಹೇಳಿ ಸಹಾ ನಗೆ ಸೂಸಿದರು.

‘ರವಿಶಾಸ್ತ್ರಿ ಅವರು ಅನುಸರಿಸುವ ವಿಧಾನವೇ ಬೇರೆ. ಅವರು ಎದುರಾಳಿಯ ಮೇಲೆ ನೇರ ಆಕ್ರಮಣ ಮಾಡುವಂತೆ ಹೇಳುತ್ತಾರೆ. ಇದಿಷ್ಟೇ ಇಬ್ಬರು ಕುಂಬ್ಳೆ ಮತ್ತು ರವಿಶಾಸ್ತ್ರಿ ನಡುವಿನ ವ್ಯತ್ಯಾಸ. ಉಳಿದಂತೆ ಇಬ್ಬರೂ ಸರಿಯಾದ ಸಮಯದಲ್ಲಿ ತಂಡಕ್ಕೆ ಪೂರಕವಾದ ಸಲಹೆಯನ್ನು ನೀಡುತ್ತಾರೆ’ ಎಂದರು.

ಕೊಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತನಾಡಿದ ವೃದ್ಧಿಮಾನ್ ಸಹಾ ಅವರು ’ಕೊಹ್ಲಿ ತಂಡದ ಆಟಗಾರರ ಜೊತೆ ಸಲುಗೆಯಿಂದ ವರ್ತಿಸುತ್ತಾರೆ. ಅಂಗಳದ ಹೊರಗೆಯೂ ಅವರು ಸಹ ಆಟಗಾರರ ಜೊತೆ ಉತ್ತಮ ಬಾಂಧವ್ಯ ಉಳಿಸಿಕೊಂಡಿದ್ದಾರೆ. ಆಹಾರ–ವಿಹಾರವನ್ನು ಎಲ್ಲರ ಜೊತೆಯಲ್ಲೇ ಮಾಡುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT