ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಸೇರಿದ ಕಾಳಿಂಗ ಸರ್ಪ

Last Updated 19 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ಕೆರವಡಿ ವ್ಯಾಪ್ತಿಯ ಕಡಿಯೇ ಮಜಿರೆಯ ರೈತ ಕೃಷ್ಣ ಗುನಗಿ ಎಂಬುವರ ಮನೆ ಹಿತ್ತಲಲ್ಲಿ ಕಾಣಿಸಿಕೊಂಡ 15 ಅಡಿ ಉದ್ದದ ಕಾಳಿಂಗ ಸರ್ಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸಂಜೆ ಹಿಡಿದು ಅಣಶಿ ಅರಣ್ಯಕ್ಕೆ ಬಿಟ್ಟರು.

ಮನೆಯ ಹಿಂಭಾಗ ಕಟ್ಟಿಗೆ ಇಟ್ಟಿದ್ದ ಕೊಠಡಿಯೊಳಗೆ ಕಾಳಿಂಗ ಸರ್ಪ ಹೋಗುವುದನ್ನು ನೋಡಿದ ಕೃಷ್ಣ ಅವರ ಪತ್ನಿ ತಕ್ಷಣವೇ ಆ ವಿಷಯವನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಉರಗ ಪ್ರೇಮಿಯೂ ಆದ ಗೋಪಶಿಟ್ಟಾ ವಲಯದ ಅರಣ್ಯ ರಕ್ಷಕ ರಮೇಶ ಬಡಿಗೇರ ಅವರು ಸಿಬ್ಬಂದಿ ಜತೆ ತೆರಳಿ, ಹಾವನ್ನು ಹಿಡಿದು ಬಳಿಕ ಅರಣ್ಯಕ್ಕೆ ಬಿಟ್ಟರು.

‘ಒಂದೆರಡು ತಿಂಗಳಲ್ಲಿ ಇದೇ ರೀತಿ ನಾಲ್ಕೈದು ಸರ್ಪಗಳನ್ನು ಹಿಡಿದು ಕಾಡಿಗೆ ಬಿಡಲಾಗಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT