ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

70 ವರ್ಷಗಳ ಬಾಲಿವುಡ್ ಸಂಗೀತ ಯಾತ್ರೆ

Last Updated 20 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಸುಕೃತ. ಎಸ್‌

ಬಾಲಿವುಡ್ ಸಂಗೀತಕ್ಕೆ ಹಲವಾರು ವರ್ಷಗಳ ಇತಿಹಾಸ ಇದೆ. ಬಾಲಿವುಡ್ ಸಂಗೀತ ಪರಂಪರೆ, ಪ್ರಸಿದ್ಧ ಸಂಗೀತ ಸಂಯೋಜಕರು, ಗಾಯಕರು, ವಾದ್ಯ ಸಂಗೀತಗಾರರನ್ನು ಜಗತ್ತಿಗೆ ನೀಡಿದೆ. ಬನ್ನಿ ಹೀಗೆ, ಬಾಲಿವುಡ್‌ನ 70 ದಶಕಗಳ ಸಂಗೀತ ಲೋಕವನ್ನು ಸುತ್ತಿಕೊಂಡು ಬರೋಣ.

1940ರ ದಶಕ: ಇದು ಪ್ರಣಯಗೀತೆಗಳ ಯುಗ. 1947ರಲ್ಲಿ ತೆರೆಕಂಡ ‘ದರ್ದ್’ ಚಿತ್ರದ ‘ಅಫ್ಸಾನ ಲಿಕ್‌ ರಹೀ ಹೂ’ ಹಾಡು ಬಹಳ ಸದ್ದು ಮಾಡಿತ್ತು. ನೌಶಾದ್ ಅವರ ಸಂಗೀತ ನಿರ್ದೇಶನವಿದ್ದ ಹಾಡು, ಈ ದಶಕದ ಹಿಟ್ ಹಾಡುಗಳಲ್ಲಿ ಒಂದು. ಶಂಷಾದ್ ಬೇಗಂ ಮತ್ತು ನೂರ್ ಜಹಾನ್ ಅವರು ಸುಮಧುರ ಕಂಠಸಿರಿಯ ಅದ್ಭುತ ಗಾಯಕರು.

1950 ದಶಕ: ಈ ದಶಕ ಬಾಲಿವುಡ್‌ ಸಂಗೀತ ಜಗತ್ತಿನಲ್ಲಿ ನೆನಪಿಟ್ಟುಕೊಳ್ಳಬೇಕಾದ ವರ್ಷಗಳು. ಈ ದಶಕದಲ್ಲೇ ಜಗತ್ತಿನ ಇಬ್ಬರು ಮಹಾನ್‌ ಗಾಯಕ ಸಹೋದರಿಯರು– ಲತಾ ಮಂಗೇಶ್ಕರ್‌ ಹಾಗೂ ಆಶಾ ಬೋಸ್ಲೆ ಪರಿಚಯವಾಗಿದ್ದು. ಜೊತೆಗೆ ಗೀತಾ ದತ್ ಅವರ ಕಂಠವನ್ನು ಮರೆಯುಲು ಸಾಧ್ಯವಿಲ್ಲ. ಅವರ 1959ರಲ್ಲಿ ಬಂದ ಹಿಟ್ ಚಿತ್ರ ‘ಕಾಗಝ್ ಕೇ ಪೂಲ್’ ಸಿನಿಮಾದ ‘ವಕ್ತ್ ನೆ ಕಿಯಾ ಕ್ಯಾ ಹಸೀನ್‌ ಸಿತಮ್‌’ ಹಿಟ್ ಹಾಡುಗಳಲ್ಲಿ ಒಂದು.

1960ರ ದಶಕ: ಬಾಲಿವುಡ್‌ನ ಸಂಗೀತದ ಸ್ವಲ್ಪ ಮಟ್ಟಿನ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದು ಈ ದಶಕದಿಂದ. 1965 ‘ವಕ್ತ್’ ಸಿನಿಮಾದ ಮಹಮದ್ ರಫಿ ಅವರು ಹಾಡಿರುವ, ಸಾಹಿರ್ ಲೂಧಿಯಾನ್ವಿ ಅವರ ರಚನೆಯ ‘ಏ ಮೆರೆ ಜೊಹರಾ ಜಬೀನ್’ ಹಾಡು ಈ ದಶಕದ ಹಿಟ್ ಹಾಡುಗಳಲ್ಲಿ ಒಂದು. ನಂತರ ಒಂದಾದ ಮೇಲೊಂದು ಹಿಟ್ ಹಾಡುಗಳು ಈ ವರ್ಷಗಳಲ್ಲಿ ಬಂದವು. ಎತ್ತರದ ಧ್ವನಿಯ, ಲಾವಣಿಗಳು ಕಡಿಮೆ ಇರುವ ಚಿತ್ರ ಸಂಗೀತ ಈ ದಶಕದಲ್ಲಿ ಬಂದವು. ಕಿಶೋರ್ ಕುಮಾರ್ ಅವರನ್ನು ಮರೆಯುವ ಪ್ರಮೇಯವೇ ಇಲ್ಲ. ಬಾಲಿವುಡ್ ಸಂಗೀತಕ್ಕೆ ಅವರ ಕೊಡುಗೆಗಳು ಅವಿಸ್ಮರಣೀಯ.

1970ರ ದಶಕ: ಬಾಲಿವುಡ್ ಸಂಗೀತ ಪರಂಪರೆಯಲ್ಲಿ ಈ ದಶಕ ಬಹಳ ಮುಖ್ಯವಾದದ್ದು. ಕಾರಣ, ಬಾಲಿವುಡ್ ಸಿನಿಮಾ ಸಂಗೀತದಲ್ಲಿ ಇಂಗ್ಲಿಷ್ ಹಾಡೊಂದು ಬಳಕೆಯಾದದ್ದು. ಇದು ಪೂರ್ಣ ಪ್ರಮಾಣದ ಇಂಗ್ಲಿಷ್ ಹಾಡಲ್ಲದಿದ್ದರೂ, ಇದೊಂದು ಹೊಸ ಹೆಜ್ಜೆ. ಇಲ್ಲಿಂದ ಗಡಸು ಧ್ವನಿಯ ಟ್ರೆಂಡ್ (ಬೇಸ್ ವಾಯ್ಸ್‌) ಪ್ರಾರಂಭವಾಯಿತು. ಹಾಗೂ ಉಷಾ ಉತ್ತುಪ್‌ ಈ ದಶಕದಿಂದ ಹೊರಹೊಮ್ಮಿದ ಗಾಯಕಿ. ಅವರೂ ಹಲವು ಹಿಟ್ ಹಾಡುಗಳನ್ನು ನೀಡಿದರು.

1980ರ ದಶಕ: ಡಿಸ್ಕೊ, ಕ್ಲಬ್ ಹಾಡುಗಳು, ಮಂದ ಬೆಳಕು ಇದೆಲ್ಲ ಈ ದಶಕದ ಕಲ್ಪನೆಗಳು. ಹಾಗೇ ವಾದ–ಪ್ರತಿವಾದಗಳಂತೆ ಇರುವ ಪ್ರಣಯ ಗೀತೆಗಳು ಬಂದವು. 1980ರ ‘ಆಪ್ ಜೈಸೆ ಕೋಯಿ’ ಸಿನಿಮಾದ ಟೈಟಲ್ ಹಾಡು ಡಿಸ್ಕೊ ರೀತಿಯ ಹಾಡುಗಳಿಗೆ ಉತ್ತಮ ಉದಾಹರಣೆ. ಇದರ ಜೊತೆಗೆ, ಜಗ್‌ಜೀತ್ ಸಿಂಗ್ ಅವರ ಧ್ವನಿಯ ಗಝಲ್ ಗೀತೆಗಳೂ ಸಂಗೀತ ಪ್ರೇಮಿಗಳಿಗೆ ಆಪ್ಯಾಯಮಾನವಾಯಿತು.

1990ರ ದಶಕ: ಈ ದಶಕದಲ್ಲಿ ಭಾರತೀಯ ಪಾಪ್ ಸಂಗೀತ ಪ್ರಾಮುಖ್ಯತೆ ಪಡೆಯಿತು. ‘ಮೇಡ್ ಇನ್ ಇಂಡಿಯಾ’ ಆಲ್ಬಂ ಆ ಪೀಳಿಗೆಯ ಸಂಗೀತ ಗ್ರಹಿಸುವ ಆಯಾಮವನ್ನೇ ಬದಲಿಸಿತು. ಈ 10ವರ್ಷಗಳ ಅವಧಿಯ ಇನ್ನೊಂದು ಪ್ರಮುಖ ವ್ಯಕ್ತಿ ಎ.ಆರ್. ರೆಹಮಾನ್. ಇವರು ಸಂಗೀತ ಸಂಯೋಜಿಸಿದ ಗೀತೆಗಳಿಲ್ಲ, ಇವರ ಸಂಗೀತದಿಂದ ಮೈ ಮರೆತವರಿಲ್ಲ ಆನಂದಪಡದವರೇ ಇಲ್ಲ ಎನ್ನುವಷ್ಟು ಜನಪ್ರಿಯರು.

2000ರ ದಶಕ: ಬೇರೆ ಎಲ್ಲಾ ದಶಕಗಳಿಗಿಂತ ಬಾಲಿವುಡ್ ಸಿನಿಮಾ ಸಂಗೀತ, ಈ ದಶಕದಲ್ಲಿ ಅಷ್ಟು ಸುದ್ದಿ ಮಾಡಲಿಲ್ಲ. ಇಲ್ಲಿಂದ ರಿಮಿಕ್ಸ್ ಸಂಗೀತಕ್ಕೆ ಹೆಚ್ಚು ಒತ್ತು ಬರಲಾರಂಭಿಸಿತು. ಕೈಲಾಶ್ ಖೇರ್ ಈ ದಶಕದ ಮುಂಚೂಣಿ ಗಾಯಕ.

2010ರ ದಶಕ: ‘ಕೋಕ್ ಸ್ಟುಡಿಯೊ’ ಈ ದಶಕದ ಪ್ರಸಿದ್ಧ ಸಂಗೀತ ಕಾರ್ಯಕ್ರಮ. ಸಿನಿಮಾ ಸಂಗೀತಕ್ಕಿಂತ, ಬೇರೆ ವೇದಿಕೆ ಇದು. ಬಾಲಿವುಡ್‌ನ ಹಲವಾರು ಹಳೆಯ ಹಾಗೂ ಹೊಸ ಹಾಡುಗಳಿಗೆ ನವ ಮೆರುಗು ನೀಡುವ ಪ್ರಯೋಗ ಮಾಡಿದ ವೇದಿಕೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT