ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೆ ನಡೆದ ಪತ್ನಿಗೆ ವಿಚ್ಛೇದನ ನೀಡಿದ ಪತಿ!

Last Updated 21 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ದುಬೈ: ಪತ್ನಿ ತನ್ನನ್ನು ಬಿಟ್ಟು ಮುಂದೆ ನಡೆದುಹೋಗಿದ್ದಕ್ಕೆ ಪತಿ ವಿಚ್ಛೇದನ ನೀಡಿರುವ ಅಪರೂಪದ ಪ್ರಕರಣ ವರದಿಯಾಗಿದೆ.

ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನ ನೀಡುವ ಪ್ರಕರಣಗಳು ಹೆಚ್ಚುತ್ತಿರುವುದು ಸೌದಿ ಜನರಲ್ಲಿ ಕಳವಳ ಉಂಟುಮಾಡುತ್ತಿದೆ. ತನ್ನ ಹಿಂದೆಯೇ ನಡೆದುಬರುವಂತೆ ಪತ್ನಿಗೆ ಎಚ್ಚರಿಸಿದ್ದರೂ ಸಹ ಮುಂದೆ ನಡೆದುಹೋಗಿದ್ದಕ್ಕಾಗಿ ಪತಿ ವಿಚ್ಛೇದನ ನೀಡಿದ್ದಾನೆ ಎಂದು ದಿ ಗಲ್ಫ್‌ ನ್ಯೂಸ್‌ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಮತ್ತೊಂದು ಪ್ರಕರಣದಲ್ಲಿ, ತನ್ನ ಸ್ನೇಹಿತರಿಗಾಗಿ ಏರ್ಪಡಿಸಿದ್ದ ಭೋಜನಕೂಟದಲ್ಲಿ, ಪ‍ತ್ನಿ ಭೋಜನದ ಪ್ರಮುಖ ಭಾಗವಾದ ಮೀನಿನ ಖಾದ್ಯ ಬಡಿಸಲು ಮರೆತಿದ್ದಕ್ಕಾಗಿ ಪತಿ ವಿಚ್ಛೇದನ ನೀಡಿದ್ದಾನೆ.

ಕಳೆದ ಎರಡು ವರ್ಷಗಳಲ್ಲಿ ವಿಚ್ಛೇದನ ನೀಡುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿವಾಹಗಳನ್ನು ಆಯೋಜಿಸುವ ಅಧಿಕಾರಿ ಹಮೂದ್‌ ಅಲ್‌ ಶಿಮ್ಮಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT