ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡಿನ ಆಚರಣೆಯಲ್ಲಿ ಸಹಬಾಳ್ವೆ ಇದೆ

Last Updated 22 ಆಗಸ್ಟ್ 2017, 9:01 IST
ಅಕ್ಷರ ಗಾತ್ರ

ಮೂಡುಬಿದಿರೆ: ತುಳುನಾಡಿನ ಆಚರಣೆ -ಆರಾಧನೆಗಳನ್ನು ಶೋಧಿಸಿದಾಗ ಸಹ ಬಾಳ್ವೆಯ ಸಮೃದ್ಧ ಹಿನ್ನೆಲೆ ಇರುವುದು ಕಂಡು ಬರುತ್ತದೆ. ತುಳು ಭಾಷೆ ಮತ್ತು ಸಂಸ್ಕೃತಿಯಲ್ಲಿ ಪರಸ್ಪರ ಕೂಡಿ ಬದುಕುವ ಮೌಲ್ಯವಿದೆ. ಇದರ ಪಾಲನೆ ಇಂದಿನ ಬಹುದೊಡ್ಡ ಅಗತ್ಯವಾಗಿದೆ ಎಂದು ಮುಂಬೈ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಹೇಳಿದರು.

ಮೂಡುಬಿದಿರೆ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ವಾರ್ಷಿಕ ಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ‘ಸಾಂಸ್ಕೃತಿಕ ತುಳುನಾಡು’ ಎಂಬ ವಿಷ ಯದಲ್ಲಿ ಅವರಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಭಾಷೆ ಸದಾ ಚಲನಶೀಲಗುಣವುಳ್ಳದ್ದು. ಸಂಸ್ಕೃತಿಯಲ್ಲಿಯೂ ಪಲ್ಲಟ ಸ್ವಾಭಾವಿಕ. ಬದಲಾವಣೆಯೊಂದಿಗೆ ನೆಲ ಮೂಲ ಸಂಸ್ಕೃತಿಯ ಆಶಯವನ್ನು ಕಾಪಾ ಡಿಕೊಂಡು ಬರಬೇಕಾದ ಅನಿವಾರ್ಯತೆ ಇದೆ ಎಂದರು.

ಕೇಂದ್ರದ ವಿದ್ಯಾರ್ಥಿಗಳಾದ ಯಶ್ಮಿತಾ ಮತ್ತು ಬಳಗದವರಿಂದ ತುಳುವಿನ ಪ್ರಸಿದ್ಧ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಿತು. ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ‘ಭೂಮಿಗ್ ಪೊಸ ವರ್ಷ ಬಯ್ದ್ಂಡ್’ ಎಂಬ ಹಾಡು ಸಭೆಯನ್ನು ಮಂತ್ರ ಮುಗ್ಧಗೊಳಿಸಿತು. ಕೇಂದ್ರದ ಸಂಯೋಜಕ ಡಾ. ಯೋಗೀಶ ಕೈರೋಡಿ ಸ್ವಾಗತಿಸಿದರು. ಶ್ರದ್ಧಾ ನಿರೂಪಿಸಿದರು. ವಿದ್ಯಾರ್ಥಿ ಕಾರ್ಯದರ್ಶಿ ಪ್ರತೀಕ್ಷಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT