ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವ್ಯಾ ಸಾವು: ನಿಷ್ಪಕ್ಷಪಾತ ತನಿಖೆ ಮಾಡಿ’

Last Updated 22 ಆಗಸ್ಟ್ 2017, 9:03 IST
ಅಕ್ಷರ ಗಾತ್ರ

ಮೂಡುಬಿದಿರೆ: ಕಾವ್ಯಾ ಪ್ರಕರಣದ ನಿಷ್ಪಕ್ಷಪಾತ ತನಿಖೆ, ಮೂಡುಬಿದಿರೆಗೆ ಸರ್ಕಾರಿ ಕಾಲೇಜು, ವಿದ್ಯಾರ್ಥಿ ನಿಲಯ ಗಳ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲಭಾರತ ಕಾರ್ಮಿಕ ಸಂಘ ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಸಂಘದ ವಕ್ತಾರ ಸುದತ್ತ ಜೈನ್ ಮಾತನಾಡಿ, ಕಾವ್ಯ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ಖಾಸಗಿ ಪ್ರಭಾ ವದಿಂದಾಗಿ ಮೂಡುಬಿದಿರೆಗೆ ಅಗತ್ಯವಾಗಿ ಬೇಕಾಗಿರುವ ಸರ್ಕಾರಿ ಸೌಲಭ್ಯಗಳಿಂದ ಜನ ವಂಚಿತ ರಾಗಿದ್ದಾರೆ. ಜನಸಾಮಾನ್ಯರ ಹಕ್ಕುಗ ಳನ್ನು ಕಸಿದುಕೊಳ್ಳುವ ಪ್ರಯತ್ನ ಸರಿಯಲ್ಲ.

ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿ ನಿಯಂತ್ರಣವಾಗಬೇಕು. ಒಂದು ವೇಳೆ ಇಂತಹ ಪ್ರಕರಣಗಳ ಕಂಡುಬಂದಲ್ಲಿ ಕಾರ್ಮಿಕ ಸಂಘವು ಉಗ್ರಹೋರಾಟವನ್ನು ಮಾಡುತ್ತದೆ ಎಂದರು.

ಕಂದಾಯ ನಿರೀಕ್ಷಕ ಹಾರಿಸ್ ಮುಖಾಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಶಿರ್ತಾಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಝಾಕಾರಿಯ ಯೂಸುಫ್, ಸಾಮಾಜಿಕ ಕಾರ್ಯಕರ್ತ ಅಬೂಬಕ್ಕರ್, ಹೋರಾಟಗಾರದ ಸುಂದರ ಕರ್ಕೇರಾ, ಶ್ರೀಧರ ಅಂಚನ್, ವಸಂತ ಅಂಚನ್, ಗಣೇಶ್ ಗೌಡ, ರಾಜೇಂದ್ರ ಬರ್ಕೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT