ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಮೇಲಾಗಿದ್ದ ಆಲದ ಮರ ಎಂಐಟಿ ಆವರಣಕ್ಕೆ ಸ್ಥಳಾಂತರ

Last Updated 22 ಆಗಸ್ಟ್ 2017, 9:06 IST
ಅಕ್ಷರ ಗಾತ್ರ

ಉಡುಪಿ: ಮಳೆ– ಬಿರುಗಾಳಿಯ ಪರಿಣಾಮ ಕೆಲ ದಿನಗಳ ಹಿಂದೆ ಬುಡಮೇಲಾಗಿದ್ದ ಆಲದ ಮರವನ್ನು ಮಣಿಪಾಲ್ ತಾಂತ್ರಿಕ ಸಂಸ್ಥೆಯ ಆವರಣಕ್ಕೆ ಸೋಮವಾರ ಸ್ಥಳಾಂತರಿಸಲಾಯಿತು.

ಬನ್ನಂಜೆಯ ರಸ್ತೆ ಬದಿ ಇದ್ದ ಸುಮಾರು 60 ವರ್ಷಗಳಷ್ಟು ಹಳೆಯದಾದ ಮರ ಬುಡಮೇಲಾಗಿತ್ತು. ಉದ್ಯಾವರ ರೋಟರಿ ಕ್ಲಬ್‌ನ ಸದಸ್ಯರು ಈ ವಿಷಯವನ್ನು ಎಂಐಟಿಯ ನಿರ್ದೇಶಕ ಜಿ.ಕೆ. ಪ್ರಭು ಅವರ ಗಮನಕ್ಕೆ ತಂದಿದ್ದರು. ಎಂಐಟಿ ಆವರಣಕ್ಕೆ ಮರವನ್ನು ಸ್ಥಳಾಂತರಿಸಲು ಅವರು ಒಪ್ಪಿಗೆ ನೀಡಿದ್ದರು.

ಬೃಹತ್ ಗಾತ್ರದ ಮರದ ಕೊಂಬೆಗಳನ್ನು ಕತ್ತರಿಸಿ ಕೇವಲ ಬುಡವನ್ನು ಮಾತ್ರ ಕ್ರೇನ್ ಸಹಾಯದಿಂದ ಲಾರಿಯಲ್ಲಿಟ್ಟು ಎಂಐಟಿ ಆವರಣಕ್ಕೆ ಸಾಗಿಸಿ ಅಲ್ಲಿ ನೆಡಲಾಯಿತು.
ಎಂಐಟಿಯ ಪ್ರಾಧ್ಯಾಪಕ ಪ್ರೊ.ಬಾಲಕೃಷ್ಣ ಮದ್ದೋಡಿ ಮಾತನಾಡಿ, ‘ಆಲದ ಮರ ರಾಷ್ಟ್ರೀಯ ಮರವೂ ಆಗಿದೆ. ಎಂಐಟಿ ಆವರಣದಲ್ಲಿ ಇಂತಹ ದೊಡ್ಡ ಮರ ಇರಬೇಕು ಎಂಬ ಕನಸಿತ್ತು. ಈಗ ಅದು ನನಸಾಗುತ್ತಿದೆ. ಸುಮಾರು ₹70ರಿಂದ ₹80 ಸಾವಿರ ಸ್ಥಳಾಂತರಕ್ಕೆ ಖರ್ಚಾಗುತ್ತಿದೆ’ ಎಂದರು.

ವಲಯ ಅರಣ್ಯ ಅಧಿಕಾರಿ ಕ್ಲಿಫರ್ಡ್‌ ಲೋಬೊ ಅವರು ಮಾತನಾಡಿ, ‘ಬುಡಮೇಲಾಗಿದ್ದ ಮರವನ್ನು ಕತ್ತರಿಸಿ ಸಾಗಿಸಬೇಕಾಗಿತ್ತು. ಮನವಿಯ ಮೇರೆಗೆ ಅದನ್ನು ಎಂಐಟಿ ಅವರಿಗೆ ನೀಡಲಾಗಿದೆ. ಹಳೆಯ ಮರವೊಂದು ಈಗ ಪುನಃ ಜೀವ ಪಡೆಯುತ್ತಿದೆ’ ಎಂದರು.

ಎಂಐಟಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ರಾಘವೇಂದ್ರ ಹೊಳ್ಳ, ಅರಣ್ಯ ಇಲಾಖೆಯ ಗಾರ್ಡ್‌ ದೇವರಾಜ ಪಾಣ ಇದ್ದರು. ಮರ ಬುಡಮೇಲಾಗಿದ್ದರೂ ಆ ಸಂದರ್ಭದಲ್ಲಿ ಯಾರೂ ಇಲ್ಲದ ಪರಿಣಾಮ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT