ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸ್ವಾತಂತ್ರ್ಯಕ್ಕೆ ಸಿದ್ಧತೆ...

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಆರ್ಥಿಕ ಸ್ವಾತಂತ್ರ್ಯ ಎಂಬುದು ಪ್ರತಿಯೊಬ್ಬರು ಬಯಸುವ ಕನಸು.  ‘ಒಮ್ಮೆ ನೀವು ಆರ್ಥಿಕ ಸ್ವಾತಂತ್ರ್ಯ ಏನು ಎಂಬುದನ್ನು ಅರ್ಥ ಮಾಡಿಕೊಂಡರೆ, ನೀವು ಗುರಿ ಸಾಧನೆಯತ್ತ ಸರಿಯಾದ ಹೆಜ್ಜೆ ಇಟ್ಟಿದ್ದೀರಿ ಎಂಬುದೇ  ಅದರರ್ಥ ಆಗಿರುತ್ತದೆ ಎಂದು ಎಕ್ಸೈಡ್ ಲೈಫ್ ಇನ್ಸೂರೆನ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಷಿತಿಜ್ ಜೈನ್ ಅಭಿಪ್ರಾಯಪಡುತ್ತಾರೆ.

ಕೆಲವೇ ಜನರು ಈ ಆರ್ಥಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಇಂತಹ ಸ್ವಾತಂತ್ರ್ಯ ಪಡೆಯಲು ಬಯಸುವವರು ಕೆಲವೊಂದು ಹಣಕಾಸು ನಿರ್ವಹಣೆಯ ಸುಲಭ ಉಪಾಯಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಹಣಕಾಸು ಸ್ವಾತಂತ್ರ್ಯ ಗಳಿಸುವ ನಿಟ್ಟಿನಲ್ಲಿ ಇಡುವ ಮೊದಲ ಹೆಜ್ಜೆ ಇದಾಗಿರುತ್ತದೆ. ಇವುಗಳನ್ನು ಕರಗತ ಮಾಡಿಕೊಂಡರೆ ಖಂಡಿತವಾಗಿಯೂ ಕೆಲವೇ ವರ್ಷಗಳಲ್ಲಿ  ಆರ್ಥಿಕ ಸ್ವಾತಂತ್ರ್ಯ ಪಡೆಯಬಹುದಾಗಿದೆ.

ಆರ್ಥಿಕ ಸ್ವಾತಂತ್ರ್ಯ ಪಡೆಯಲು ಸುಲಭ ಸೂತ್ರಗಳು

1. ಬೇಗನೇ ಆರಂಭಿಸಿ
ಹಣ ಹೂಡಿಕೆ ಎನ್ನುವುದು ಗೋಚರವಾಗುವ ಸಂಪನ್ಮೂಲ. ಇದು, ಆರ್ಥಿಕ ಸ್ಥಿರತೆ ತಂದು ಕೊಡಲಿದೆ. ಹೂಡಿಕೆ ಮಾಡುವ ಮೊತ್ತ ಮತ್ತು ಹೂಡಿಕೆಯ ಮಾದರಿಯೂ ಹೂಡಿಕೆ ಮಾಡುವಲ್ಲಿ ತುಂಬ ಎಚ್ಚರಿಕೆಯಿಂದ ವಹಿಸಬೇಕಾದ ಕ್ರಮಗಳಾಗಿವೆ. ನಿಶ್ಚಿತ ಹೂಡಿಕೆಗಳು ಅಂದರೆ ನಿಶ್ಚಿತ ಠೇವಣಿ ಅಥವಾ ಚಂಚಲ ಹೂಡಿಕೆಗಳು ಅಂದರೆ ಮ್ಯೂಚುವಲ್ ಫಂಡ್.

2. ತುರ್ತು ಸ್ಥಿತಿ ಎದುರಿಸಲು ಸಜ್ಜಾಗಿರಬೇಕು
ತುರ್ತು ನಿರ್ವಹಣೆಗೆ ಬಳಿಯಲ್ಲಿ ಅಗತ್ಯ ಮೊತ್ತ ಹೊಂದಿರುವುದು ಹಾಗೂ ಬಹು ಆದಾಯದ ಮೂಲಗಳನ್ನು ನಿರ್ವಹಣೆ ಮಾಡುವುದೂ  ಒಂದು ಕಲೆಯಾಗಿರುತ್ತದೆ.  ಒಂದು ವೇಳೆ ತುರ್ತು ವೆಚ್ಚ ಅಥವಾ ಹೂಡಿಕೆ ವೈಫಲ್ಯ ಎದುರಾದರೆ ತುರ್ತು ಮೊತ್ತವನ್ನು ಬದಲಿ ಯೋಜನೆ ಮಾದರಿಯಲ್ಲಿ ನಿರ್ವಹಿಸಿದರೆ ಆರ್ಥಿಕ ಅಪಾಯವನ್ನು  ಸಮರ್ಥವಾಗಿ ಎದುರಿಸುವುದು ಸಾಧ್ಯವಾಗಲಿದೆ.

3. ಕುಟುಂಬಕ್ಕೆ ಆರ್ಥಿಕ ಭದ್ರತೆಯ ಅಭಯ ನೀಡಿ
ಎಲ್ಲರೂ ವಿಮೆಯನ್ನು ಉಳಿತಾಯದ ಕ್ರಮ ಎಂದು ಭಾವಿಸುವುದಿಲ್ಲ. ಜೀವವಿಮೆ ಎಂಬುದು ಉಳಿತಾಯದ ಒಂದು ಶಿಸ್ತುಬದ್ಧ ಕ್ರಮ. ಜೀವವಿಮೆ ಎಂದಿಗೂ ತೆರಿಗೆ ಉಳಿತಾಯದ ಕ್ರಮವಾಗಲಿದೆ. ಜನರು ಹೆಚ್ಚಿನ ಮಟ್ಟದ ಜೀವನಶೈಲಿ ರೂಢಿಸಿಕೊಳ್ಳುತ್ತಿದ್ದಾರೆ. ಅವರ ಆದಾಯದ ಮೊತ್ತವೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜೀವವಿಮೆ ನಿರ್ಣಾಯಕ ಸ್ಥಾನ ನಿರ್ವಹಿಸುತ್ತದೆ. ಇಲ್ಲಿ ಹೂಡಿಕೆ ಮತ್ತು ಉಳಿತಾಯದ ಪ್ರಜ್ಞೆ ಇದೆ. ವಿಮೆಗೆ ಕೆಲವೊಂದು ಮೊತ್ತ ಹೂಡಿಕೆ ಮಾಡುವುದು ಬುದ್ಧಿವಂತಿಕೆಯ ನಿರ್ಧಾರವಾಗಿರಲಿದೆ.

4. ಪರ್ಯಾಯ ಆರ್ಥಿಕ ಮೂಲ
ವ್ಯಕ್ತಿಯೊಬ್ಬನ ಆದಾಯ ಗಳಿಕೆಯ ಶಕ್ತಿಯು   ಆರ್ಥಿಕ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬೆಳೆಸಲಿದೆ.  ಒಂದು ಹಂತಕ್ಕಿಂತಲೂ ಹೆಚ್ಚು ಪ್ರಮಾಣದ ಆದಾಯ ಪಡೆಯುವುದು ತುರ್ತು ಸಂದರ್ಭಗಳಲ್ಲಿ ಅಂದರೆ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿ ನೆರವಿಗೆ ಬರಲಿದೆ. ಈ ಕಾರಣಕ್ಕೆ ಬುದ್ಧಿವಂತಿಕೆಯಿಂದ ಹೂಡಿಕೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

5. ಆರ್ಥಿಕ ಲೆಕ್ಕಾಚಾರ ದಾಖಲೆ ಸಮರ್ಪಕವಾಗಿರಲಿ
ಹೂಡಿಕೆ, ಯೋಜನೆಯ ಜೊತೆಗೆ ಹಣಕಾಸು ನಿರ್ವಹಣೆಯ ದಾಖಲೆ ಇಡುವುದು ತುಂಬಾ ಮುಖ್ಯವಾದ ಕ್ರಮವಾಗಲಿದೆ. ತಪ್ಪಾಗಿ ದಾಖಲೆ ಇಡುವುದು, ಕಳೆದರೆ ತುರ್ತು ಸಂದರ್ಭದಲ್ಲಿ ಅವುಗಳನ್ನು ಹುಡುಕುವುದು ಕಷ್ಟವಾಗಲಿದೆ.

ಎಕ್ಸೈಡ್ ಲೈಫ್ ಇನ್ಶುರನ್ಸ್‌ನ ಮೈ ಮನಿ ಬುಕ್ ಹಣಕಾಸು ದಾಖಲೆಗಳನ್ನು ಸರಿಯಾಗಿ ಇಡಲು, ಸುಲಭವಾಗಿ ದಾಖಲಿಸಲು, ಎಲ್ಲವೂ ಒಟ್ಟಾಗಿ ಒಂದೆಡೆಯೇ ದೊರೆಯುವಂತಾಗಲು ನೆರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT