ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಷ್ನಾ, ಸೌರವ್‌ ಪ್ರಮುಖ ಆಕರ್ಷಣೆ

ಇಂದಿನಿಂದ ರಾಷ್ಟ್ರೀಯ ಸೀನಿಯರ್ ಸ್ಕ್ಷಾಷ್‌ ಚಾಂಪಿಯನ್‌ಷಿಪ್‌; ದೀಪಿಕಾ ಅಲಭ್ಯ
Last Updated 22 ಆಗಸ್ಟ್ 2017, 19:54 IST
ಅಕ್ಷರ ಗಾತ್ರ

ನವದೆಹಲಿ: ಜೋಷ್ನಾ ಚಿಣ್ಣಪ್ಪ ಮತ್ತು ಸೌರವ್‌ ಘೋಷಾಲ್‌ ಅವರು ಬುಧವಾರದಿಂದ ನಡೆಯುವ 74ನೇ ರಾಷ್ಟ್ರೀಯ ಸೀನಿಯರ್ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ಹಾಲಿ ಚಾಂಪಿಯನ್‌ ದೀಪಿಕಾ ಪಳ್ಳಿಕಲ್‌ ಅವರು ಪಾದಕ್ಕೆ ಗಾಯವಾಗಿರುವ ಕಾರಣ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ.  ಭಾರತ ಸ್ಕ್ವಾಷ್‌ ರ‍್ಯಾಕೆಟ್‌ ಫೆಡರೇಷನ್‌ (ಎಸ್‌ಆರ್‌ಎಫ್‌ಐ) ಆಶ್ರಯದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ 25 ರಾಜ್ಯಗಳ 550ಕ್ಕೂ ಹೆಚ್ಚು ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ವಿಭಾಗಗಳಲ್ಲಿ ಕ್ರಮವಾಗಿ 313 ಮತ್ತು 65 ಮಂದಿ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ.

ಗರಿಷ್ಠ ಕ್ರಮಾಂಕ ಹೊಂದಿರುವ ಜೋಷ್ನಾ ಅವರಿಗೆ ಊರ್ವಶಿ ಜೋಶಿ, ಸಚಿಕಾ ಇಂಗಳೆ, ರಿಯಾ ಸಿಸೋಡಿಯ, ತನ್ವಿ ಖನ್ನಾ ಅವರಿಂದ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ. ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸೌರವ್‌ ಅವರು ಟ್ರೋಫಿ ಎತ್ತಿಹಿಡಿಯುವ ನೆಚ್ಚಿನ ಸ್ಪರ್ಧಿ ಎನಿಸಿದ್ದಾರೆ. ಹೋದ ವರ್ಷ ಇಲ್ಲಿ ಪ್ರಶಸ್ತಿ ಜಯಿಸಿದ್ದ ಅವರು ಈ ಬಾರಿ ಅಗ್ರಶ್ರೇಯಾಂಕ ಹೊಂದಿದ್ದಾರೆ.

ಹರಿಂದರ್‌ ಪಾಲ್‌ ಸಿಂಗ್‌ ಸಂಧು, ರವಿ ದಿಕ್ಷಿತ್‌, ಅಭಿಷೇಕ್‌ ಅಗರವಾಲ್‌, ವೆಲಾವನ್‌ ಸೆಂಥಿಲ್‌ ಕುಮಾರ್‌ ಮತ್ತು ಕುಶ್‌ ಕುಮಾರ್‌ ಅವರೂ ಪ್ರಶಸ್ತಿಯ ಕನವರಿಕೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT