ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸಿಯನಿಟ್ಟು ವಾಸ್ತು ಸಂತೈಸಿ

Last Updated 24 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಮನೆಯ ಸುಖ, ನೆಮ್ಮದಿಗೆ ಗಿಡಗಳು ಕಾರಣವಾಗುತ್ತವೆ ಎನ್ನುತ್ತದೆ ವಾಸ್ತು. ಈ ಗಿಡಗಳನ್ನು ಮನೆಯಲ್ಲಿ ಇರಿಸುವುದರಿಂದ ಶುದ್ಧ ಗಾಳಿ ಬರುವುದರ ಜೊತೆಗೆ ಮನೆಯ ವಾತಾವರಣ ಚೆನ್ನಾಗಿರುತ್ತದೆ ಎಂಬುದು ನಂಬಿಕೆ. ಅಂತಹ ಗಿಡಗಳಾವುವು ತಿಳಿದುಕೊಳ್ಳೋಣ ಬನ್ನಿ...

* ಪಾಮ್ಸ್‌ ಗಿಡವನ್ನು ಮಾಸ್ಟರ್‌ ಬೆಡ್‌ ರೂಂ ಬಳಿ ಇರಿಸುವುದರಿಂದ ದಂಪತಿ ನಡುವಿನ ಸಂಬಂಧ ಚೆನ್ನಾಗಿರುತ್ತದೆ. ಮನೆಯಲ್ಲಿ ಸುಖ, ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ.

* ಮನಿ ಟ್ರೀಯನ್ನು ಮನೆಯಲ್ಲಿ ಇರಿಸುವುದರಿಂದ ಅದೃಷ್ಟ ಒಲಿಯುತ್ತದೆ. ಕೆಲಸದಲ್ಲಿ ಸಫಲತೆ ದೊರಕುತ್ತದೆ ಎಂಬ ನಂಬಿಕೆ ಇದೆ.
* ರಬ್ಬರ್‌ ಗಿಡ ಮನೆಯಲ್ಲಿ ಇರಿಸುವುದರಿಂದ ಸಂಪತ್ತು ವೃದ್ಧಿಸುತ್ತದೆ. ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳುವುದಿಲ್ಲ. ಶ್ರದ್ಧೆಯಿಂದ ಕೆಲಸ ಮಾಡುವುದರಿಂದ ಒಳ್ಳೆಯ ಫಲಿತಾಂಶವೇ ಸಿಗುತ್ತದೆ ಎನ್ನುತ್ತದೆ ವಾಸ್ತು.

* ಜಡೆ ಗಿಡವನ್ನು ಮನೆ ಅಥವಾ ಆಫೀಸಿನ ಎದುರು ಇರಿಸುವುದರಿಂದ ಒಳ್ಳೆಯದಾಗುತ್ತದೆ. ಮನೆಯ ಮುಂಭಾಗದಲ್ಲಿ 1 ಗಿಡವಿದ್ದರೆ ಮನೆಗೆ ಶೋಭೆ. ಈ ಗಿಡದಿಂದ ಅದೃಷ್ಟ, ಸಂಪತ್ತು ಮನೆ ತುಂಬುತ್ತದೆ ಎಂಬ ನಂಬಿಕೆ ಇದೆ.

* ಆರ್ಕಿಡ್‌ ಗಿಡ ಪ್ರೀತಿ, ಮಧುರ ಸಂಬಂಧದ ಪ್ರತೀಕ ಎನ್ನುತ್ತದೆ ವಾಸ್ತು. ಫೆಂಗ್ ಶುಯಿ ವಾಸ್ತುವಿನ ಪ್ರಕಾರ, ಇದನ್ನು ಮನೆ, ಕಚೇರಿಯಲ್ಲಿ ಇರಿಸುವುದರಿಂ ಸ್ನೇಹಿತರು, ಮನೆ ಮಂದಿಯ ನಡುವಿನ ಸಂಬಂಧ ವೃದ್ಧಿಯಾಗುತ್ತದೆ.

* ಕ್ರೀಪರ್‌ ಬಳಿಗಳನ್ನು ಮನೆಯಲ್ಲಿ ಹಬ್ಬಿಸುವುದರಿಂದ ಮನೆಯ ಮೇಲೆ ಕೆಟ್ಟ ದೃಷ್ಟಿ ಬೀಳುವುದಿಲ್ಲ. ಜಗಳ, ಕೋಪ, ಗಲಾಟೆ ಇಡಮೆಯಾಗುತ್ತದೆ ಎಂಬ ನಂಬಿಕೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT