ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೂಡು ಸಿಕ್ಕ ಗುಬ್ಬಿ’

Last Updated 26 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಗೂಡು ಕಟ್ಟೋ ಮುನ್ನವೆ
ಗುಬ್ಬಿಯೊಂದು ಹೆತ್ತಿತು
ಹಾದಿಬದಿಯ ಹುಲ್ಲಮೇಲೆ
ಮೊಟ್ಟೆಯಿಟ್ಟು ಬಿಟ್ಟಿತು

ಪುಟ್ಟದಾದ ಮುದ್ದು ಮೊಟ್ಟೆ
ಹಕ್ಕಿ ಹೇಗೆ ಬಿಟ್ಟೀತು
ಕರುಳ ಕುಡಿಯ ಪ್ರೀತಿಯಿಂದ
ತಬ್ಬಿಹಿಡಿದು ಕೊಂಡಿತು

ಕಾವುಕೊಡಲು ತಾವು ಎಲ್ಲಿ
ಹಾವು ಗೀವು ಬಂದರಿಲ್ಲಿ
ಹೆದರಿಕೊಂಡು ಗುಬ್ಬಿ ಹಕ್ಕಿ
ಅತ್ತು ಬಿಡ್ತು ಬಿಕ್ಕಿ ಬಿಕ್ಕಿ

ಗುಬ್ಬಿ ಬಿಕ್ಕಿ ಅಳುವ ಕೇಳಿ
ಕಾಗೆ ಬಂದು ಮೊಟ್ಟೆ ಹೆಕ್ಕಿ
ತನ್ನ ಮಡಿಲಲವಚಿಕೊಂಡು
ಗುಬ್ಬಿ ಯನ್ನು ತಬ್ಬಿತು

ಕಾಗೆ ಗೂಡು ಸೇರಿ ಗುಬ್ಬಿ
ತನ್ನ ಮೊಟ್ಟೆ ಕಾಗೆ ಮೊಟ್ಟೆ
ಒಟ್ಟಿಗಿಟ್ಟು ಕಾವುಕೊಟ್ಟು
ಮರಿಯ ಕನಸ ಕಂಡವು

ಮೊಟ್ಟೆಯಿಂದ ಮರಿಗಳು
ತಟ್ಟನೆದ್ದು ಬಂದವು
ಕಾಗೆ ಮರಿಗಳು... ಗುಬ್ಬಿ ಮರಿಗಳು
ಮರಿಗಳೋ... ಮರಿಗಳು...
ಆಹಾ ಮರಿಗಳೋ... ಮರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT