ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣವಿಲ್ಲದ ಗಣಪತಿ ಆಕರ್ಷಣೆ

Last Updated 27 ಆಗಸ್ಟ್ 2017, 4:45 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಇಲ್ಲಿನ ನಗರಸಭೆ ಆವರಣದಲ್ಲಿ ಬಣ್ಣವಿಲ್ಲದ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಜನಾಕರ್ಷಿಸುತ್ತಿದೆ. ಈ ಕುರಿತು ಮಾತನಾಡಿದ ನಗರಸಭೆ ಅಧ್ಯಕ್ಷೆ ಆಶಾ ಗುಂಡೇರ್‌, ‘ನಗರಸಭೆ ಆವರಣದಲ್ಲಿ ಮಣ್ಣಿನ ಗಣೇಶ ಪ್ರತಿಷ್ಠಾಪಿಸಲಾಗಿದೆ. ಅದರಂತೆ ನಗರದ ಜನರೂ ಪರಿಸರ ಸ್ನೇಹಿ ಗಣಪ ಮೂರ್ತಿಗಳ ಸ್ಥಾಪನೆ ಮೂಲಕ ಪರಿಸರ ಸಂರಕ್ಷಣೆಗೆ ಯತ್ನಿಸಬೇಕು’ ಎಂದರು.

ಹೊಂಡ ನಿರ್ಮಾಣ:  ಮತ್ತೊಂದೆಡೆ, ‘ಮಳೆ ಕೊರತೆಯಿಂದ ಕೆರೆ–ಟ್ಟೆಗಳಲ್ಲಿ ನೀರು ಇಲ್ಲ. ಹೀಗಾಗಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ತಾತ್ಕಾಲಿಕ ಹೊಂಡಗಳನ್ನು ನಿರ್ಮಿಸಲಾಗುವುದು’ ಎಂದು ಪೌರಾಯುಕ್ತ ಡಾ.ಮಹಾಂತೇಶ ಎನ್‌ ತಿಳಿಸಿದ್ದಾರೆ.

ಈ  ವೇಳೆ, ಸದಸ್ಯರಾದ ರಾಮಪ್ಪ  ಕೋಲಕಾರ, ರಾಜು ಅಡ್ಮನಿ, ಶಶಿಧರ ಬಸೇನಾಯಕ, ಬಸವರಾಜ ಹುಚಗೊಂಡರ, ನಾಗರಾಜ ಕಲಾಲ, ಅಬ್ದುಲ್‌ಖಾದರ್‌ ಪಠಾಣ, ಶಿವಯೋಗಿ ಹಿರೇಮಠ, ಲಿಂಗನಗೌಡ ಪಾಟೀಲ, ಅಯೂಬ್‌ ಐರಣಿ, ರವಿ ಮಾಂಡ್ರೆ, ಪರಿಸರ ಎಂಜಿನಿಯರ್‌ ಸಿ. ಮಂಜುಳಾದೇವಿ, ಎಂಜಿನಿಯರ್‌ ನಂದ್ಯೆಪ್ಪ ಹಾಗೂ ಸುರೇಶ ಚಲವಾದಿ, ಗುಡಿಸಲಮನಿ, ರುದ್ರಮುನೀಶ್ವರ, ಎಸ್‌.ಆರ್‌. ರಿತ್ತಿಮಠ, ಕುಲಕರ್ಣಿ, ಡಿ.ಡಿ.ಕಾಟಿ, ಜಿ.ಜಿ.ಕಾಟಿ, ಮಲ್ಲೇಶ, ಕೋರಿಬಾಯಿ, ಜಗದೀಶ, ಕಂಬಳಿ, ಕಟ್ಟಿಮನಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT