ಕಟ್ಟಿಗೆ ಸಂಗ್ರಹ

ಪಲಿಮಾರು ಪರ್ಯಾಯ: ಕಟ್ಟಿಗೆ ಮುಹೂರ್ತ

ಪಲಿಮಾರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ಮಧ್ವ ಸರೋವರದ ಬಳಿ ಭಾನುವಾರ ಕಟ್ಟಿಗೆ ಮುಹೂರ್ತ ನಡೆಯಿತು.

ಉಡುಪಿ: ಪಲಿಮಾರು ಪರ್ಯಾಯಕ್ಕೆ ಪೂರ್ವಭಾವಿಯಾಗಿ ಮಧ್ವ ಸರೋವರದ ಬಳಿ ಭಾನುವಾರ ಕಟ್ಟಿಗೆ ಮುಹೂರ್ತ ನಡೆಯಿತು.

ಬೆಳಿಗ್ಗೆ 7 ಗಂಟೆಗೆ ಪಲಿಮಾರು ಮಠದಲ್ಲಿ ವಿಷ್ಣು ಸಹಸ್ರ ನಾಮ ವೇದ ಪಾರಾಯಣ, 7.45ಕ್ಕೆ ಚಂದ್ರೇಶ್ವರ, ಅನಂತೇಶ್ವರ ಹಾಗೂ ಶ್ರೀಕೃಷ್ಣ , ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. 8.30ಕ್ಕೆ ಪಲಿಮಾರು ಮಠದಿಂದ ರಾಜಾಂಗಣ ಮಾರ್ಗವಾಗಿ ಮಧ್ವಸರೋವರದ ವರೆಗೆ 5 ಕಟ್ಟು ಕಟ್ಟಿಗೆಯನ್ನು ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಅಲ್ಲಿ ಕಟ್ಟಿಗೆ ಕಟ್ಟುಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಹೆರ್ಗ ವೇದ ವ್ಯಾಸ ಭಟ್ ಪೌರೋಹಿತ್ಯ ವಹಿಸಿದ್ದರು.

‘ಪಲಿಮಾರು ಪರ್ಯಾಯದ ಸಿದ್ಧತೆಯ ಹಿನ್ನೆಲೆಯಲ್ಲಿ ಈಗಾಗಲೇ ಬಾಳೆ ಮುಹೂರ್ತ ಹಾಗೂ ಅಕ್ಕಿ ಮುಹೂರ್ತ ನಡೆದಿದೆ. ಪರ್ಯಾಯಕ್ಕೆ ಅಗತ್ಯ ಇರುವ ಕಟ್ಟಿಗೆಯನ್ನು ಸಂಗ್ರಹಿಸಲು ಈಗ ಕಟ್ಟಿಗೆ ಮುಹೂರ್ತ ಮಾಡಲಾಗಿದೆ’ ಎಂದು ಪಲಿಮಾರು ಮಠದ ದಿವಾನ ಶಿಬರೂರು ವೇದವ್ಯಾಸ ತಂತ್ರಿ ಸುದ್ದಿಗಾರರಿಗೆ ತಿಳಿಸಿದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಬಾಲಜಿ ರಾಘವೇಂದ್ರ, ಪ್ರದೀಪ್ ಕುಮಾರ್‌ ಕಲ್ಕೂರು,ಪದ್ಮನಾಭ, ಹರಿಕೃಷ್ಣ, ಕಟೀಲ ವಾಸುದೇವ, ಅಷ್ಟಮಠಗಳ ದಿವಾನರು ಇದ್ದರು.

ಪ್ರತಿ ದಿನ ಅನ್ನ ಸಂತರ್ಪಣೆಗೆ ಬಳಕೆ
ಎರಡು ವರ್ಷಗಳ ಅವಧಿಯ ಪರ್ಯಾಯಕ್ಕೆ ಅಗತ್ಯ ಇರುವ ಕಟ್ಟಿಗೆಯನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡುವುದೇ ಕಟ್ಟಿಗೆ ಮುಹೂರ್ತ. ಮಧ್ವ ಸರೋವರದ ಬಳಿ ಕಟ್ಟಿಗೆಯ ರಥವನ್ನು ನಿರ್ಮಾಣ ಮಾಡಲಾಗುತ್ತದೆ. ಚಪ್ಪರ ಮುಹೂರ್ತದ ದಿನ ಅದಕ್ಕೆ ಶಿಖರ ಕಲಶ ಇಡಲಾಗುತ್ತದೆ. ಕೃಷ್ಣ ಮಠದಲ್ಲಿ ಪ್ರತಿ ದಿನ ಅನ್ನ ಸಂತರ್ಪಣೆ ಇರುವುದರಿಂದ ಅಡುಗೆ ಮಾಡಲು ಭಾರಿ ಪ್ರಮಾಣದಲ್ಲಿ ಕಟ್ಟಿಗೆ ಬೇಕಾಗುತ್ತದೆ. ಪರ್ಯಾಯದ ಅಂತ್ಯದ ವೇಳೆಗೆ ರಥ ನಿರ್ಮಾಣಕ್ಕೆ ಉಪಯೋಗಿಸಿದ ಕಟ್ಟಿಗೆಯನ್ನೂ ತೆಗೆದು ಬಳಸಿಕೊಳ್ಳಲಾಗುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು
ಚತುರ ಸಾರಿಗೆ: ವರ್ಷಕ್ಕೆ ₹ 1 ಕೋಟಿ ಉಳಿತಾಯ

ಮೈಸೂರು
ಚತುರ ಸಾರಿಗೆ: ವರ್ಷಕ್ಕೆ ₹ 1 ಕೋಟಿ ಉಳಿತಾಯ

20 Oct, 2017

ರಾಮನಗರ
ಪ್ರತ್ಯೇಕ ಅಪಘಾತ ಒಟ್ಟು 8 ಸಾವು

ಸಾಹುಕಾರನ ಪಾಳ್ಯದ ಬಳಿ ಗುರುವಾರ ಹೆದ್ದಾರಿ ಪಕ್ಕದ ಬಸ್‌ ತಂಗುದಾಣದಲ್ಲಿ ನಿಂತಿದ್ದವರಿಗೆ ಕಾರು ಡಿಕ್ಕಿ ಹೊಡೆದು ಬೆಂಗಳೂರಿನ ಐವರು ಮೃತಪಟ್ಟಿದ್ದಾರೆ.

20 Oct, 2017
ರಾಜ್ಯೋತ್ಸವ ಪ್ರಶಸ್ತಿಗೆ ಸಾವಿರ ಅರ್ಜಿಗಳು

ಬೆಂಗಳೂರು
ರಾಜ್ಯೋತ್ಸವ ಪ್ರಶಸ್ತಿಗೆ ಸಾವಿರ ಅರ್ಜಿಗಳು

20 Oct, 2017
ಪ್ರಸನ್ನ ಉಪವಾಸ ಸತ್ಯಾಗ್ರಹ ಅಂತ್ಯ

ಬೆಂಗಳೂರು
ಪ್ರಸನ್ನ ಉಪವಾಸ ಸತ್ಯಾಗ್ರಹ ಅಂತ್ಯ

20 Oct, 2017

ಕಲಬುರ್ಗಿ
ಡೆಂಗಿ ಉಲ್ಬಣ: ರಾತ್ರಿ ಪಾಳಿ ಶುಶ್ರೂಷಕಿ ಅಮಾನತಿಗೆ ಸೂಚನೆ

‘ರಾತ್ರಿ ಪಾಳಿಯಲ್ಲಿ ಶುಶ್ರೂಷಕಿ ಗೈರು ಹಾಜರಾಗಿದ್ದು ಏಕೆ ಎನ್ನುವ ಕುರಿತು ಪರಿಶೀಲನೆ ನಡೆಸಬೇಕು. ತಪ್ಪು ಎಸಗಿರುವುದು ಕಂಡು ಬಂದರೆ ಅಮಾನತು ಮಾಡಬೇಕು’ ಎಂದು ಅಧಿಕಾರಿಗೆ...

20 Oct, 2017