ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ರಚನೆ ಚೌಕಟ್ಟು ಮೀರಬೇಕು

Last Updated 27 ಆಗಸ್ಟ್ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ‘ಬರಹಗಾರರು ತಮ್ಮ ಬರಹಗಳಿಗೆ ಯಾವುದೇ ಚೌಕಟ್ಟುಗಳನ್ನು ಹಾಕಿಕೊಳ್ಳದೆ, ಎಲ್ಲವನ್ನೂ ಒಳಗೊಂಡು ಸಾಹಿತ್ಯ ರಚನೆ ಮಾಡಬೇಕು’ ಎಂದು ಕತೆಗಾರ ವಿವೇಕ ಶಾನಭಾಗ ಅಭಿಪ್ರಾಯಪಟ್ಟರು.

ಶೂನ್ಯ ಕಲಾ ಕೇಂದ್ರ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕತೆಗಾರ ಇತರರ ಸಾಹಿತ್ಯ–ಬರಹಗಳ ನಿರಂತರ ಓದು, ವಿವಿಧ ಅನುಭವಗಳ ಅಳವಾದ ತಿಳಿವಳಿಕೆ ಹೊಂದಿರಬೇಕು. ಓದಿನಿಂದ ದೊರೆಯುವ ಭಿನ್ನ ಆಲೋಚನೆ ಹಾಗೂ ಅನುಭವದಿಂದ ದೊರೆಯುವ ಜ್ಞಾನವನ್ನು ಉತ್ತಮವಾಗಿ ಪೋಣಿಸುವ ಕಲೆಯೇ ಕತೆಗಾರಿಕೆ. ಅಲ್ಲದೆ, ಓದಿನ ಮೂಲಕ ಯಾವ ಪದಗಳನ್ನು ಎಲ್ಲೆಲ್ಲಿ ಬಳಸಬೇಕು ಎನ್ನುವ ಅರಿವು ಸಿಗುತ್ತದೆ’ ಎಂದು ವಿವರಿಸಿದರು.

‘ನನ್ನ ಜೀವನದಲ್ಲಿ ನಡೆಯುವ ಎಲ್ಲಾ ವಿಷಯಗಳನ್ನು ಕುತೂಹಲದಿಂದ ಕಾಣುತ್ತೇನೆ. ಅದು ನನ್ನ ಬರವಣಿಗೆಗೆ ಸಹಾಯವಾಗಿದೆ. ಮೈಸೂರು ಮತ್ತು ಕೊಲ್ಕತ್ತಾದಲ್ಲಿ ಅನೇಕ ಸಾಹಿತಿಗಳನ್ನು ಭೇಟಿ ಮಾಡುವ ಅವಕಾಶ ಲಭಿಸಿತ್ತು. ಅವರೊಂದಿಗಿನ ಒಡನಾಟ ಅದ್ಭುತ ಹೊಳಹುಗಳನ್ನು ನೀಡಿದೆ’ ಎಂದು ಹಂಚಿಕೊಂಡರು.

‘ಲೇಖಕ ಇಂದು ನಗರ ಜೀವನದ ಬಗ್ಗೆ ಬರೆಯಲು ಅಣಿಯಾದರೆ, ಈವರೆಗೆ ಬರೆದಿದ್ದನ್ನೆಲ್ಲ ಬಿಟ್ಟು, ಬೇರೆಯದನ್ನೇ ಬರೆಯಬೇಕಾಗುತ್ತದೆ. ಹಳ್ಳಿ ನಮ್ಮೆಲ್ಲರಿಂದ ದೂರವಾಗಿದೆ. ಹಾಗಾಗಿ ಅದರ ಬಗ್ಗೆ ಬರೆಯುವುದು ರಂಜನೀಯ ಅನುಭವ ನೀಡುತ್ತದೆ. ನಗರ ಜನಜೀವನವನ್ನು ಸೂಕ್ತವಾಗಿ ವಿವರಿ
ಸಲು ಪದಗಳು ಸಿಗುತ್ತಿಲ್ಲ. ಆದರೆ, ಈ ಸವಾಲನ್ನು ನಾವು ಎದುರಿಸಲೇಬೇಕು. ಇಂಥ ಸವಾಲನ್ನು ಎದುರಿಸಬೇಕಾಗಿರುವುದು ಲೇಖಕನ ಕೆಲಸ’ ಎಂದು ತಮ್ಮ ಕೃತಿಯ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT