ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ, ವಿದ್ಯುತ್ ಕಂಬ ಸಮಸ್ಯೆ ಪ್ರತಿಧ್ವನಿ

Last Updated 30 ಆಗಸ್ಟ್ 2017, 6:34 IST
ಅಕ್ಷರ ಗಾತ್ರ

ಬಳ್ಳಾರಿ: ‘ವಿದ್ಯುತ್‌ ಕಂಬಗಳನ್ನು ಅಧಿಕಾರಿಗಳು ಅಳವಡಿಸುತ್ತಿಲ್ಲ. ಹಲವು ತಿಂಗಳು ಕಳೆದರೂ ಅಂಗನವಾಡಿ ಶೌಚಾಲಯಗಳ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಅಧಿಕಾರಿಗಳೂ ಕೂಡ ಸಮರ್ಪಕ ಉತ್ತರ ನೀಡುತ್ತಿಲ್ಲ’ ಎಂದು ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಹಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಕೊಳಗೊಲ್ಲು ಗ್ರಾಮದ 8 ಅಂಗನವಾಡಿಗಳಲ್ಲಿ ಶೌಚಾಲಯ ದುಃಸ್ಥಿತಿಯಲ್ಲಿವೆ. ಅಲ್ಲಿ ಅಳವಡಿಸಿದ್ದ ನೀರಿನ ಟ್ಯಾಂಕ್‌ಗಳನ್ನು ದುಷ್ಕರ್ಮಿಗಳು ತೆಗೆದುಕೊಂಡು ಹೋಗಿದ್ದಾರೆ. ಇದ ರಿಂದ ಮಕ್ಕಳಿಗೆ ನೀರಿನ ಸಮಸ್ಯೆ ಎದುರಾಗಿದೆ’ ಎಂದು ಸದಸ್ಯ ಭೋಗರಾಜ್ ದೂರಿದರು.

‘ಕೊಳಗಲ್ಲು ಗ್ರಾಮದ ಅಂಗನ ವಾಡಿಯ ಶೌಚಾಲಯ ದುರಸ್ತಿ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಒಟ್ಟು 88 ದುರಸ್ತಿ ಕಾಮಗಾರಿಗಳನ್ನು ನಿರ್ಮಿತ ಕೇಂದ್ರ ನಿರ್ವಹಿಸುತ್ತಿದೆ’ ಎಂದು ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜ ನಾಧಿಕಾರಿ ಜಿ.ಕೃಷ್ಣಮ್ಮ ಸಮಜಾಯಿಸಿ ನೀಡಿದರು.

ಇದಕ್ಕೆ ಸಮಾಧಾನಗೊಳ್ಳದ ಸದಸ್ಯ, ‘ಆರು ತಿಂಗಳಿಂದ ಶೌಚಾಲಯದ ಸಮಸ್ಯೆ ಇದೆ. ಇಲ್ಲಿವರೆಗೂ ಯಾವುದೇ ದುರಸ್ತಿ ನಡೆದಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ನೀಡಲಾರರು. ಹೈದರಾಬಾದ್‌ ಕರ್ನಾಟಕ್ಕೆ ಸಾವಿರಾರು ಕೋಟಿ ಅನುದಾನ ಬರುತ್ತಿದೆ. ಅದು ಎಲ್ಲಿ ಹೋಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಈಗ ನಾವು ಸಭೆಗಳನ್ನು ಬಹಿಷ್ಕರಿಸುವ ಅನಿವಾರ್ಯತೆ ಬಂದಿದೆ’ ಎಂದು ಹೇಳಿದರು.

‘ಎರಡು ದಿನದೊಳಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಈ ಬಗ್ಗೆ ತಂಡ ರಚನೆ ಮಾಡಿ, ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ ಭರವಸೆ ನೀಡಿದರು.

‘ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಅನಧಿಕೃತವಾಗಿ ಪೈಪ್‌ಲೈನ್‌ ಹಾಕಿ ಕೊಂಡವರ ವಿರುದ್ಧ ಶಿಸ್ತು ಕ್ರಮ ಜರು ಗಿಸುವಂತೆ ಪಿಡಿಒ ಅವರಿಗೆ ಸೂಚಿಸ ಲಾಗಿದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ ಚಂದ್ರಶೇಖರ ತಿಳಿಸಿದರು.  

‘ಕೊರ್ಲಗುಂದಿ ಗ್ರಾಮಕ್ಕೆ  ವಿದ್ಯುತ್‌ ಕಂಬಗಳು ಇಲ್ಲದೇ ಇರುವುದ ರಿಂದ ಮನೆಗಳಿಗೆ ತಂತಿಗಳನ್ನು ಕಟ್ಟಲಾಗಿದೆ. ವಿದ್ಯುತ್‌ ಪರಿವರ್ತಕ ಅಳವಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರಿಗೆ ತೊಂದರೆ ಉಂಟಾ ದರೆ ಅದಕ್ಕೆ ಯಾರು ಹೊಣೆ?’ ಎಂದು ಸದಸ್ಯ ತಿಮ್ಮಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಪಿಡಿಒ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ದಾಖಲೆ ನೀಡಲು ಮೌಖಿಕ ಸೂಚನೆ ನೀಡಲಾಗಿದೆ. ಆದರೆ, ಇಲ್ಲಿವರೆಗೂ ದಾಖಲೆಗಳನ್ನು ಒದಗಿಸಿಲ್ಲ. ನಾನೇ ಸ್ಥಳಕ್ಕೆ ಭೇಟಿ ಕೊಟ್ಟು ಕ್ರಮ ಕೈಗೊಳ್ಳುತ್ತೇನೆ’ ಎಂದು ಜೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ ದಾಸಪ್ಪ ಹೇಳಿದರು.‘ದಮ್ಮೂರ ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ.

ಸಮಸ್ಯೆ ಬಗೆಹರಿಸದೇ ಹೋದರೆ ಜನರು ನಮ್ಮ ಮಾನ ಮರ್ಯಾದೆ ತೆಗೆಯುತ್ತಾರೆ. ಅಧಿಕಾರಿ ಗಳು ಅರ್ಥ ಮಾಡಿಕೊಂಡು ಸಮಸ್ಯೆ ಇತ್ಯರ್ಥ ಮಾಡಬೇಕು’ ಎಂದು ಸದಸ್ಯೆ ಸುಮಂಗಳಮ್ಮ ಅಳಲು ತೋಡಿ ಕೊಂಡರು. ತಾ.ಪಂ. ಅನುದಾನದಲ್ಲಿ ಗ್ರಾಮಕ್ಕೆ ವಿದ್ಯುತ್‌ ಕಂಬ ವ್ಯವಸ್ಥೆ ಮಾಡ ಲಾಗುವುದು ಎಂದು ಕಾರ್ಯ ನಿರ್ವ ಹಣಾಧಿಕಾರಿ ಭರವಸೆ ನೀಡಿದರು. ತಾ.ಪಂ. ಅಧ್ಯಕ್ಷೆ ರವೀಜಾ.ಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಮಲ್ಲಿ ಕಾರ್ಜುನ,  ಸದಸ್ಯ ತಿಮ್ಮಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT