ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸಭೆಗೆ ಜನರನ್ನು ಕರೆತರುವ ಹೊಣೆ ಅಧಿಕಾರಿಗಳ ಹೆಗಲಿಗೆ

Last Updated 30 ಆಗಸ್ಟ್ 2017, 7:03 IST
ಅಕ್ಷರ ಗಾತ್ರ

ಗಂಗಾವತಿ: ಸೆಪ್ಟಂಬರ್ ಎರಡು ಅಥವಾ ಮೂರನೇ ವಾರದಲ್ಲಿ ಕೊಪ್ಪಳದಲ್ಲಿ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಕ್ರಮದ ಯಶಸ್ಸಿಗೆ  ಜನರನ್ನು ಕರೆತರುವ ಜವಾಬ್ದಾರಿ ವಹಿಸುವ ಕ್ರಮಕ್ಕೆ ಅಧಿಕಾರಿಗಳು ಅಸಮಾಮಧಾನ ವ್ಯಕ್ತಪಡಿಸಿದರು.

ಪಟ್ಟಣದ ಮಂಥನ ಸಭಾಂಗಣದಲ್ಲಿ ಆಹಾರ ಮತ್ತು ನಾಗಕರಿಕ ಸರಬರಾಜು ಇಲಾಖೆ ಉಪ ನಿರ್ದೇಶಕಿ ಸಿ.ಡಿ.ಗೀತಾ ಹಾಗೂ ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು ಜನರನ್ನು ಕರೆತರುವ ಜವಾಬ್ದಾರಿ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸಿ.ಡಿ. ಗೀತಾ, ‘ಕೊಪ್ಪಳದಲ್ಲಿ ನಡೆಯುವ ಕಾರ್ಯಕ್ರಮ ಯಶಸ್ಸುಗೊಳಿಸುವ  ಜವಾಬ್ದಾರಿ ಅಧಿಕಾರಿಗಳ ಮೇಲಿ ದೆ. ಒಂದೆರಡು ಇಲಾಖೆಯ ಅಧಿಕಾರಿ ಗಳಿಂದ ಮಾತ್ರವೇ ಈ ಕಾರ್ಯ ಸಾಧ್ಯವಾಗದು. ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನ್ಯಾಯಬೆಲೆ ಅಂಗಡಿ ಹೊಂದಿರುವವರು ಅನ್ನಭಾಗ್ಯ ಯೋಜನೆ ಹೊಂದಿರುವ ಫಲಾನುಭವಿಗಳ ಪೈಕಿ ಶೇ 20ರಷ್ಟು ಜನರನ್ನು ಹಾಗೂ ಇದಕ್ಕಿಂತ ಹೆಚ್ಚು ಜನರನ್ನು ಕರೆತರಬೇಕು’ ಎಂದರು.

‘ಕರೆತರುವ ಜನರಿಗೆ ಬೆಳಗ್ಗೆ ಉಪಹಾರವನ್ನು ಆಯಾ ನ್ಯಾಯಬೆಲೆ ಅಂಗಡಿಯವರು ವಹಿಸಿಕೊಳ್ಳಬೇಕು. ಪ್ರತಿ ಗ್ರಾಮೀಣ ಭಾಗದಿಂದಲೂ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತ ವಹಿಸಿಕೊಳ್ಳುತ್ತದೆ. ಅಲ್ಲದೇ ಸಂಜೆ ನೇರವಾಗಿ ಆಯಾ ಗ್ರಾಮಗಳಿಗೆ ಫಲಾನುಭವಿಗಳನ್ನು ಬಿಡುವ ವ್ಯವಸ್ಥೆ ಮಾಡಲಾಗುವುದು. ಮತ್ತೆರಡು ಬಾರಿ ಸಭೆ ನಡೆಸಲಾಗುವುದು’ ಎಂದರು

ಇದಕ್ಕೆ ಕೆಲ ನ್ಯಾಯಬೆಲೆ ಅಂಗಡಿಯ ಮಾಲೀಕರು ವಿರೋಧ ವ್ಯಕ್ತಪಡಿಸಿದರು. ‘ಜನರಿಗೆ ನೀಡುವ ಉಪಹಾರ, ಊಟ, ಸಾರಿಗೆಯಂತಹ ಸವಲತ್ತಿನಲ್ಲಿ ಸಮಸ್ಯೆಯಾದರೆ ಅದಕ್ಕೆ ಯಾರು ಜವಾಬ್ದಾರರು? ನರೇಗಾ ಯೋಜನೆಗೆ ಕೂಲಿಕಾರರು ಸಿಗದಂತಹ ಸ್ಥಿತಿ ಇದೆ. ಇಡೀ ದಿನ ಎಲ್ಲ ಕೆಲಸಗಳನ್ನು ಬದಿಗೊತ್ತಿ ಯಾವ ಫಲಾನುಭವಿ ಬರುತ್ತಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ವಿನಾಯಕ ಅಗಸಿಮುಂದಿನ, ಆಹಾರ ಇಲಾಖೆಯ ಶಿರಸ್ತೇದಾರ ವಿಶ್ವನಾಥ ಮುರಡಿ, ನಗರ ಹಾಗೂ ಗ್ರಾಮೀಣ ನಿರೀಕ್ಷಕರಾದ ಎಚ್.ಐ. ಬಾಗಲಿ, ನಂದಾ ಪಿ.ಪಲ್ಲೇದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT