ಇಮೇಲ್‌ ಸ್ವೀಕರಿಸಿದವರ ಮಾಹಿತಿ ಗುಟ್ಟಾಗಿರಿಸಲು...

ತೀರಾ ಖಾಸಗಿಯಾದ ಇಮೇಲ್‌ ಕಳಿಸುವಾಗ ಮಾತ್ರ ಈ ವಿಧಾನ ಬಳಸಬಹುದು. ಕಚೇರಿ ಕೆಲಸ ಹಾಗೂ ತಂಡದ ಕೆಲಸದ ಮಾಹಿತಿಯನ್ನು ಮೇಲ್‌ ಮೂಲಕ ಹಂಚಿಕೊಳ್ಳಬೇಕಾದ ಸಂದರ್ಭದಲ್ಲಿ ಈ ವಿಧಾನ ಅನಗತ್ಯ

ಇಮೇಲ್‌ ಸ್ವೀಕರಿಸಿದವರ ಮಾಹಿತಿ ಗುಟ್ಟಾಗಿರಿಸಲು...

ಖಾಸಗಿತನ ಮೂಲಭೂತ ಹಕ್ಕು ಎಂದು ಸುಪ್ರೀಂಕೋರ್ಟ್‌ ಹೇಳಿದ ಬಳಿಕ ಖಾಸಗಿ ವಿಚಾರಗಳ ಬಗ್ಗೆ ಚರ್ಚೆ ಹೆಚ್ಚಾಗುತ್ತಿದೆ. ಅದರಲ್ಲೂ ತಂತ್ರಾಂಶದ ಜತೆಗೆ ಅಂಟಿಕೊಂಡಿರುವ ಖಾಸಗಿತನದ ಬಗ್ಗೆ ಚರ್ಚೆಗಳು ಜೋರಾಗಿವೆ. ಒಂದು ಖಾಸಗಿ ಇಮೇಲ್‌ ಅನ್ನು ಹಲವರಿಗೆ ಕಳಿಸುವ ಸಂದರ್ಭದಲ್ಲಿ ಆ ಮೇಲ್‌ ಅನ್ನು ಉಳಿದ ಯಾರೊಂದಿಗೆಲ್ಲಾ ಹಂಚಿಕೊಳ್ಳಲಾಗಿದೆ ಎಂಬುದೂ ಖಾಸಗಿ ವಿಚಾರವೇ.

ಒಂದೇ ಇಮೇಲ್‌ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಕಳಿಸುವ ಸಂದರ್ಭದಲ್ಲಿ ಆ ಇಮೇಲ್‌ ಅನ್ನು ಯಾರು ಯಾರಿಗೆಲ್ಲಾ ಕಳಿಸಲಾಗಿದೆ ಎಂಬುದನ್ನು ಗುಟ್ಟಾಗಿಡುವ ಬಗ್ಗೆ ಅನೇಕರಿಗೆ ತಿಳಿದಿರುವುದಿಲ್ಲ. ಹೀಗೆ ಇಮೇಲ್‌ ಸ್ವೀಕರಿಸಿದವರ ಹೆಸರನ್ನು ಗುಟ್ಟಾಗಿಡುವ (Undisclosed recipients) ವಿಧಾನದ ಬಗ್ಗೆ ಈ ವಾರ ತಿಳಿಯೋಣ.

ಮೊದಲಿಗೆ ನೀವು ಯಾರಿಗೆಲ್ಲಾ ಇಮೇಲ್‌ ಕಳಿಸಬೇಕು ಎಂಬುದನ್ನು ಪಟ್ಟಿ ಮಾಡಿಕೊಳ್ಳಿ. ಇಮೇಲ್‌ ಅಕೌಂಟ್ ಗೆ ಸೈನ್‌ ಇನ್‌ ಆದ ಬಳಿಕ ಕಂಪೋಸ್‌ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ to ಇರುವಲ್ಲಿ ಏನನ್ನೂ ಟೈಪ್‌ ಮಾಡಬೇಡಿ. Bcc ಕ್ಲಿಕ್‌ ಮಾಡಿ ಇಲ್ಲಿ ನೀವು ಯಾರಿಗೆಲ್ಲಾ ಇಮೇಲ್‌ ಕಳಿಸಬೇಕೋ ಅವರ ಇಮೇಲ್‌ ಐಡಿ ಟೈಪ್‌ ಮಾಡುತ್ತಾ ಹೋಗಿ. ಕೊನೆಗೆ ಮೇಲ್‌ ಬಾಡಿಯಲ್ಲಿ ವಿವರ ಬರೆದು, ಸಬ್ಜೆಕ್ಟ್‌ ನೀಡಿ send ಒತ್ತಿ.

ಈಗ ನೀವು ಕಳಿಸಿದ ಇಮೇಲ್‌ ಸ್ವೀಕರಿಸಿದವರಿಗೆ ಉಳಿದ ಯಾರಿಗೆಲ್ಲಾ ಆ ಮೇಲ್‌ ಹೋಗಿದೆ ಎಂಬುದು ಗೊತ್ತಾಗುವುದಿಲ್ಲ. ಸ್ವೀಕರಿಸಿದವರ ಮೇಲ್ ಡೀಟೇಲ್ಸ್‌ ನಲ್ಲಿ to ಎಂಬ ಕಡೆ undisclosed-recipients ಎಂದು ಕಾಣಿಸಿಕೊಳ್ಳುತ್ತದೆ. ನೀವು ಕಳಿಸಿದ ಇಮೇಲ್‌ ಎಲ್ಲರಿಗೂ ಹೋಗಿರುತ್ತದೆ. ಆದರೆ, ಮೇಲ್‌ ಸ್ವೀಕರಿಸಿದವರಿಗೆ ತಮ್ಮನ್ನು ಬಿಟ್ಟು ಬೇರೆ ಯಾರಿಗೆ ಈ ಮೇಲ್‌ ಕಳಿಸಲಾಗಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುವುದಿಲ್ಲ.

ತೀರಾ ಖಾಸಗಿಯಾದ ಇಮೇಲ್‌ ಕಳಿಸುವಾಗ ಮಾತ್ರ ಈ ವಿಧಾನ ಬಳಸಬಹುದು. ಕಚೇರಿ ಕೆಲಸ ಹಾಗೂ ತಂಡದ ಕೆಲಸದ ಮಾಹಿತಿಯನ್ನು ಮೇಲ್‌ ಮೂಲಕ ಹಂಚಿಕೊಳ್ಳಬೇಕಾದ ಸಂದರ್ಭದಲ್ಲಿ ಈ ವಿಧಾನ ಅನಗತ್ಯ. ಕಚೇರಿ ಕೆಲಸಗಳಲ್ಲಿ ಇಮೇಲ್‌ ಅನ್ನು ಯಾರಿಗೆಲ್ಲಾ ಕಳಿಸಲಾಗಿದೆ ಎಂಬ ಮಾಹಿತಿ ಮೇಲ್‌ ಸ್ವೀಕರಿಸಿದ ಎಲ್ಲರಿಗೂ ತಿಳಿಯುವುದು ಮುಖ್ಯ.

Comments
ಈ ವಿಭಾಗದಿಂದ ಇನ್ನಷ್ಟು

ತಂತ್ರಜ್ಞಾನ
ವೆಬ್‌ಲಿಂಕ್‌ ಹೋಮ್‌ ಸ್ಕ್ರೀನ್‌ಗೆ ಆ್ಯಡ್‌ ಮಾಡಲು...

ಮೊದಲು ಮೊಬೈಲ್‌ನಲ್ಲಿ ಬ್ರೌಸರ್‌ ತೆರೆಯಿರಿ. ನೀವು ಯಾವ ವೆಬ್‌ಸೈಟ್‌ ಅನ್ನು ಹೋಮ್‌ಸ್ಕ್ರೀನ್‌ಗೆ ಆ್ಯಡ್‌ ಮಾಡಬೇಕೋ ಅದರ ಯುಆರ್‌ಎಲ್‌ ಟೈಪ್‌ ಮಾಡಿ ಓಕೆ ಒತ್ತಿ. ವೆಬ್‌ಸೈಟ್‌ನ...

21 Sep, 2017
ಪೆನ್‌ಡ್ರೈವ್‌ ತೆಗೆಯುವ ಮುನ್ನ

ತಂತ್ರೋಪನಿಷತ್ತು
ಪೆನ್‌ಡ್ರೈವ್‌ ತೆಗೆಯುವ ಮುನ್ನ

14 Sep, 2017
ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡುವುದು ಹೇಗೆ?

ತಂತ್ರೋಪನಿಷತ್ತು
ವೆಬ್‌ಪೇಜ್‌ ಬುಕ್‌ಮಾರ್ಕ್‌ ಮಾಡುವುದು ಹೇಗೆ?

7 Sep, 2017
ದಿನಪತ್ರಿಕೆಗಳ ‘ಪೇಪರ್‌ ಬಾಯ್’ ಆ್ಯಪ್‌

ಕಿರು ತಂತ್ರಾಂಶ
ದಿನಪತ್ರಿಕೆಗಳ ‘ಪೇಪರ್‌ ಬಾಯ್’ ಆ್ಯಪ್‌

6 Sep, 2017
ಜಿ–ಮೇಲ್‌ನಲ್ಲಿ ಇವೆ ಹಲವು ಸೌಲಭ್ಯಗಳು

ತಂತ್ರಜ್ಞಾನ
ಜಿ–ಮೇಲ್‌ನಲ್ಲಿ ಇವೆ ಹಲವು ಸೌಲಭ್ಯಗಳು

6 Sep, 2017