ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಸಂತೆಯಲ್ಲಿ...

Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಯಮಹಾದಿಂದ ಹೊಸ ಫೇಜರ್ 25

ಯಮಹಾ ತನ್ನ ಹೊಸ ಫೇಜರ್ 25 ಬೈಕ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಅದರ ಬೆಲೆಯನ್ನು ₹1.29 ಲಕ್ಷ (ದೆಹಲಿ, ಎಕ್ಸ್‌ ಶೋರೂಂ ಬೆಲೆ)ಕ್ಕೆ ನಿಗದಿಗೊಳಿಸಿದೆ.

ಶೈಲಿ, ಕಂಫರ್ಟೆಬಲ್ ಸೀಟ್‌ಗಳು, ತಂತ್ರಜ್ಞಾನ ಸೇರಿ ಉತ್ತಮ ಟೂರಿಂಗ್ ಬೈಕ್‌ನಂತೆ ವಿನ್ಯಾಸಗೊಂಡಿದೆ. ಎಫ್‌ಝಡ್ 25 ಬೈಕ್‌ನ ಪ್ಲಾಟ್‌ಫಾರ್ಮ್‌ ಮೇಲೆಯೇ ಈ ಬೈಕ್ ಅನ್ನೂ ಅಭಿವೃದ್ಧಿಗೊಳಿಸಲಾಗಿದೆ. 249ಸಿಸಿ, 4 ಸ್ಟ್ರೋಕ್, ಎಸ್‌ಒಎಚ್‌ಸಿ, 2 ವಾಲ್ವ್‌ ಸಿಂಗಲ್ ಸಿಲಿಂಡರ್ ಎಂಜಿನ್ ಬೈಕ್‌ಗಿದೆ. ಇದು 20.7 ಬಿಎಚ್‌ಪಿ ಶಕ್ತಿ –8,000ಆರ್‌ಪಿಎಂ, 20ಎನ್‌ಎಂ ಪೀಕ್ ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಹೊಸ ತಲೆಮಾರಿಯ ಎಂಜಿನ್ ತಂತ್ರಜ್ಞಾನ– ಬ್ಲೂಕೋರ್ ಟೆಕ್ನಾಲಜಿಯನ್ನು ಬಳಸಿಕೊಂಡು ಬೈಕ್ ಅಭಿವೃದ್ಧಿಗೊಳಿಸಲಾಗಿದೆ.

ಬಿಎಸ್‌ಐವಿ ಎಮಿಷನ್ ಸ್ಟಾಂಡರ್ಡ್‌ಗೆ ತಕ್ಕಂತೆ ರೂಪಿಸಲಾಗಿದೆ. ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್‌, ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡಿಸ್ಕ್‌ ಬ್ರೇಕ್‌ಗಳಿದ್ದು, ಸೋಲ್‌ಫುಲ್‌ ಸಿಯಾನೆ ಹಾಗೂ ರಿದೆಮಿಕ್ ರೆಡ್‌ ಎಂಬ ಎರಡು ಬಣ್ಣಗಳಲ್ಲಿ ಲಭ್ಯ.

***

ಮಾಂಟೆ ಕಾರ್ಲೊ ಮಿಡ್‌ಸೈಜ್ ಸೆಡಾನ್

ಸ್ಕೋಡಾ ಆಟೊ ಇಂಡಿಯಾ, ತನ್ನ ಮಾಂಟೆ ಕಾರ್ಲೊ ಎಡಿಷನ್‌ನ ಮಧ್ಯಮ ಗಾತ್ರದ ಸೆಡಾನ್ ಅನ್ನು ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ‌₹ 10.75 ಲಕ್ಷದ ಆಕರ್ಷಣೀಯ ಬೆಲೆಗೆ ಹೊರತರುವುದಾಗಿ ಹೇಳಿಕೊಂಡಿದೆ.

ಕಪ್ಪು ರೂಫ್‌ನ ಫ್ಲಾಶ್‌ ರೆಡ್ ಬಣ್ಣ ಹಾಗೂ ಕಪ್ಪು ರೂಫ್‌ನ ಕ್ಯಾಂಡಿ ವೈಟ್ ಬಣ್ಣಗಳಲ್ಲಿ ಮಾಂಟೆ ಕಾರ್ಲೊ ಲಭ್ಯ. ‘ಒನ್‌ ನೇಷನ್, ಒನ್‌ ಪ್ರೈಸ್’ ಎಂಬ ಧ್ಯೇಯ ವಾಕ್ಯದೊಂದಿಗೆ, ಈ ಸೆಡಾನ್ ಅನ್ನು ವಿನ್ಯಾಸಗೊಳಿಸಲಾಗಿದೆಯಂತೆ.

ಹೊರಾಂಗಣದ ಬ್ಲಾಕ್ ರೇಡಿಯೇಟರ್ ಗ್ರಿಲ್ ಹಾಗೂ ಕಪ್ಪು ಟೇಲ್‌ಗೇಟ್‌ನ ಸ್ಪಾಯ್ಲರ್‌ನೊಂದಿಗೆ ಕಪ್ಪು ವಿಂಗ್ ಮಿರರ್ ಹೌಸಿಂಗ್ಸ್ ಕಾರನ್ನು ಸ್ಪೋರ್ಟಿಯಂತೆ ಕಾಣಿಸಿದೆ. ನಗರ ಜೀವನಕ್ಕೆ ಹೇಳಿ ಮಾಡಿಸಿದಂತಿದೆ. ಕ್ಲೈಮಟ್ರಾನಿಕ್ ತಂತ್ರಜ್ಞಾನ ಒಳಗೊಂಡಿದ್ದು, ಡ್ಯುಯಲ್ ರಿಯರ್ ಎಸಿ ವೆಂಟ್‌ಗಳು ಕಾರಿಗೆ ಕಂಫರ್ಟ್‌ ತಂದುಕೊಟ್ಟಿವೆ. ಒಳಗೆ ಸಾಕಷ್ಟು ಸ್ಥಳಾವಕಾಶವಿದೆ. ‌ಇನ್ನೂ ಒಂದು ವಿಶೇಷತೆ ಇರುವುದು ಲಗೇಜ್ ಜಾಗದಲ್ಲಿ. ಐದು ಮಂದಿ ಹಿಡಿಸುವಷ್ಟು ಜಾಗವಿಲ್ಲಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆ ಇರಲಿದೆ. 1.5 ಲೀಟರ್ ಎಂಜಿನ್ 110ಪಿಎಸ್‌ –250 ಎನ್‌ಎಂ ಟಾರ್ಕ್ ಶಕ್ತಿ ಉತ್ಪಾದಿಸುತ್ತದೆ. 21.72 ಕಿ.ಮೀ ಮೈಲೇಜ್ (ಡಿಎಸ್‌ಜಿ), 21.13 ಕಿ,ಮೀ (ಎಂ.ಟಿ) ನೀಡಲಿದೆ.

***

2022ಕ್ಕೆ ಫೋಕ್ಸ್‌ವ್ಯಾಗನ್ ಎಲೆಕ್ಟ್ರಿಕ್ ಬಸ್

ಫೋಕ್ಸ್‌ವ್ಯಾಗನ್ 2022ರ ವೇಳೆಗೆ ತನ್ನ ಪರಿಕಲ್ಪನೆಯ ಎಲೆಕ್ಟ್ರಿಕ್ ಬಸ್‌ ಅನ್ನು ಹೊರತರುವುದಾಗಿ ಹೇಳಿಕೊಂಡಿದೆ. ಅದಕ್ಕೆ ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದೆ. ಫೋಕ್ಸ್‌ವ್ಯಾಗನ್ ಇತ್ತೀಚೆಗೆ ಈ ಬಸ್‌ನ ಪರಿಕಲ್ಪನೆಯನ್ನು ತೆರೆದಿಟ್ಟಿತ್ತು. ಹಳೆಯ ಶಾಲಾ ವಾಹನದ ಮಾದರಿ ಹಾಗೂ ಇತ್ತೀಚಿನ ತಂತ್ರಜ್ಞಾನ ಎರಡನ್ನೂ ಸೇರಿಸಿ ಈ ಕಾಲದ ಅಗತ್ಯಕ್ಕೆ ತಕ್ಕಂತೆ ಬಸ್ ರೂಪಿಸುವ ಆಲೋಚನೆಯನ್ನು ನೀಡಿತ್ತು.

ಇದೀಗ ‘ಐ.ಡಿ. ಬಝ್’ ವಿನ್ಯಾಸದ ಕುರಿತು ಕೆಲಸ ಮಾಡುತ್ತಿದೆ.  ಈ ಬಸ್‌ನಲ್ಲಿ, ಕೇವಲ ಒಂದೇ ಚಾರ್ಜ್‌ನಲ್ಲಿ 300 ಮೈಲಿ ಓಡುವ ಸಾಮರ್ಥ್ಯವನ್ನು ಹೊಂದುವಂಥ ಬ್ಯಾಟರಿಯನ್ನು ಬಳಸಲಾಗಿದೆ. 30 ನಿಮಿಷಗಳಲ್ಲಿ 80% ಚಾರ್ಜ್ ಮಾಡಬಹುದಾಗಿದೆ. ಐ.ಡಿ. ಬಝ್ ಸೆಮಿ ಆಟೊನಮಸ್ ಟೆಕ್ನಾಲಜಿಯನ್ನು ಹೊಂದಿರಲಿದೆ. ಈ ‘ಆಲ್ ಎಲೆಕ್ಟ್ರಿಕ್ ವೆಹಿಕಲ್’ ಎನ್ನುವ ಪರಿಕಲ್ಪನೆ ಈಗ ಹೆಚ್ಚು ಹೆಚ್ಚು ಸುದ್ದಿ ಮಾಡುತ್ತಿದ್ದು, ಈ ಪರಿಕಲ್ಪನೆಯಲ್ಲಿ ಇನ್ನೂ ಹೊಸ ಆಯ್ಕೆಗಳನ್ನು ಹಾಗೂ ವಿಶೇಷತೆಗಳನ್ನು ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT