ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ದಿನದಂದು ಲಂಡನ್‌ನಲ್ಲಿ ಕನ್ನಡ ಹಬ್ಬ

Last Updated 30 ಆಗಸ್ಟ್ 2017, 19:47 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗರು ಯು.ಕೆ. ಸಂಘಟನೆಯು ಕನ್ನಡ ರಾಜ್ಯೋತ್ಸವ ಅಂಗವಾಗಿ ನವೆಂಬರ್ 18ರಂದು ಲಂಡನ್‌ನಲ್ಲಿ ಕನ್ನಡ ಹಬ್ಬ ಕಾರ್ಯಕ್ರಮ ಆಯೋಜಿಸಿದೆ.

ಈ ಕುರಿತು ಬುಧವಾರ ಇಲ್ಲಿ ಮಾಹಿತಿ ನೀಡಿದ ಸಂಘಟನೆಯ ಅಧ್ಯಕ್ಷ ಗಣಪತಿ ಭಟ್‌, ‘ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕನ್ನಡ ಚಲನಚಿತ್ರಗಳ ಪ್ರದರ್ಶನ, ಕನ್ನಡ ಬೆಳೆಸಲು ದುಡಿಯುತ್ತಿರುವ ವ್ಯಕ್ತಿ, ಸಂಸ್ಥೆಗಳಿಗೆ ಸನ್ಮಾನ ಸಮಾರಂಭ ನಡೆಯುತ್ತದೆ’ ಎಂದರು.

‘ಕಲಾವಿದ ಮಂಡ್ಯ ರಮೇಶ್, ಹಾಸ್ಯ ಕಲಾವಿದ ನವೀನ ಡಿ. ಪಡೀಲ್, ಜನಪದ ಕಲಾವಿದ ಗೋನಾ ಸ್ವಾಮಿ, ಹಾಸ್ಯಗಾರ ಮಹದೇವ ಶೆಟ್ಟಿಗೇರಿ ಹಾಗೂ ನಟಿ ದಿಶಾ ರಮೇಶ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ’ ಎಂದರು.

‘ಇಂಗ್ಲೆಂಡಿನ ಮಕ್ಕಳಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಪ್ರತಿ ವಾರಾಂತ್ಯಗಳಲ್ಲಿ ಕನ್ನಡ ಕಲಿ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇಂಗ್ಲೆಂಡಿನ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಕನ್ನಡ ಪರ ಚಟುವಟಿಕೆಗಳನ್ನು ಸಂಘಟನೆ ನಡೆಸಿಕೊಂಡು ಬರುತ್ತಿದೆ’ ಎಂದರು.

ನಾಗತಿಹಳ್ಳಿ ಚಂದ್ರಶೇಖರ್, ‘ಇಂಗ್ಲೆಂಡಿನ ವಿವಿಧ ಭಾಗಗಳಲ್ಲಿ ಕನ್ನಡಿಗರು ಹಂಚಿಹೋಗಿದ್ದಾರೆ. ಅವರನ್ನು ಸಂಘಟಿಸುವುದು ಕಷ್ಟಕರ. ಇಂತಹ ಸಾಂಸ್ಕೃತಿಕ ಸಮಾರಂಭಗಳು ಕನ್ನಡಿಗರ ಸಂಘಟನೆಗೆ ಸಹಕಾರಿಯಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಇಂಗ್ಲೆಂಡಿನಲ್ಲಿ ಕನ್ನಡ ಚಲನ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಅಲ್ಲಿನ ಕನ್ನಡಿಗ ಯುವಕರ ಕನ್ನಡ ಕಟ್ಟುವ ಕಾರ್ಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಈ ಸಂಘಟನೆಯ ಸ್ಫೂರ್ತಿಯಿಂದ ಇಂದು ಜರ್ಮನಿ, ಫ್ರಾನ್ಸ್‌ ರಾಷ್ಟ್ರಗಳಲ್ಲಿಯೂ ಕನ್ನಡ ಕೂಟಗಳು ಆರಂಭವಾಗಿವೆ. ಅಮೇರಿಕಕ್ಕೆ ಸೀಮಿತವಾಗಿದ್ದ ಕನ್ನಡ ಹಬ್ಬಗಳನ್ನು ಯುರೋಪಿಗೂ ವಿಸ್ತರಿಸುವ ಕಾರ್ಯವನ್ನು ಸಂಘಟನೆ ಮಾಡುತ್ತಿದೆ’ ಎಂದು ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT