ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಡವನ್ನು ಚೆಂದಗೊಳಿಸಿ...

Last Updated 31 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಕೈತೋಟ ನಿಮ್ಮ ಕೌಶಲ ಪ್ರದರ್ಶಿಸುತ್ತದೆ. ಚೆಂದವಾದ ಗಿಡ ಬೆಳೆಯುವುದರ ಜೊತೆಗೆ ಗಿಡಕ್ಕೆ ಆಸರೆಯಾಗಿರುವ ಕುಂಡವೂ ವಿಭಿನ್ನವಾಗಿದ್ದರೆ ನೋಡುಗರನ್ನು ಆಕರ್ಷಿಸುತ್ತದೆ. ಒಂದಿಷ್ಟು ಸಮಯ ವಿನಿಯೋಗಿಸಿದರೆ ಆಕರ್ಷಕ ಕುಂಡಗಳನ್ನು ತಯಾರಿಸಬಹುದು.

l ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಗಿಡ ಬೆಳೆಯುವ ಉದ್ದೇಶ ನಿಮ್ಮದಾಗಿದ್ದರೆ, ಮಣ್ಣು ಹಿಡಿದಿಡುವ ರೀತಿಯಲ್ಲಿ ಬಾಟಲಿಯನ್ನು ಬೇಕಾದ ಆಕಾರಕ್ಕೆ ಕತ್ತರಿಸಿ. ಇಷ್ಟದ ಬಣ್ಣವನ್ನು ಹಚ್ಚಿ, ನಂತರ ಸ್ಕೆಚ್‌ ಪೆನ್ನಿನಲ್ಲಿ ಕಣ್ಣು, ಬಾಯಿ ಮೂಗು ಬಿಡಿಸಬಹುದು. ಕಾರ್ಡ್‌ಬೋರ್ಡ್‌ ಮೂಲಕ ಕಣ್ಣನ್ನು ಮಾಡಿ ಬಾಟಲಿಗೆ ಅಂಟಿಸಬಹುದು. ಬಾಟಲಿ ಮುಚ್ಚಳವನ್ನು ಅಂಟಿಸಿ ಕುಂಡಕ್ಕೆ ಮೂಗು ಮಾಡಬಹುದು. ಈ ರೀತಿಯ ಪಾಟ್‌ಗಳಲ್ಲಿ ಚಿಕ್ಕ ಗಿಡಗಳನ್ನು ಬೆಳೆಯಿರಿ. ಇದು ಮಕ್ಕಳಿಗೆ ಇಷ್ಟವಾಗುತ್ತದೆ. ನೀರು ಹಾಕುವ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಬಹುದು. ಈ ರೀತಿಯ ಕುಂಡಗಳನ್ನು ನೀರಿನ ಬಾಟಲಿಗಳಲ್ಲಿ ಮಾಡುವ ಜೊತೆಗೆ ಹಿಡಿಕೆಯಿರುವ ಎಣ್ಣೆಯ ಬಾಟಲಿಗಳಲ್ಲಿ ಮಾಡಿದರೆ ಆಕರ್ಷಕವಾಗಿ ಕಾಣುತ್ತದೆ.

l ಪೇಂಟ್‌ ಡಬ್ಬಿಯ ಸುತ್ತ ಬಣ್ಣ ಬಳಿಯಿರಿ. ನಂತರ ಬಣ್ಣಬಣ್ಣದ ಮ್ಯಾಗಜೀನ್ ಕಾಗದವನ್ನು ವಜ್ರಕಾರದಲ್ಲಿ ಕತ್ತರಿಸಿ, ಅದನ್ನು ಡಬ್ಬಿಗೆ ಅಂಟಿಸಿ. ಅದರ ಮೇಲೆ ವಾಟರ್‌ ಕಲರ್‌ ಹಚ್ಚಿದರೆ ವಿಭಿನ್ನವಾದ ಪಾಟ್‌ ತಯಾರಾಗುತ್ತದೆ.

l ಅರ್ಧ ಕತ್ತರಿಸಿದ ಬಾಟಲಿಗೆ ಗಮ್‌ ಹಾಕಿ ಬಟ್ಟೆಯನ್ನು ಸುತ್ತಿ. ಇದರ ಮೇಲೆ ಕುಂದನ್‌ಗಳಿಂದ ಬೇಕಾದ ರೀತಿಯಲ್ಲಿ ಅಲಂಕಾರ ಮಾಡಿಕೊಳ್ಳಬಹುದು.

l ಅಂಗಡಿಗಳಲ್ಲಿ ಸಿಗುವ ಕಂದು ಬಣ್ಣದ ಕುಂಡವನ್ನೂ ಹಲವು ಬಗೆಯಲ್ಲಿ ಶೃಂಗರಿಸಬಹುದು. ಕುಂಡದ ಮೇಲೆ ನಿಮ್ಮ ಪೇಂಟ್‌ನಿಂದ ಹೆಸರು ಬರೆದು ಅದರ ಸುತ್ತ ಬೇಕಾದ ಕುಂದನ್‌ ಬಳಸಿ ಚಿತ್ತಾರ ಮೂಡಿಸಬಹುದು.

l ಮನೆಯಲ್ಲಿ ಟೈಲ್ಸ್‌ಗಳಿದ್ದರೆ ಅದನ್ನು ಕುಂಡದ ಮೇಲೆ ಅಂಟಿಸಿ, ಅದರ ಮೇಲೆ ಬಿಳಿ ಪೇಂಟ್‌ ಹಚ್ಚಬಹುದು. ಇಲ್ಲದಿದ್ದರೆ ಚಿಕ್ಕ ಬೆಣಚು ಕಲ್ಲುಗಳನ್ನು ಅಂಟಿಸಿ ಪೇಂಟ್‌ ಹಚ್ಚಬಹುದು.

l ದೊಡ್ಡ ಬಕೆಟ್‌ನಲ್ಲಿ ನೀರು ಹಾಕಿ, ಅದರೊಳಗೆ ನಾಲ್ಕು ವಿಭಿನ್ನ ಪೇಂಟ್‌ಗಳನ್ನು ಹಾಕಿ ಮಿಶ್ರಣ ಮಾಡಿ. ಅದರೊಳಗೆ ಪಾಟ್‌ ಅದ್ದಿ. ಹಲವು ಬಣ್ಣಗಳಲ್ಲಿ ಮಿಂದೆದ್ದ ಆಕರ್ಷಕ ಪಾಟ್‌ ತಯಾರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT