ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಲ್‌ ಬ್ಯಾಡ್ರಿ, ಬರಿ ಸಾಮಾನ್‌ ಕೊಡ್ರಿ ಸಾಕು’

Last Updated 2 ಸೆಪ್ಟೆಂಬರ್ 2017, 5:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಶುಕ್ರವಾರಕ್ಕೆ ಎರಡು ತಿಂಗಳು ಕಳೆಯಿತು. ಆದರೂ ವ್ಯಾಪಾರಸ್ಥರಲ್ಲಿ ಗೊಂದಲಗಳು ಉಳಿದಿವೆ. ಕ್ರೀಡಾ ಸಾಮಗ್ರಿಗಳ ಮಾರುಕಟ್ಟೆಯಲ್ಲಿ ಮೊದಲಿನ ವ್ಯಾಪಾರದ ಕಳೆಯೂ ಉಳಿದಿಲ್ಲ.

ಜಿಎಸ್‌ಟಿ ಜಾರಿಗೆ ಬರುವುದಕ್ಕಿಂತ ಮೊದಲು ಎಲ್ಲಾ ಕ್ರೀಡಾ ಸಾಮಗ್ರಿಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ, ಈಗ ಪ್ರತಿ ಕ್ರೀಡಾ ಪರಿಕರಕ್ಕೂ ಪ್ರತ್ಯೇಕ ತೆರಿಗೆ ನಿಗದಿ ಮಾಡಿರುವ ಕಾರಣ ಗ್ರಾಹಕರು ಮೊದಲಿನ ಹಾಗೆ ಸಾಮಗ್ರಿ ಖರೀದಿಸಲು ಮುಂದೆ ಬರುತ್ತಿಲ್ಲ.

ಅಥ್ಲೆಟಿಕ್ಸ್‌ಗೆ ಸಂಬಂಧಿಸಿದ ಸಾಮಗ್ರಿಗಳ ಮೇಲೆ ಶೇ 28ರಷ್ಟು, ಡಂಬಲ್ಸ್‌, ಲೇಜಿಂಗ್ಸ್‌ ಮೇಲೆ ಶೇ 28ರಷ್ಟು, ಕ್ರೀಡಾ ಪೋಷಾಕುಗಳ  ಮೇಲೆ ಶೇ 5ರಷ್ಟು ಮತ್ತು ಟ್ರೋಫಿಗಳ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಬಹುತೇಕ ವ್ಯಾಪಾರಸ್ಥರು ಜಿಎಸ್‌ಟಿ ಜಾರಿಗೆ ಬರುವುದಕ್ಕಿಂತ ಮೊದಲು ಖರೀದಿಸಿದ ವಸ್ತುಗಳನ್ನೇ ಮಾರಾಟ ಮಾಡುತ್ತಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬಂದ ಮೇಲೆ ವ್ಯಾಪಾರ ಶೇ 50ರಷ್ಟು ಕಡಿಮೆಯಾಗಿದೆ. ಸಾಮಾನ್ಯವಾಗಿ ವಾಲಿಬಾಲ್‌, ಕ್ರಿಕೆಟ್‌ ಬ್ಯಾಟ್‌, ಟೆನಿಸ್‌ ರ್‍ಯಾಕೆಟ್‌ಗಳು ಹೆಚ್ಚು ಖರ್ಚಾಗುತ್ತಿದ್ದವು. ಈಗ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ.

ಗ ಪ್ರತಿ ತಿಂಗಳಿಗೆ ₹ 40 ರಿಂದ ₹ 50 ಸಾವಿರ ವ್ಯಾಪಾರ ಮಾಡುತ್ತಿದ್ದೆವು. ಈಗ ₹ 20 ಸಾವಿರ ವ್ಯಾಪಾರ ಆಗುವುದೇ ಕಷ್ಟವಾಗಿದೆ’ ಎಂದು ಹುಬ್ಬಳ್ಳಿಯ ನೆಹರೂ ಮೈದಾನದ ಬಳಿ ಇರುವ ಇಂಡಿಯಾ ಸ್ಪೋರ್ಟ್ಸ್‌ ಅಂಡ್‌ ಸೈಂಟಿಫಿಕ್‌ ಸೆಂಟರ್‌ನ ಸಹ ಮಾಲೀಕ ಡಿ.ಕೆ. ಪಾಠಕ ಹೇಳುತ್ತಾರೆ.

ಟ್ರೋಫಿಗಳನ್ನು ಅಂಗಡಿಯಲ್ಲಿ ಹೆಚ್ಚು ದಿನ ಇಟ್ಟರೆ ಅದರ ಬಣ್ಣಕ್ಕೆ ಕುಂದುಂಟಾಗುತ್ತದೆ. ಆಗ ಅವುಗಳನ್ನು ಯಾರೂ ಖರೀದಿಸುವುದಿಲ್ಲ. ಇದರಿಂದಲೂ ನಷ್ಟ ಹೆಚ್ಚು ಎಂದು ವ್ಯಾಪಾರಸ್ಥರು ಬೇಸರ ತೋಡಿಕೊಂಡರು.

‘ಶಾಲೆ ಮತ್ತು ಕಾಲೇಜುಗಳಿಗೆ ನೇರವಾಗಿ ಕ್ರೀಡಾ ಸಾಮಗ್ರಿಗಳನ್ನು ಕಳುಹಿಸುತ್ತೇವೆ. ಆದರೆ, ಅಂಗಡಿಗೆ ಬಂದು ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ’ ಎಂದು ಜಾಹ್ನವಿ ಸ್ಪೋರ್ಟ್ಸ್‌್ ಅಂಡ್‌ ಸೈಂಟಿಫಿಕ್‌ ಕಂಪೆನಿಯ ಸಹ ಮಾಲೀಕ ಉದಯ ಕುಲಕರ್ಣಿ ಹೇಳಿದರು.

‘ಜಿಎಸ್‌ಟಿ ಕಟ್ಟಲೇಬೇಕು ಎಂದು ಹೇಳಿದರೂ ಗ್ರಾಹಕರು ಕೇಳುವುದಿಲ್ಲ. ನಮಗ ಬಿಲ್‌ ಬ್ಯಾಡ್ರಿ ಎನ್ನುತ್ತಾರೆ. ಬಿಲ್‌ ಇಲ್ಲದೇ ಮಾರಾಟ ಮಾಡುವುದು ಕೆಲ ಬಾರಿ ಅನಿವಾರ್ಯವಾಗುತ್ತದೆ. ಆದ್ದರಿಂದ ನಮಗೆ ಈಗ ಲಾಭದ ಪ್ರಮಾಣ ಕಡಿಮೆಯಾಗಿದೆ.

ರಾಟ ಕಡಿಮೆಯಾಗಲು ಹೊಸ ತೆರಿಗೆ ನೀತಿಯಷ್ಟೇ ಕಾರಣವಲ್ಲ. ಎರಡು, ಮೂರು ವರ್ಷಗಳಿಂದ ಸರಿಯಾಗಿ ಮಳೆ, ಬೆಳೆಯೂ ಇಲ್ಲ’ ಎಂದು ಜಾಹ್ನವಿ ಅಂಗಡಿಯ ಸಹ ಮಾಲೀಕ ಉದಯ ಕೊಪರ್ಡೆ ಬೇಸರ ವ್ಯಕ್ತಪಡಿಸಿದರು.

ಕ್ರೀಡಾಪಟುಗಳಿಗೂ ಕಷ್ಟ
‘ಸ್ಕೇಟಿಂಗ್‌ಗೆ ಸಂಬಂಧಿಸಿದ ಸಾಮಗ್ರಿಗಳ ಬೆಲೆ ₹ 1000ರಿಂದ ₹ 50 ಸಾವಿರದ ತನಕ ಇವೆ. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಅನುಗುಣವಾಗಿ ಅವುಗಳನ್ನು ಖರೀದಿಸಬೇಕಾಗುತ್ತದೆ. ಜಿಎಸ್‌ಟಿ ಬಂದ ಬಳಿಕ ತೆರಿಗೆ ಬಿಸಿ ಸಾಕಷ್ಟು ಹೆಚ್ಚಾಗಿದೆ. ಮೊದಲೆಲ್ಲಾ ವರ್ಷಕ್ಕೆ ಎರಡು, ಮೂರು ಬಾರಿ ಕ್ರೀಡಾ ಪರಿಕರಗಳನ್ನು ಖರೀದಿಸುತ್ತಿದ್ದೆ. ಈಗ ಒಂದು ಸಲ ಖರೀದಿ ಮಾಡುವುದೇ ಕಷ್ಟವಾಗಿದೆ’ ಎಂದು ಸ್ಕೇಟಿಂಗ್‌ ಪಟು ರೋಹನ ಕೋಕಣೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT