ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಸರ್ಕಾರಿ ಶಾಲೆ ರೂಪಿಸಿದ ಶಿಕ್ಷಕ

Last Updated 3 ಸೆಪ್ಟೆಂಬರ್ 2017, 5:43 IST
ಅಕ್ಷರ ಗಾತ್ರ

ಬಸವನಬಾಗೇವಾಡಿ ತಾಲ್ಲೂಕಿನ ತೆಲಗಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡು ಸಮುದಾ ಯದ ಸಹಭಾಗಿತ್ವದೊಂದಿಗೆ ಮಾದರಿ ಶಾಲೆಯಾಗಿ ರೂಪಗೊಳ್ಳುತ್ತಿದೆ.

ಈ ಶಾಲೆಯಲ್ಲಿ ಕಳೆದ ಆರು ವರ್ಷ ಗಳಿಂದ ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ.ಎನ್‌.ಡಿಗ್ಗಾವಿ  ಅವರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಸೇರಿದಂತೆ ಶಾಲಾ ಆವರಣದಲ್ಲಿ ಕೈತೋಟ, ಸುಂದರ ಉದ್ಯಾನ ನಿರ್ಮಾಣ ಮಾಡುವತ್ತ ಗಮನ ಹರಿಸುತ್ತಿರುವ ಇವರು ಮಕ್ಕಳ ಅಚ್ಚುಮೆಚ್ಚಿನ ಮುಖ್ಯಶಿಕ್ಷಕ ಎನಿಸಿಕೊಂಡಿದ್ದಾರೆ. 

ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋ ಭಾವನೆ ಬೆಳೆಸುವ ಉದ್ದೇಶದಿಂದ ದಿನ ಕ್ಕೊಂದು ಬಹುಮಾನ, ಪ್ರತಿಭಾವಂತ ರಿಗೆ ಸನ್ಮಾನ ಎಂಬ ವಿನೂತನ ಕಾರ್ಯ ಕ್ರಮ ಪ್ರತಿದಿನ ಶಾಲಾ ಆರಂಭದ ಮುನ್ನ ನಡೆಯುತ್ತದೆ. ಈ ಕಾರ್ಯಕ್ರಮದಡಿ 25 ರಿಂದ 30 ಚಟುವಟಿಕೆ ಹಾಕಿ ಕೊಳ್ಳಲಾಗುತ್ತದೆ.

ವಿದ್ಯಾರ್ಥಿಯೊಬ್ಬ ತಾನು ಮನೆ ಯಲ್ಲಿ ಸಿದ್ದಪಡಿಸಿಕೊಂಡು ಬಂದಿದ್ದ ಪ್ರಶ್ನೆಗಳನ್ನು ಇನ್ನುಳಿದ ವಿದ್ಯಾರ್ಥಿಗಳಿಗೆ ಕೇಳುತ್ತಾನೆ. ಹೆಚ್ಚು ಪ್ರಶ್ನೆಗೆ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ   ಸ್ಥಳದಲ್ಲೇ ಬಹುಮಾನ ವಿತರಣೆ ಮಾಡಲಾಗುತ್ತದೆ. ಪ್ರಶ್ನೆ ಕೇಳುವ ಮುಂದಿನ ಸರದಿ ಯಾರದು ಎಂಬುವುದನ್ನು ವಿದ್ಯಾ ರ್ಥಿಯೇ ಘೋಷಣೆ ಮಾಡುತ್ತಾನೆ. ಮಕ್ಕಳನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರತಿದಿನ ಪಾಲಕರೇ ಬಹುಮಾನ ತೆಗೆದುಕೊಂಡು ಬಂದು ವಿತರಿಸಿ ಹೋಗುವುದು ಇಲ್ಲಿನ ವಿಶೇಷ. 

ಮಕ್ಕಳ ಮನೆ:  ಗ್ರಾಮೀಣ ಪ್ರದೇಶದಲ್ಲಿ ಪಾಲಕರು ತಮ್ಮ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸುವ ಮುನ್ನ ಅಂಗನ ವಾಡಿಗೆ ಇಲ್ಲವೇ ಖಾಸಗಿ ಶಾಲೆಯಲ್ಲಿನ ಎಲ್‌ಕೆಜಿಗೆ ಕಳುಹಿಸುತ್ತಾರೆ.  ಬಾಲ್ಯ ದಿಂದಲೇ ಮಕ್ಕಳನ್ನು ಸರ್ಕಾರಿ ಶಾಲೆ ಯತ್ತ ಸೆಳೆಯುವ ಉದ್ದೇಶದಿಂದ ಇಲ್ಲಿನ ಮುಖ್ಯಶಿಕ್ಷಕರು ಇಲಾಖೆಯಿಂದ ವಿಶೇಷ ಅನುಮತಿ ಪಡೆದುಕೊಂಡು ಎಲ್‌ಕೆಜಿ, ಯುಕೆಜಿ ಮಾದರಿಯ ಮಕ್ಕಳ ಮನೆ ಎಂಬ ವಿನೂತನ ತರಗತಿ ಆರಂಭಿಸಿದ್ದಾರೆ. ಈ ಮಕ್ಕಳಿಗೆ ಬೋಧಿಸುವ ಶಿಕ್ಷಕರು ಯಾವುದೇ ಫಲಾಪೇಕ್ಷೆ ಬಯಸದೇ ಬೋಧಿಸುತ್ತಾರೆ. ಸದ್ಯ ಮಕ್ಕಳ ಮನೆಯಲ್ಲಿ 35 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.

ಆಶಾ ತರಂಗ: ಮಕ್ಕಳ ಹಾಗೂ ಶಿಕ್ಷಕರ ಸಾಹಿತ್ಯಾಸಕ್ತಿ ಪ್ರೋತ್ಸಾಹಿಸುವುದು, ವಿವಿಧ ಶಾಲೆಗಳಲ್ಲಿ ಅನುಸರಿಸುತ್ತಿರುವ ಕಲಿಕಾ ಪದ್ಧತಿ ಪರಿಚಯಿಸುವುದು ಸೇರಿದಂತೆ ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪೂರಕವಾಗುವ ನಿಟ್ಟಿನಲ್ಲಿ ಆಶಾತರಂಗ ಎಂಬ ತ್ರೈಮಾಸಿಕ ಪತ್ರಿಕೆ ಹೊರತರುತ್ತಿದ್ದಾರೆ. ಈಗಾಗಲೇ ಮೂರು ಸಂಚಿಕೆ ಹೊರ ತರಲಾಗಿದೆ. ವಿಶೇಷವಾಗಿ ತಾಲ್ಲೂಕಿನ ಎಸ್‌ಎಲ್‌ಡಿಪಿ ಶಾಲೆಗಳಿಗೆ ಈ ಪತ್ರಿಕೆ ವಿತರಿಸಲಾಗು ತ್ತಿದೆ. ಶಿಕ್ಷಕ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಶಾಲಾ ಕೈತೋಟ: ಶಾಲಾ ಆವರಣವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಈ ಶಾಲೆಯ ಮುಖ್ಯ ಶಿಕ್ಷಕರು ಕೃಷಿ ಹಾಗೂ ಶ್ರಮದಾನದ ಮಹತ್ವವನ್ನು ತಿಳಿಸಿ ಕೊಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸುಂದರ ಕೈತೋಟ ನಿರ್ಮಾಣ ಮಾಡು ವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಈ ಶಾಲೆಯ ಬಯಲು ಜಾಗೆ ಬಳಸಿಕೊಂಡ ಮಕ್ಕಳು ಮೆಂತೆ, ಪಾಲಕ್‌, ಬದನೆ ಕಾಯಿ, ಬೆಂಡೆ, ಟೋಮೆಟೊ, ಹುಣಸಿ ಸೊಪ್ಪು, ಕೊತ್ತಂಬರಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಸದ್ಯ ಆವ ರಣದಲ್ಲಿ 40 ತೆಂಗಿನ ಸಸಿ ನೆಡಲಾಗು ತ್ತಿದೆ. ಪ್ರತಿಯೊಂದು ಸಸಿಯ ಸಂರಕ್ಷಣೆ ಗಾಗಿ ವಿದ್ಯಾರ್ಥಿಗಳಿಗೆ ದತ್ತು ಯೋಜನೆ ಹಾಕಿಕೊಂಡಿದ್ದಾರೆ.

1 ರಿಂದ 8ನೇ ತರಗತಿವರೆಗಿನ ಈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 493 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಶಾಲೆಯಲ್ಲಿನ 12 ಜನ ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿಗೆ ಅನುಗುಣವಾಗಿ ವಿವಿಧ ಚಟುವಟಿಕೆ ಮಾಡುವ ಮೂಲಕ ಬೋಧನೆಯಲ್ಲಿ ತೊಡಗಿಕೊಳ್ಳುವುದ ರಿಂದ ಈ ಶಾಲೆ ಮಕ್ಕಳ ಹಾಜರಾತಿ ಯಲ್ಲೂ ಮುಂದಿದೆ.

ಈ ಶಾಲೆಯಲ್ಲಿ ನಡೆಯುತ್ತಿರುವ ವಿವಿಧ ಚಟುವಟಿಕೆ ಹಾಗೂ ಯೋಜನೆ ಗಳಿಗೆ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಪಾಲಕರು, ಶಿಕ್ಷಣ ಪ್ರೇಮಿಗಳು ಸೇರಿದಂತೆ ಎನ್‌ಟಿಪಿಸಿ ಸಹಕಾರ ನೀಡುತ್ತಿದೆ ಎಂದು ಮುಖ್ಯಶಿಕ್ಷಕ ಬಸಪ್ಪ ಡಿಗ್ಗಾವಿ  ಹೇಳಿದರು. ಇಲ್ಲಿನ ಮುಖ್ಯಶಿಕ್ಷಕರು ಶಾಲೆಯ ಅಭಿವೃದ್ಧಿಗಾಗಿ ವಿಶೇಷ ಗಮನ ಹರಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆ ಯತ್ತ ಆಕರ್ಷಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಾಕಿಕೊಳ್ಳುವ ಮೂಲಕ ಮಕ್ಕಳ ಹಾಜರಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿ ದ್ದಾರೆ. ಇಲ್ಲಿನ ಸುಂದರ ಕೈತೋಟ ಇತರ ಶಾಲೆಗೆ ಮಾದರಿಯಾಗುವಂತಿದೆ ಎಂದು ಎಸ್‌ಡಿಎಂಇಸಿ ಆಧ್ಯಕ್ಷ  ಚಂದ್ರಶೇಖರ ಲಕ್ಷೆಟ್ಟಿ ಹೇಳಿದರು. 

ಮಕ್ಕಳ ಕಲಿಕಾ ಗುಣಮಟ್ಟ ಹಾಗೂ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮುಖ್ಯ ಶಿಕ್ಷಕ ಬಸಪ್ಪ ಡಿಗ್ಗಾವಿ ಅವರಿಗೆ ಈಗಾಗಲೇ ತಾಲ್ಲೂಕು, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿವೆ. ಅಲ್ಲದೇ ಕನ್ನಡ ಭಾಷಾ ವಿಷಯದಲ್ಲಿ ವಿಶೇಷ ಬೋಧನಾ ತಂತ್ರಜ್ಞಾನ ಅಳವಡಿಸಿ ಕೊಂಡಿರುವುದಕ್ಕೆ ಡಿಎಸ್‌ಇಆರ್‌ಟಿ ಹಾಗೂ ಇಂಟೆಲ್‌ನಿಂದ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT