ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವತಂತ್ರ ಧರ್ಮ ಮಾನ್ಯತೆ: ಹೋರಾಟ ನಿಲ್ಲದು

Last Updated 5 ಸೆಪ್ಟೆಂಬರ್ 2017, 6:35 IST
ಅಕ್ಷರ ಗಾತ್ರ

ಅಫಜಲಪುರ: ‘ಒಂಬತ್ತು ದಶಕಗಳ ಇತಿಹಾಸ ಹೊಂದಿರುವ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪಕ್ಷಭೇದ ಮರೆತು ಒಗ್ಗೂಡಬೇಕು’ ಎಂದು ಬಸವ ಕಲ್ಯಾಣದ ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮಿ ಕರೆ ನೀಡಿದರು.

ಬಸವಮಂಟಪ ಸಭಾಂಗಣದಲ್ಲಿ ಭಾನುವಾರ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಸ್ವತಂತ್ರ ಧರ್ಮ ಮಾನ್ಯತೆ ನೀಡುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಹಾಗೂ ಸರ್ಕಾರದ ಸೌಲಭ್ಯಕ್ಕಾಗಿ ಕಲಬುರ್ಗಿಯಲ್ಲಿ ಹಮ್ಮಿಕೊಂಡಿರುವ ಮಹಾರಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವ ಧರ್ಮದವರು ಭಾಗವಹಿಸಬೇಕು. ವೀರಶೈವ ಮಹಾಸಭೆ ಲಿಂಗಾಯತ ಸಮಾಜದಲ್ಲಿ ಸೇರ್ಪಡೆಯಾಗಿರುವ ವೀರಶೈವ ಪ್ರಾತಿನಿಧಿಕ ಸಂಸ್ಥೆಯೇ ವಿನಃ ಇಡೀ ಸಮಾಜದ ಹಿತರಕ್ಷಕ ಸಂಸ್ಥೆಯಲ್ಲ.  ಮುಖ್ಯಮಂತ್ರಿ ಅವರು ವೀರಶೈವ ಮಹಾಸಭೆಯ ಸಲಹೆ ಮಾನ್ಯ ಮಾಡಬಾರದು’ ಎಂದು ಅವರು ತಿಳಿಸಿದರು.

‘ರಾಜ್ಯ ಸರ್ಕಾರವು ಲಿಂಗಾಯತ ಸಮುದಾಯದ ತಾಳ್ಮೆ ಪರೀಕ್ಷಿಸದೇ ತ್ವರಿತ ಗತಿಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ದಾಖಲೆಗಳನ್ನು ಪರಿಶೀಲಿಸಿ ಮಾನ್ಯತೆ ನೀಡಿ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ಅವರು ಒತ್ತಾಯಿಸಿದರು. ಇದಕ್ಕೂ ಮುನ್ನ ಪಟ್ಟಣದ ವಿವಿಧ ಬಡಾವಣೆಯಲ್ಲಿ ಬಸವ ಅಭಿಮಾನಿಗಳು ಬೈಕ್‌ ರ‍್ಯಾಲಿ ನಡೆಸಿದರು.

ಸಮಾರಂಭದಲ್ಲಿ ಮಾತೆ ಜ್ಞಾನೇಶ್ವರಿ, ಬೀದರ್‌ನ ಮಾತೆ ಸತ್ಯದೇವಿ ಹಾಗೂ ಲಿಂಗಾಯತ ಧರ್ಮ ಸಮನ್ವಯ ಸಮಿತಿ ಸಂಚಾಲಕರಾದ ರವೀಂದ್ರ ಶಾಬಾದಿ, ಸದಾಶಿವ ಮೇತ್ರಿ, ಬಸವರಾಜ ಚಾಂದಕೋಟೆ, ಡಾ.ಸಿ.ವಿ.ಟಕ್ಕಳಕಿ, ಜಮ್ಮನಗೌಡ ಶೀಲವಂತ, ನಾಗರಾಜ ನಿಂಬರಗಿ, ಶಿವಲಿಂಗಪ್ಪ ಗೌಳಿ, ಶಂಕರರಾವ್‌ ಹುಲ್ಲೂರ, ಅಮೃತರಾವ್‌ ಪಾಟೀಲ, ಶರಣಪ್ಪ ಉಡಗಿ, ಭೀಮಗೊಂಡಪ್ಪ ಭೈಗೊಂಡ, ಶಂಕರೆಪ್ಪ ಮಣೂರ, ಶರಣಪ್ಪ ಮಳ್ಳಿ, ಅಶೋಕ ಹೂಗಾರ, ರೇವಣಸಿದ್ಧ ಹೂಗಾರ, ಮಹೇಶ ಆಲೇಗಾಂವ್, ಧಾನಪ್ಪ ನೂಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT