ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ

Last Updated 5 ಸೆಪ್ಟೆಂಬರ್ 2017, 7:09 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಟೋಲ್‌ ಗೇಟ್ ಬಳಿ ಕಾವೇರಿ ನದಿ ಸೇತುವೆ ಹತ್ತಿರ ಭಾನುವಾರ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡು ಜನರ ಗಮನ ಸೆಳೆಯಿತು.
ಕಾವೇರಿ ನದಿಯಲ್ಲಿ ನೀರು ಇಳಿಮುಖಗೊಂಡಿದ್ದು, ಮಧ್ಯಾಹ್ನ 12 ಗಂಟೆಯ ಸುಮಾರಿಗೆ ನದಿ ಮಧ್ಯೆ ಇರುವ ಬಂಡೆ ಮೇಲೆ ಬಿಸಿಲಿಗೆ ಮೈಯೊಡ್ಡಿ ಮಲಗಿದ್ದ ಭಾರೀ ಗಾತ್ರದ ಮೊಸಳೆಯನ್ನು ನೋಡಲು ಸೇತುವೆ ಬಳಿ ಅಪಾರ ಜನರು ಸೇರಿದ್ದರು. ಇದರಿಂದಾಗಿ ಸುಮಾರು 1 ಗಂಟೆ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ಆತಂಕ ಸೃಷ್ಟಿ: ಸೇತುವೆ ಬಳಿ ಸ್ನಾನ ಮಾಡಲು, ಬಟ್ಟೆ ತೊಳೆಯಲು, ಜಾನುವಾರುಗಳಿಗೆ ನೀರು ಕುಡಿಸಲು ಸ್ಥಳೀಯರು ಬರುವುದರಿಂದ ಈಗ ಅವರಲ್ಲಿ ಆತಂಕ ಶುರುವಾಗಿದೆ.

ಇತ್ತೀಚೆಗೆ ಗುಡ್ಡೆಹೊಸೂರು ಬಳಿ, ಮಾರುಕಟ್ಟೆ, ಮುಳ್ಳುಸೋಗೆ , ಕಣಿವೆ ಹತ್ತಿರವೂ ಮೊಸಳೆ ಪ್ರತ್ಯಕ್ಷವಾಗಿ ಭೀತಿಯ ವಾತಾ ವರಣ ನಿರ್ಮಾಣವಾಗಿದ್ದು, ಜನ ಮತ್ತು ಜಾನುವಾರಗಳ ಸುರಕ್ಷೆತೆ ದೃಷ್ಟಿಯಿಂದ ನದಿಯಲ್ಲಿರುವ ಮೊಸಳೆಗಳನ್ನು ಹಿಡಿದು ಬೇರೆ ಕಡೆಗಳಿಗೆ ಬಿಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT