ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ ರ್‍ಯಾಲಿಗೆ ತಡೆ: 8 ಮಂದಿ ಬಂಧನ

Last Updated 6 ಸೆಪ್ಟೆಂಬರ್ 2017, 4:48 IST
ಅಕ್ಷರ ಗಾತ್ರ

ಗದಗ: ‘ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಆಯೋಜಿಸಿದ್ದ ‘ಮಂಗಳೂರು ಚಲೋ’ ರ್‍ಯಾಲಿಗೆ ಪೊಲೀಸರು ಮಂಗಳವಾರ ಗದುಗಿನಲ್ಲಿ ತಡೆಯೊಡ್ಡಿದರು. ಜಿಲ್ಲಾಡಳಿತದ ನಿಷೇಧದ ನಡುವೆಯೂ ಬೈಕ್‌ ರ್‍ಯಾಲಿಗೆ ಅಣಿ ಯಾದ ಎಂಟು ಮಂದಿ ಕಾರ್ಯಕರ್ತ ರನ್ನು ಪೊಲೀಸರು ಬಂಧಿಸಿದರು.

ರ್‍ಯಾಲಿಗೆ ಪೊಲೀಸರು ತಡೆಯೊಡ್ಡು ತ್ತಾರೆ ಎಂಬ ಮಾಹಿತಿ ಇದ್ದಿದ್ದರಿಂದ 15ಕ್ಕೂ ಹೆಚ್ಚು ಕಾರ್ಯಕರ್ತರು ನಿಗದಿತ ಸಮಯಕ್ಕಿಂತ ಮೊದಲೇ ನಗರದಿಂದ ಬೈಕ್‌ ರ್‍ಯಾಲಿಯಲ್ಲಿ ತೆರಳಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಬೈಕ್‌ ರ್‍ಯಾಲಿಗೆ ಅನುಮತಿ ನಿರಾಕರಿಸಿ ನಿರ್ಬಂಧ ಹೇರಿದ್ದವು. ಆದರೆ, ನಿಷೇಧದ ನಡುವೆಯೂ ಬೈಕ್‌ ರ್‍ಯಾಲಿ ನಡೆಸಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ನಗರದ ಸ್ಟೇಶನ್ ರಸ್ತೆಯಲ್ಲಿರುವ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜಮಾಯಿ ಸಿದ್ದರು. ಇನ್ನೇನು ಬೈಕ್‌ ಏರಬೇಕು ಎನ್ನುವಷ್ಟರಲ್ಲಿ ಪೊಲೀಸರು ಅವರನ್ನು ತಡೆದರು. ಹೀಗಾಗಿ, ಬೈಕ್‌ ರ್‍ಯಾಲಿಗೆ ಅಣಿಯಾಗಿದ್ದ ಕಾರ್ಯಕರ್ತರು ಅನಿ ವಾರ್ಯವಾಗಿ ಪೊಲೀಸ್‌ ವಾಹನ ಏರುವಂತಾಯಿತು.

ರ್‍ಯಾಲಿಗೆ ಅವಕಾಶ ನಿರಾಕರಿಸಿದ ಜಿಲ್ಲಾಡಳಿತದ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರ್‍ಯಾಲಿಗೆ ಅವಕಾಶ ನೀಡು ವಂತೆ ಆಗ್ರಹಿಸಿ, ಪೊಲೀಸರ ಜತೆಗೆ ವಾಗ್ವಾದ ನಡೆಸಿದರು. ಕಾಂಗ್ರೆಸ್‌ ಸರ್ಕಾರ ಪ್ರತಿಭಟನೆ ನಡೆಸುವ ಹಕ್ಕನ್ನೂ ದಮನ ಮಾಡುತ್ತಿದೆ ಎಂದರು. 

‘ಮಂಗಳೂರು ಚಲೋ’  ಕಾರ್ಯ ಕ್ರಮದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ನಗರದಲ್ಲಿ ಬಿಗಿ ಭದ್ರತೆ ಕೈಗೊಂಡಿತ್ತು. ಡಿವೈಎಸ್‍ಪಿ ವಿಜಯಕುಮಾರ ತಳವಾರ ನೇತೃತ್ವದಲ್ಲಿ 4 ಸಿಪಿಐ, 8 ಪಿಎಸ್‍ಐ, 80 ಸಿಬ್ಬಂದಿ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 5 ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಬಿಜೆಪಿ ಕಾರ್ಯಕರ್ತರು ಕಾರ್ಯಾ ಲಯದಿಂದ ಕಾರ್ಯಕರ್ತರು ಇಳಿದು ಬರುತ್ತಿದ್ದಂತೆ, ಪೊಲೀಸರು ರಸ್ತೆಗೆ ಎರಡೂ ಬದಿಗಳಲ್ಲಿ ಅಡ್ಡಲಾಗಿ ವಾಹ ನಗಳ್ನು ನಿಲ್ಲಿಸಿ, ರ್‍ಯಾಲಿ ನಡೆಸದಂತೆ ಸೂಚನೆ ನೀಡಿದರು. ಆದರೂ, ಬೈಕ್‌ ಏರಿದ ಕಾರ್ಯಕರ್ತರನ್ನು ತಡೆದು, ವಶಕ್ಕೆ ತೆಗೆದುಕೊಂಡರು. ಕೆಲವರು ಮನೆಗೆ ಹೋಗುತ್ತಿದ್ದೇವೆ ಬಿಡಿ ಎಂದು ಮನವಿ ಮಾಡಿದರೂ ಪೊಲೀಸರು ಅವಕಾಶ ನಿರಾಕರಿಸಿದರು. ಅವರನ್ನು ಬಲವಂತವಾಗಿ ಪೊಲೀಸರು ವಾಹನ ಹತ್ತಿಸಿದರು. ಬಿಜೆಪಿ ಕಾರ್ಯಾಲಯ ಸುತ್ತ ಯುವ ಮೋರ್ಚಾ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರು.

ಮಾಜಿ ಶಾಸಕ ಶ್ರೀಶೈಲಪ್ಪ ಬಿದ ರೂರು, ಯುವ ಮೋರ್ಚಾ ರಾಜ್ಯ ಸಹ ಕಾರ್ಯದರ್ಶಿ ಜಗನರಾಜ್ ಪುರೋಹಿತ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ಮುಖ್ಯಮಂತ್ರಿ ಸಿದ್ದರಾ ಮಯ್ಯ ಪ್ರಜಾಪ್ರಭುತ್ವ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಾಲಯದಲ್ಲಿ ಸಭೆ ನಡೆಸಿದ ಸಂಸದ ಶಿವಕುಮಾರ ಉದಾಸಿ, ನಂತರ ಕೆಳಗಿಳಿದು ಬಂದು ತಮ್ಮ ವಾಹನ ಏರಿ ಬೇರೆ ಕಾರ್ಯ ಕ್ರಮದಲ್ಲಿ ಭಾಗವಹಿಸಲು ತೆರಳಿದರು. ರ್‍ಯಾಲಿಗೆ ತಡೆಯೊಡ್ಡಿದ ಪೊಲೀಸರ ಜತೆಗೆ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ವಾಗ್ವಾದ ನಡೆಸಿದರು.

‘ರ್‍ಯಾಲಿ ತಡೆಯುವ ಮೂಲಕ ರಾಜ್ಯ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆ ಅನುಸರಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರದ ಕ್ರಮ ತುರ್ತು ಪರಿಸ್ಥಿತಿ ನೆನಪಿಸುವಂತಿದೆ’ ಎಂದು ಬಿಜೆಪಿ ಮುಖಂಡ ಎಂ.ಎಂ. ಹಿರೇಮಠ ಆರೋಪಿಸಿದ್ದಾರೆ.

‘ಸಮಾವೇಶದಲ್ಲಿ ಭಾಗವಹಿಸುತ್ತೇವೆ’: ‘ಮಂಗಳೂರು ಚಲೋ’ ಕಾರ್ಯಕ್ರಮಕ್ಕೆ ಅಣಿಯಾಗಿದ್ದ  ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಆದರೂ, ಈ ಸಮಾವೇಶದಲ್ಲಿ ಭಾಗವಹಿಸಲು ಸಾರಿಗೆ ಬಸ್ ಹಾಗೂ ರೈಲುಗಳ ಮೂಲಕ ತೆರಳುತ್ತೇವೆ. ಜಿಲ್ಲೆಯಿಂದ ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಕಾರ್ಯ ಕರ್ತರು ಭಾಗವಹಿಸಿ ಯಶಸ್ಸುಗೊಳಿಸು ತ್ತೇವೆ’ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮಂಗ ಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಆರ್‍ಎಸ್‍ಎಸ್ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕೊಲೆ ಆಗಿವೆ. ಮಂಗಳೂರಿನಲ್ಲಿ ಹಿಂದೂಗಳ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯು ತ್ತಿದ್ದು, ಹಿಂದೂಗಳು ಭಯದ ವಾತಾ ವರಣದಲ್ಲಿ ಬದುಕುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು. ಪಿಎಫ್‍ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕೆಂದು ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.

ಪೊಲೀಸ್‌ ಇಲಾಖೆ ಆಳುವ ಸರ್ಕಾ ರದ ಪ್ರೀತಿಗೆ ಪಾತ್ರರಾಗಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.  ಲಕ್ಕುಂಡಿ ಬಿಜೆಪಿ ಮಂಡಳ ಅಧ್ಯಕ್ಷ ಪ್ರಶಾಂತ ಮೇಟಿ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT