ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಪ್ರಾಥಮಿಕ ಶಾಲಾ ಶಿಕ್ಷಕರ ಮನವಿ

Last Updated 7 ಸೆಪ್ಟೆಂಬರ್ 2017, 6:09 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಅನುದಾನಿತ ಶಾಲೆಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಎಂ.ಎನ್‌.ಚೋರಗಸ್ತಿ ಅವರಿಗೆ  ಸಲ್ಲಿಸಿದರು.

ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ವಿತರಣೆಯಾಗಬೇಕು. ಕರ್ನಾಟಕ ದರ್ಶನ ಪ್ರವಾಸ ಸೌಲಭ್ಯ ದೊರೆಯಬೇಕು. ಜ್ಯೋತಿ ಸಂಜೀವಿನಿ ಯೋಜನೆ, ವೈದ್ಯಕೀಯ ಭತ್ಯೆಯು ಅನುದಾನಿತ ಶಾಲಾ ಶಿಕ್ಷಕರಿಗೆ ಸಿಗುವಂತಾಗಬೇಕು. ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಇರುವಂತೆ  ಮಕ್ಕಳ ಮತ್ತು ಶಿಕ್ಷಕರ ಅನುಪಾತವನ್ನು ಸರಿಪಡಿಸಬೇಕು.

ಹೊಸ ಪಿಂಚಣಿ ಯೋಜನೆಯನ್ನು ಸಂಪೂರ್ಣವಾಗಿ ರದ್ದು ಪಡಿಸಿ ಹಳೆಯ ಪಿಂಚಣಿಯನ್ನು ಯಥಾಪ್ರಕಾರ ಜಾರಿಗೊಳಿಸಬೇಕು. ಕಾಲ್ಪನಿಕ ವೇತನ ಜಾರಿಗೊಳಿಸ ಬೇಕು. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಸಿಗುವ ಸೌಲಭ್ಯಗಳು ಅನುದಾನಿತ ಶಾಲೆಗಳಿಗೆ ಸಿಗುವಂತಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಎಚ್‌.ಎ.ಕುಂದರಗಿ, ಜಗದೀಶ ಸಾಲಹಳ್ಳಿ, ಎಸ.ಕೆ.ಕೊಣ್ಣೂರ, ಕೆ.ವಿ ಲಮಾಣಿ, ಬಿ.ವಿ.ಮಹಾಂತಣ್ಣವರ, ಬಸವರಾಜ ಚಿಂಚೋಳಿ, ಡಿ.ಎಂ. ಹಳಬರ, ಮಲ್ಲಿಕಾರ್ಜುನ ಕುಬಕಡ್ಡಿ, ಎಸ್‌.ಎಸ್‌.ಸಜ್ಜನ, ರಮೇಶ ಅರಸನಾಳ, ಎಚ್‌.ಬಿ.ಬೋಳಿ, ಬಸವರಾಜ ಪಟ್ಟಣಶೆಟ್ಟಿ, ಗುರುನಾಥ ಹೊರ್ತಿ, ಮಂಜುನಾಥ ಮುಳವಾಡ, ಗಿರೀಶ ಪಾಟೀಲ, ಎಸ್‌.ಬಿ.ಬಿರಾದಾರ, ಜಿ.ಪಿ.ಕುಲಕರ್ಣಿ, ಬಸವರಾಜ ಗೊಳಸಂಗಿ, ವೈ.ಜಿ.ಶಿರೋಳ, ಸಿದ್ರಾಮಪ್ಪ ದಂಡಿನ,   ಐ.ಡಿ.ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT