ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂತಕರ ಬಂಧನಕ್ಕೆ ಒಕ್ಕೊರಲ ಒತ್ತಾಯ

ಗೌರಿ ಲಂಕೇಶ್ ಹತ್ಯೆಗೆ ಖಂಡನೆ: ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ; ವಿದ್ಯಾರ್ಥಿಗಳು ಭಾಗಿ
Last Updated 7 ಸೆಪ್ಟೆಂಬರ್ 2017, 6:36 IST
ಅಕ್ಷರ ಗಾತ್ರ

ಗದಗ: ‘ಡಾ.ಎಂ.ಎಂ. ಕಲಬುರ್ಗಿ ಅವರ ಹಂತಕರನ್ನು ಸರ್ಕಾರ ಈಗಾಗಲೇ ಬಂಧಿಸಿ, ಶಿಕ್ಷಕೆಗೆ ಒಳಪಡಿಸಿದ್ದರೆ, ಇಂದು ಗೌರಿ ಲಂಕೇಶ್‌ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗುತ್ತಿರಲಿಲ್ಲ. ಇದು ಪ್ರಜಾಪ್ರಭುತ್ವದ ಸೋಲು’ ಎಂದು ಗದು ಗಿನ ತೋಂಟದಾರ್ಯ ಮಠದ ಸಿದ್ಧ ಲಿಂಗ ಸ್ವಾಮೀಜಿ ಹೇಳಿದರು.

ಡಾ.ಎಂ.ಎಂ. ಕಲಬುರ್ಗಿ, ದಾಬೋ ಲ್ಕರ್‌, ಪನ್ಸಾರೆ ಹತ್ಯೆ ವಿರೋಧಿ ಹೋರಾಟ ಸಮಿತಿ ಬುಧವಾರ ಗದುಗಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರ ವಣಿಗೆಯಲ್ಲಿ ಅವರು ಮಾತನಾಡಿದರು.

‘ಪಿ.ಲಂಕೇಶ್ ಅವರ ಪತ್ರಿಕೆ ಓದಿಯೇ ನನ್ನಂಥ ಸಾಕಷ್ಟು ಸ್ವಾಮೀಜಿಗಳು ಬದಲಾವಣೆ ಕಂಡುಕೊಂಡಿದ್ದಾರೆ. ಈಗ ಅವರ ಮಗಳು ಗೌರಿ ಹತ್ಯೆ ಆಗಿರುವುದು ದಿಗ್ಭ್ರಮೆ ಮೂಡಿಸಿದೆ. ಇದು ಹೇಯ ಕೃತ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಲಬುರ್ಗಿ ಅವರ ಹತ್ಯೆಯಾಗಿ 2 ವರ್ಷವಾದರೂ ಆರೋಪಿಗಳ ಪತ್ತೆ ಆಗ ದಿರುವುದು ತೀವ್ರ ನೋವಿನ ಸಂಗತಿ. ಇದು ತನಿಖೆ ವಿಷಯದಲ್ಲಿ ಸರ್ಕಾರ ತೋರಿಸುತ್ತಿರುವ ನಿರ್ಲಕ್ಷ್ಯವನ್ನು ತೋರಿ ಸುತ್ತದೆ. ಹಂತಕರನ್ನು ಶೀಘ್ರ ಬಂಧಿಸಿ, ಶಿಕ್ಷೆಗೊಳಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಕಲಬುರ್ಗಿ ಹತ್ಯೆಗೂ ಗೌರಿ ಲಂಕೇಶ್‌ ಹತ್ಯೆಗೂ ಹೋಲಿಕೆ ಇದೆ. ಆದರೆ, ತನಿಖೆ ಯಿಂದ ಮಾತ್ರ ಸತ್ಯ ಹೊರಬೀಳಲಿದೆ. ಸ್ವಾಮಿಗಳಾದವರಿಗೆ ಪೂಜೆ ಮಾಡು ವುದು ಮಾತ್ರ ಕೆಲಸವಲ್ಲ, ಜನರಿಗೆ ಬದುಕುವುದನ್ನೂ ಕಲಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರತಿಭಟನಾ ಮೆರವಣಿಗೆ: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯನ್ನು ಖಂಡಿಸಿ ತೋಂಟ ದಾರ್ಯ ಮಠದ ಆವರಣದಿಂದ ಸ್ಟೇಷನ್‌ ರಸ್ತೆ ಮೂಲಕ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆ ಯಿತು. ಮೆರವಣಿಗೆಯಲ್ಲಿ ದಸಂಸ, ಲಿಂಗಾಯತ ಪ್ರಗತಿಶೀಲ ಸಂಘ ಸೇರಿ ವಿವಿಧ ಸಂಘಟನೆಗಳ ಸದಸ್ಯರು, ಶಾಲಾ–ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೆರವಣಿಗೆ ಬಳಿಕ ಗಾಂಧಿ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು.

ಧರಣಿ ವೇದಿಕೆಯಲ್ಲಿ ಮಾತನಾಡಿದ ಮುಂಡರಗಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಸ್ವಾಮೀಜಿ, ‘ಹೆಣ್ಣುಮಕ್ಕಳನ್ನು ದೇವರಾಗಿ ಕಂಡು ಪೂಜಿಸುವ ಈ ದೇಶದಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಇದು ಇಡೀ ಸ್ತ್ರೀ ಕುಲದ ಪ್ರತಿನಿಧಿಯನ್ನೇ ಹತ್ಯೆ ಮಾಡಿದಂತೆ. ಧರ್ಮದ ತಳಹದಿಯ ಮೇಲೆ, ವೈದಿಕ ಪರಂಪರೆ ಕಪಿಮುಷ್ಠಿ ಯಲ್ಲಿ ಆಡಳಿತ ನಡೆಸುವ  ಈ ದೇಶದಲ್ಲಿ ಸ್ವಾತಂತ್ರ್ಯ ಎಲ್ಲಿದೆ, ಪ್ರಜಾಪ್ರಭುತ್ವ ಎಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕರಾವಳಿಯಲ್ಲಿ ನಡೆದಿರುವ ಆರ್‌ಎಸ್‌ಎಸ್‌ ಕಾರ್ಯಕರ್ತರ ಹತ್ಯೆಗೆ ಸಂಬಂಧಿಸಿದಂತೆ ಸದನದಲ್ಲಿ ಧ್ವನಿ ಎತ್ತಿರುವ ಬಿಜೆಪಿ ಸಂಸದರು, ಕಲಬುರ್ಗಿ ಹಂತಕರ ತನಿಖೆಗೆ ಸಂಬಂಧಿಸಿದಂತೆ ಇದುವರೆಗೂ ತುಟಿ ಬಿಚ್ಚಿಲ್ಲ. ಇದು ಅವರ ಮನಸ್ಥಿತಿ ಹೇಗಿರಬಹುದು ಎನ್ನು ವುವುದನ್ನು ಬಿಂಬಿಸುತ್ತದೆ. ಮನುಷ್ಯ ಹತ್ಯೆ ಎಲ್ಲವೂ ಒಂದೇ’ ಎಂದರು.

‘ಬಂದೂಕು ಹಿಡಿದವರನ್ನು ಸಮಾ ಜದ ಮುಖ್ಯವಾಹಿನಿಗೆ ತಂದ ಗೌರಿ ಲಂಕೇಶ್‌ ಅವರಿಗೆ ದುಷ್ಕರ್ಮಿಗಳು ಬಂದೂಕಿನಿಂದ ಉತ್ತರ ನೀಡಿದ್ದಾರೆ. ಈ ರಾಜ್ಯದಲ್ಲಿ ಪೊಲೀಸ್‌ ವ್ಯವಸ್ಥೆ ಇದೆಯೇ ಎನ್ನುವುದರ ಬಗ್ಗೆ ಅನುಮಾನಗಳು ಮೂಡುತ್ತಿವೆ. ಇದುವರೆಗೂ ಕಲಬುರ್ಗಿ ಹಂತಕರ ಪತ್ತೆಯಾಗದಿರುವುದು ಸರ್ಕಾರದ ವೈಫಲ್ಯ ತೋರಿಸುತ್ತದೆ. ಜಾಗತಿಕ ಭಯೋತ್ಪಾದನೆ ಕುರಿತು ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಒಳಗೆ ನಡೆಯುವ ಇಂತಹ ಭಯೋತ್ಪಾದನೆಯ ಕುರಿತು ಮೌನವಾಗಿ ದ್ದಾರೆ’ ಎಂದು ಹೋರಾಟ ಸಮಿತಿ ಬಸವ ರಾಜ ಸೂಳಿಬಾವಿ ಆರೋಪಿಸಿದರು.

ನಿರ್ಣಯ: ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗಳು ‘ನಾನು ಕಲಬುರ್ಗಿ, ನಾನು ಗೌರಿ ಲಂಕೇಶ್‌’ ಎಂದು ಘೋಷಣೆ ಕೂಗುವ ಮೂಲಕ, ಹಂತಕರನ್ನು ಬಂಧಿಸುವವರೆಗೆ ಈ ಹೋರಾಟವನ್ನು ಮುಂದುವರಿಸುತ್ತೇವೆ ಎಂಬ ನಿರ್ಣಯ ಕೈಗೊಂಡರು.

*
ನ್ಯಾಯದಾನ ನಿರಾಕರಿಸಿದರೆ, ನ್ಯಾಯವನ್ನೇ ನಿರಾಕರಿಸಿದಂತೆ. ಸರ್ಕಾರದ ವಿಳಂಬ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಹಂತಕರನ್ನು ಕೂಡಲೇ ಬಂಧಿಸಬೇಕು.
–ಸಿದ್ಧಲಿಂಗ ಸ್ವಾಮೀಜಿ,
ತೋಂಟದಾರ್ಯ ಮಠ, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT